ಪಾಕಿಸ್ತಾನಕ್ಕೆ ನವಾಜ್ ಷರೀಫ್ ಮತ್ತೊಮ್ಮೆ ಪ್ರಧಾನಿ ಆಗೋದು ಗ್ಯಾರಂಟಿ?

ಭಾರತದ ವೈರಿ, ಜಗತ್ತಿನ ಪಾಲಿಗೆ ತಲೆನೋವಾಗಿ ಕಾಡುತ್ತಿರುವ ಪಾಕಿಸ್ತಾನದಲ್ಲಿ ಅರಾಜಕತೆ ಅಬ್ಬರಿಸುತ್ತಿದೆ. ಹೀಗಿದ್ದಾಗಲೇ ಪಾಕಿಸ್ತಾನ ಸಂಸತ್ ಇದೀಗ ಚುನಾವಣೆಗೆ ಸಜ್ಜಾಗಿದೆ. ಇದೇ ಸಮಯದಲ್ಲಿ ಪಾಕಿಸ್ತಾನ ಸಾಲು ಸಾಲು ಸಂಚಲನಕ್ಕೆ ಸಾಕ್ಷಿಯಾಗುತ್ತಿದ್ದು, ಮುಂದುವರಿದ ಭಾಗ ಎನ್ನುವಂತೆ ಭ್ರಷ್ಟ ಮಾಜಿ ಪ್ರಧಾನಿಗೆ ಮತ್ತೊಮ್ಮೆ ಪಟ್ಟ ಕಟ್ಟಲು ಸಕಲ ಸಿದ್ಧತೆಗಳು ಸಾಗಿದಂತೆ ಕಾಣುತ್ತಿವೆ.

ಅಂದಹಾಗೆ ಪನಾಮಾ ಪೇಪರ್ಸ್‌ ಹಗರಣ ಕಾರಣ ಸುಮಾರು 14 ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗಿ, ದೇಶ ಬಿಟ್ಟು ಲಂಡನ್ ಸೇರಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಈಗ ಮರಳಿ ಪಾಕ್‌ಗೆ ಬಂದಿದ್ದಾರೆ. ಹೀಗಿದ್ದಾಗಲೇ ಪಾಕ್‌ನಲ್ಲಿ ಚುನಾವಣೆ ಕೂಡ ಬಂದಿದೆ. ಇನ್ನೇನು ಕೆಲವೇ ದಿನದಲ್ಲಿ ಪಾಕಿಸ್ತಾನದಲ್ಲಿ ಎಲೆಕ್ಷನ್ ನಡೆಯಲಿದೆ. ಹೀಗಾಗಿ ಪಾಕಿಸ್ತಾನದ ರಾಜಕಾರಣಿಗಳು ಅಲರ್ಟ್ ಆಗಿ, ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ನವಾಜ್ ಷರೀಫ್‌ಗೆ ಕೂಡ ಎಲೆಕ್ಷನ್ ಗೆಲ್ಲುವ ಹಂಬಲ ಹೆಚ್ಚಾಗಿದೆ. ಹೀಗಿದ್ದಾಗ ನವಾಜ್ ಷರೀಫ್ ವಿರುದ್ಧ ಇದ್ದ ಚುನಾವಣಾ ನಿಷೇಧವನ್ನು ವಾಪಸ್ ಪಡೆಯಲಾಗಿದೆ ಅಂತೆ.

