Get Updates
Get notified of breaking news, exclusive insights, and must-see stories!

‘ಶುಕ್ರ’ ಗ್ರಹದಲ್ಲಿ ಬದುಕಿವೆಯಾ ಜೀವಿಗಳು..? ಹುಡುಕಾಡಲು ಹೊರಟಿದೆ ‘ನಾಸಾ’ ನೌಕೆ..!

ರಾತ್ರಿ ಆಕಾಶವನ್ನ ದಿಟ್ಟಿಸಿ ನೋಡಿದಾಗ ಲೆಕ್ಕವಿಲ್ಲದಷ್ಟು ನಕ್ಷತ್ರಗಳು ಕಣ್ಣಿಗೆ ಬೀಳುತ್ತವೆ. ಆದರೆ ಫಳಫಳನೆ ಹೊಳೆಯುತ್ತಾ, ಬರಿಗಣ್ಣಿಗೆ ಕಾಣುವ ಕೆಲವೇ ಕೆಲವು ಗ್ರಹಗಳ ಪೈಕಿ ಶುಕ್ರ ಗ್ರಹ ಕೂಡ ಒಂದು. ಈ ಗ್ರಹದ ಆಂತರಿಕ ಕ್ರಿಯೆಯ ಪರಿಣಾಮ ರಾತ್ರಿ ಆಕಾಶದಲ್ಲಿ ಶುಕ್ರ ಗ್ರಹ ಹೊಳೆಯುತ್ತದೆ.

ಬರಿಗಣ್ಣಿನಲ್ಲೂ ಸ್ಪಷ್ಟವಾಗಿ ಕಾಣುತ್ತದೆ ಶುಕ್ರ ಗ್ರಹ. ಆದ್ರೆ ವಿಷಯ ಅದಲ್ಲ, ಭೂಮಿಗೆ ಅತಿ ಸಮೀಪದ ಗ್ರಹ ಎನಿಸಿಕೊಂಡಿರುವ ಶುಕ್ರನ ಮೇಲೆ ಜೀವಿಗಳು ಬದುಕಿವೆಯಾ..? ಹೌದು ಇದು ಶತಮಾನಗಳಷ್ಟು ಹಳೆಯದಾದ ಪ್ರಶ್ನೆ.

ಆದರೆ ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇದೀಗ ಆಧುನಿಕ ಮಾನವ ಈ ಟ್ರಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದಾನೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ನಾಸಾ' ಕೂಡ ಇಂತಹ ಪ್ರಯತ್ನ ಮಾಡುತ್ತಿದ್ದು, ಬರೋಬ್ಬರಿ 30 ವರ್ಷದ ನಂತರ ಶುಕ್ರನ ಅಧ್ಯಯನಕ್ಕೆ ಯೋಜನೆಯೊಂದನ್ನು ಘೋಷಿಸಿದೆ. ಸುಮಾರು 7 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 2 ಯೋಜನೆಗಳನ್ನ ನಾಸಾ ಸಂಸ್ಥೆ ಕೈಗೆತ್ತಿಕೊಂಡಿದೆ. ಆದರೆ ನಾಸಾ ಕೈಗೊಂಡಿರುವ ಶುಕ್ರನ ಯೋಜನೆಗಳು ಸಕ್ಸಸ್ ಕಾಣಲು ಇನ್ನೂ 10 ವರ್ಷ ಕಾಯಬೇಕಿದೆ.

ಶುಕ್ರನ ಕಕ್ಷೆಗೆ ಹಾರಲಿವೆ

ಶುಕ್ರನ ಕಕ್ಷೆಗೆ ಹಾರಲಿವೆ

ಶುಕ್ರ ಗ್ರಹದ ಅಧ್ಯಯನಕ್ಕಾಗಿ ನಾಸಾ ಈಗ ಸಿದ್ಧಪಡಿಸಿರುವ ಯೋಜನೆ ಪ್ರಕಾರ ಒಟ್ಟು 2 ನೌಕೆಗಳು ಶುಕ್ರನ ಕಕ್ಷೆಗೆ ಹಾರಲಿವೆ. ಅದರಲ್ಲಿ ಮೊದಲ ನೌಕೆ 2028ಕ್ಕೆ ಉಡಾವಣೆಯಾಗಲಿದೆ. 2030ಕ್ಕೆ 'ನಾಸಾ' ಮತ್ತೊಂದು ನೌಕೆಯನ್ನ ಉಡಾವಣೆ ಮಾಡಲಿದೆ. ಈ ಎರಡೂ ಯೋಜನೆಗಳು ಶುಕ್ರ ಗ್ರಹದ ಅಧ್ಯಯನ ನಡೆಸುವುದಲ್ಲದೆ ಶುಕ್ರನ ಮೇಲೆ ಜೀವಿಗಳ ಕುರುಹು ಸಿಗುತ್ತಾ ಎಂದು ತಡಕಾಡಲಿವೆ. ಅಕಸ್ಮಾತ್ ಶುಕ್ರನಲ್ಲಿ ಜೀವಿಗಳ ಕುರುಹು ಪತ್ತೆ ಹಚ್ಚಿದ್ದೇ ಆದರೆ, ನಾಸಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಹೀಗಾಗಿ 30 ವರ್ಷಗಳ ಬಳಿಕ ಮಹತ್ವದ ಘೋಷಣೆ ಹೊರಡಿಸಿದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ.

ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ

ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ

ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ಭೂಮಿಯಲ್ಲಿ ಫಾಸ್​ಫೈನ್ ಅನಿಲ ಸೃಷ್ಟಿಯಾಗುತ್ತದೆ

ಭೂಮಿಯಲ್ಲಿ ಫಾಸ್​ಫೈನ್ ಅನಿಲ ಸೃಷ್ಟಿಯಾಗುತ್ತದೆ

ಅಷ್ಟಕ್ಕೂ ಭೂಮಿಯಲ್ಲಿರುವ ಫಾಸ್​ಫೈನ್ ಗ್ಯಾಸ್‌ನ ಗುಣಗಳನ್ನು ಗಮನಿಸಿದರೆ ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಗುತ್ತದೆ. ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್​ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲೂ ಕೂಡ ಈ ಫಾಸ್​ಫೈನ್ ಗ್ಯಾಸ್ ಕಂಡುಬಂದಿದೆ. ಹೀಗಾದರೆ ಶುಕ್ರ ಗ್ರಹದಲ್ಲೂ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ವಿಜ್ಞಾನಿಗಳಲ್ಲಿ ಮೂಡಿದೆ. 3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಫಾಸ್​ಫೈನ್ ಉತ್ಪತ್ತಿಯಾಗುತ್ತದೆ. ಆದರೆ ಮಾನವರಿಗೆ ತುಂಬಾ ವಿಷಕಾರಿಯಾಗಿರುತ್ತದೆ. ಶುಕ್ರನ ಮೇಲೆ ಕೆಲ ತಿಂಗಳ ಹಿಂದೆ ಫಾಸ್​ಫೈನ್ ಅನಿಲ ಕಂಡುಬಂದಿತ್ತು. ಇದಾದ ಬಳಿಕ ಇಡೀ ಜಗತ್ತು ಶುಕ್ರಗ್ರಹದ ಮೇಲೆ ತನ್ನ ದೃಷ್ಟಿ ನೆಟ್ಟಿದೆ.

ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ

ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ

ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಭೂಮಿಯಿಂದ ಶುಕ್ರ ಗ್ರಹ ಸುಮಾರು 140 ಮಿಲಿಯನ್ ಕಿಲೋಮೀಟರ್ ಅಂದರೆ 14 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಅಂತರ ಭಾರಿ ಎನಿಸಿದರೂ, ಸೌರಮಂಡಲದಲ್ಲಿ ಬೇರೆ ಯಾವುದೇ ಗ್ರಹವೂ ಭೂಮಿಗೆ ಇಷ್ಟು ಹತ್ತಿರದಲ್ಲಿ ಇಲ್ಲ. ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಷ್ಟು ಶುಕ್ರ ಗ್ರಹ ಭೂಮಿಗೆ ಹತ್ತಿರದಲ್ಲಿದೆ. ಹೀಗಾಗಿ ಪ್ರಸಕ್ತ ಸಂಶೋಧನಾ ವರದಿ ಖಗೋಳ ವಿಜ್ಞಾನದಲ್ಲೇ ದೊಡ್ಡ ತಿರುವು ಎನ್ನಬಹುದಾಗಿದೆ. ಅಕಸ್ಮಾತ್ ಮಾನವನೂ ಕೂಡ ಶುಕ್ರಗ್ರಹದಲ್ಲಿ ಬದುಕಲು ಸಾಧ್ಯವಾದರೆ, ಭವಿಷ್ಯದಲ್ಲಿ ದೊಡ್ಡ ಜಾದೂ ನಡೆದುಹೋಗಲಿದೆ.

ಶುಕ್ರನಲ್ಲಿ ಜೀವಿಗಳು

ಶುಕ್ರನಲ್ಲಿ ಜೀವಿಗಳು

ಶುಕ್ರನಲ್ಲಿ ಜೀವಿಗಳು ಬದುಕಿದ್ದರೆ ಯಾವ ಆಧಾರದಲ್ಲಿ ಅಸ್ತಿತ್ವದಲ್ಲಿದ್ದಿರಬಹುದು ಎಂಬ ಪ್ರಶ್ನೆ ಸಂಶೋಧಕರನ್ನು ಕಾಡುತ್ತಿದೆ. ಈ ಮಧ್ಯೆ ಶುಕ್ರನ ಮೇಲ್ಮೈನಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ ಎಂದು ಬಹುತೇಕರು ಈಗಲೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಲಕ್ಷಾಂತರ ವರ್ಷಗಳ ