ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕಗಳಿಂದ ಕೊರೊನಾ ವಾಹಕವಾಗಿ ಉಳಿದಿರುವ ಬಾವುಲಿಗಳು

|
Google Oneindia Kannada News

ಬಾವುಲಿಗಳು ದಶಕಗಳಿಂದ ಕೊರೊನಾ ಸೋಂಕಿನ ವಾಹಕಗಳಾಗಿಯೇ ಉಳಿದಿವೆ. ಆದರೆ ಅದನ್ನು ಯಾರೂ ಗಮನಿಸಿರಲಿಲ್ಲ ಎಂದು ಅಧ್ಯಯನವೊಂದರಿಂದ
ತಿಳಿದುಬಂದಿದೆ.

ಹಾರ್ಸ್‌ಶೂ ಬಾವುಲಿಗಳಲ್ಲಿ SARS-coV-2 ವೈರಸ್‌ನ ಮೂಲವಾಗಿದೆ ಎಂಬುದು ಪೆನ್ಸಿಲ್‌ವೇನಿಯಾ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ವೈರಸ್ ಅಂಟಿಸಿಕೊಳ್ಳದೇ ವೈರಸ್ ಹರಡುವ ಬಾವುಲಿಗಳು: ಒಂದು ಸಂಶೋಧನೆವೈರಸ್ ಅಂಟಿಸಿಕೊಳ್ಳದೇ ವೈರಸ್ ಹರಡುವ ಬಾವುಲಿಗಳು: ಒಂದು ಸಂಶೋಧನೆ

ವೈರಸ್ ಎಲ್ಲಿಂದ ಬಂತು ಎಂಬುದು ಎಲ್ಲರಲ್ಲಿರುವ ಪ್ರಶ್ನೆ ಕೊರೊನಾ ಸೋಂಕು 6,54,000 ಮಂದಿಯ ಸಾವಿಗೆ ಕಾರಣವಾಗಿದೆ. ಕಳೆದ ಒಂದು ತಿಂಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಕೆಲವು ಅಧಿಕಾರಿಗಳು ಚೀನಾಕ್ಕೆ ಹೋಗಿ ಪರೀಕ್ಷೆ ನಡೆಸಿದ್ದರು.

New Coronavirus Circulated Unnoticed In Bats For Decades

ಇದಕ್ಕೂ ಮುನ್ನ ಅಮೆರಿಕವು ಕೊರೊನಾ ಸೋಂಕು ಚೀನಾದಿಂದಲೇ ಬಂದಿದ್ದು, ಚೀನಾ ಲ್ಯಾಬ್‌ನಲ್ಲಿಯೇ ಅದರ ಉತ್ಪತ್ತಿಯಾಗಿದೆ. ಇನ್ನೂ ಸ್ವಲ್ಪ ದಿನ ಕಳೆದರೆ ರೋಗಕಾರಕಗಳು ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಎಲ್ಲವನ್ನೂ ಮುಚ್ಚಿಹಾಕಿಬಿಡುತ್ತಾರೆ ಎಂದು ಹೇಳಿದ ಬಳಿಕ ಆರೋಗ್ಯ ಸಂಸ್ಥೆ ತಜ್ಞರನ್ನು ಕಳುಹಿಸಿತ್ತು.

ವೈರಸ್ ವಂಶವನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಮುಖ್ಯವಾಗಿದೆ. ಬಾವುಲಗಳಿಲ್ಲಿನ ಇತರೆ ವೈರಸ್‌ಗಳು ಕೂಡ ಮನುಷ್ಯರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿರಬಹುದಾಗಿದೆ.

ಸಂಶೋಧನಾ ತಂಡವು ವೈರಸ್‌ನ ವಿಕಸನವನ್ನು ಹಾಗೂ ಪುನಸ್ಸಂಯೋಜನೆಯ ಇತಿಹಾಸವನ್ನು ಗಮನಿಸಿದೆ. ಪ್ಯಾಂಗೊಲಿನ್ ಕೊರೊನಾ ವೈರಸ್‌ ಅನ್ನು ಹರಡುವುದಿಲ್ಲ. ಆದರೆ ಸಸ್ತನಿಗಳು ಇದನ್ನು ಹರಡಬಲ್ಲವು ಎಂಬುನ್ನು ವಿವರಿಸಿದ್ದಾರೆ.

English summary
The new coronavirus appears to have circulated unnoticed in bats for decades, scientists found. Horseshoe bats are the most plausible origin of the SARS-CoV-2 pathogen, researchers led by Maciej Boni of Pensylvania State University's Center for Infectious Disease Dynamics said in a study published.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X