Nawaz Sharif Now Can Contest To Pakistan General Elections

4 ವರ್ಷ ಎಸ್ಕೇಪ್ ಆಗಿದ್ದ ನವಾಜ್

ಹೌದು 4 ವರ್ಷಗಳಿಂದ ಲಂಡನ್‌ ಅಜ್ಞಾತವಾಸದಲ್ಲಿ ಇದ್ದ ನವಾಜ್‌ ಕೆಲ ದಿನಗಳ ಹಿಂದಷ್ಟೇ ಮರಳಿ ಪಾಕಿಸ್ತಾನಕ್ಕೆ ಬಂದಿದ್ದರು. ಹೀಗೆ ನವಾಜ್ ಅಕ್ಟೋಬರ್ 21 ರಂದು ವಿಶೇಷ ವಿಮಾನ ಮೂಲಕ ತಮ್ಮ ತವರು ದೇಶ ಪಾಕಿಸ್ತಾನಕ್ಕೆ ಮರಳಿದ್ದರು. ಆದ್ರೆ ಹೀಗೆ ನವಾಜ್ ಪಾಕಿಸ್ತಾನಕ್ಕೆ ಮರಳಿ ಬಂದ ನಂತರ ಅವರ ಪರವಾಗಿ ತೀರ್ಪುಗಳು ಬರುತ್ತಿವೆ, ಎನ್ನುವ ಆರೋಪ ಇದೆ. ಈ ಆರೋಪಗಳ ನಡುವೆ ಈಗ ನವಾಜ್ ಷರೀಫ್ ಅವರಿಗೆ, ಚುನಾವಣೆಗೆ ಸ್ಪರ್ಧೆ ಮಾಡಲು ಇದ್ದ ಅಡ್ಡಿಯನ್ನೂ ಪಾಕಿಸ್ತಾನ ಕೋರ್ಟ್ ಈಗ ತೊಡೆದು ಹಾಕಿದೆ.

ನವಾಜ್ ಮತ್ತೆ ಪ್ರಧಾನಿ ಆಗೋದು ಫಿಕ್ಸ್

ಇದೀಗ ನವಾಜ್ ಷರೀಫ್ ಅವರಿಗೆ ಸಿಕ್ಕಿರುವ ಅವಕಾಶದ ಪರಿಣಾಮ, ನವಾಜ್ ಷರೀಫ್‌ಗೀಗ ಮತ್ತೆ ಪಾಕಿಸ್ತಾನದ ಪ್ರಧಾನಿ ಆಗುವ ಅವಕಾಶ ಸಿಕ್ಕಿದೆ. ಅಲ್ಲದೆ ನವಾಜ್ ಷರೀಫ್ ಪಕ್ಷವಾದ ಪಾಕಿಸ್ತಾನ್‌ ಮುಸ್ಲಿಂ ಲೀಗ್-ನವಾಜ್‌ ಇದೀಗ ಪಾಕಿಸ್ತಾನ ಚುನಾವಣೆ ಗೆಲ್ಲುವ ಫೇವರಿಟ್ ಪಕ್ಷ ಎನಿಸಿಕೊಂಡಿದೆ. ಹೀಗಿದ್ದಾಗ ನವಾಜ್ ಸ್ಪರ್ಧೆಗೆ ಇದ್ದ ಅಡ್ಡಿ & ಆತಂಕ ದೂರವಾದ ಕಾರಣ ಕುತೂಹಲ ಡಬಲ್ ಆಗಿದೆ.

Nawaz Sharif Now Can Contest To Pakistan General Elections

ಹಂಗಾಮಿ ಪ್ರಧಾನಿಯ ಆಡಳಿತದಲ್ಲಿ ಪಾಕ್

ಪಾಕಿಸ್ತಾನ ಲೋಕಸಭೆಯ ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲು ಕೂಡ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿ 2023ರ ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದ್ರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ, ಆಗಸ್ಟ್‌ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ರು ಪಾಕ್ ಪ್ರಧಾನಿ. ಹೀಗೆ ಆಗಿನ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನ ವಿಸರ್ಜನೆ ಮಾಡಲಾಗಿತ್ತು. ಇದೀಗ ಚುನಾವಣೆಗೂ ಸಕಲ ಸಿದ್ಧತೆ ನಡೆಸಲಾಗಿದ್ದು, ಹಂಗಾಮಿ ಪ್ರಧಾನಿಯಾಗಿ ಅನ್ವರ್ ಉಲ್ ಹಕ್ ಕಾಕರ್ ಅಧಿಕಾರ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+