ಇಮ್ರಾನ್ ಖಾನ್ ಖೇಲ್ ಖತಂ.. ನಾಟಕ್ ಬಂದ್..!
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಇಷ್ಟುದಿನ ಪರೋಕ್ಷವಾಗಿ ಯುದ್ಧ ಸಾರಿದ್ದ ಪಾಕ್ ಕೇಂದ್ರ ಸರ್ಕಾರ ಈಗ ನೇರವಾಗಿ ಬಡಿದಾಟಕ್ಕೆ ನಿಂತಿದೆ. ಇದರ ಮೊದಲ ಭಾಗ ಎನ್ನುವಂತೆ ಪಾಕಿಸ್ತಾನದ ಮತ್ತೊಬ್ಬ ಮಾಜಿ ಪ್ರಧಾನಿ ನವಾಜ್ ಷರೀಫ್ ಮುದ್ದಿನ ಮಗಳು ನೇರವಾಗಿ ಖಾನ್ ವಿರುದ್ಧವೇ ಸಮರ ಸಾರಿ, ಇಮ್ರಾನ್ ಖಾನ್ ಖೇಲ್ ಖತಂ.. ನಾಟಕ್ ಬಂದ್.. ಅಂದಿದ್ದಾಳೆ.
ಪಾಕಿಸ್ತಾನದ ವೆಹಾರಿಯಲ್ಲಿ ಪಿಎಂಎಲ್-ಎನ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ನವಾಜ್ ಷರೀಫ್ ಮಗಳು ಮರ್ಯಮ್ ನವಾಜ್ ನಿಮ್ಮ ಪಕ್ಷದ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಹೀಗಾಗಿ ನಿಮ್ಮ ಆಟ ಇನ್ನು ನಡೆಯಲ್ಲ ಎಂದು ಇಮ್ರಾನ್ ಖಾನ್ ಬೆಂಬಲಿಗರನ್ನ ಕೆಣಕಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಬಣದ ಉಪಾಧ್ಯಕ್ಷೆ ಕೂಡ ಆಗಿರುವ ಮರ್ಯಮ್ ನವಾಜ್ ಮಾತು ಇದೀಗ ಬಿರುಗಾಳಿ ಎಬ್ಬಿಸಿದ್ದು, ಇಮ್ರಾನ್ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ಮಾತಿಗೆ ಬಲ ಸಿಕ್ಕಂತಾಗಿದೆ (Imran Khan Arrest).

ನಾಯಕನೇ ನರಿಯಾಗಿರುವಾಗ ಜನರು..
ಹಾಗೇ ಮಾತಿನ ದಾಳಿ ಮುಂದುವರಿಸಿ, ಇಮ್ರಾನ್ ವಿರುದ್ಧ ಕೆಂಡ ಉಗುಳಿದ್ದಾರೆ ನವಾಜ್ ಪುತ್ರಿ ಮರ್ಯಮ್. ನಾಯಕನೇ ನರಿಯಾಗಿರುವಾಗ ಜನ ಹೇಗೆ ನಿಲ್ಲುತ್ತಾರೆ? ಕಳೆದ ವರ್ಷ ಏಪ್ರಿಲ್‍ನಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡ ಬಗ್ಗೆ ಕೂಡ ಇದೇ ವೇಳೆ ಆಡಿಕೊಂಡಿದ್ದಾರೆ ನವಾಜ್ ಮುದ್ದಿನ ಮಗಳು ಮರ್ಯಮ್. ಈ ಮೂಲಕ ಮೊದಲೇ ಪಾಕಿಸ್ತಾನದಲ್ಲಿ ಹೊತ್ತಿ ಉರಿಯುತ್ತಿದ್ದ ಅಸಮಾಧಾನ ಬೆಂಕಿ ಇನ್ನೊಮ್ಮೆ ಸ್ಫೋಟವಾಗುವ ಮುನ್ಸೂಚನೆ ಕೂಡ ಸಿಕ್ಕಿದೆ.
33 ಖಾನ್ ಬೆಂಬಲಿಗರು ಸೇನೆ ವಶಕ್ಕೆ
ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆ ವೇಳೆ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತುಗಳನ್ನ ನಾಶ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಹೀಗೆ ಅರೆಸ್ಟ್ ಆಗಿದ್ದವರಲ್ಲಿ 33 ಜನರನ್ನು ಪಾಕಿಸ್ತಾನದ ಸೇನೆ ವಶಕ್ಕೆ ಒಪ್ಪಿಸಲಾಗಿದೆ. ಇವರನ್ನು ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿದೆ.

ಏನ್ ಗುರೂ ಇದು ಪಾಕಿಸ್ತಾನದ ಕಥೆ?
ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಖಾನ್ ಲಾಕ್ ಆಗಿಲ್ಲ, ಇದೀಗ ಇಮ್ರಾನ್ ಖಾನ್ ಹೊರ ಹೋಗದಂತೆ ಲಾಕ್ ಮಾಡಲಾಗಿದೆ.
5 ಸಾವಿರ ಕೋಟಿ ರೂ. ನುಂಗಿದ ಇಮ್ರಾನ್?
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಆದ್ರೂ ಇದೇ ಪ್ರಕರಣ ಸಂಬಂಧ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಹೀಗಾಗಿ ದೇಶ ಬಿಟ್ಟು ಈ ವ್ಯಕ್ತಿ ಓಡಿ ಹೋಗ್ತಾರೆ ಎಂದು ಆರೋಪಿಸಿ ಇಮ್ರಾನ್ ಖಾನ್ ಪಾಸ್ಪೋರ್ಟ್ ಲಾಕ್ ಮಾಡಲಾಗಿದೆಯಂತೆ. ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ ಮತ್ತೊಮ್ಮೆ ಇಮ್ರಾನ್ ಖಾನ್ ಕಂಬಿ ಎಣಿಸೋದು ಬಹುತೇಕ ಗ್ಯಾರಂಟಿ ಅಂತಾ ಹೇಳಬಹುದು. ಹೀಗಾಗಿಯೇ ಪಾಕಿಸ್ತಾನ ಸೇನೆ ಮತ್ತು ಪಾಕ್ ಸರ್ಕಾರ ಪರೋಕ್ಷ ತಯಾರಿ ನಡೆಸುತ್ತಿದೆ.












Click it and Unblock the Notifications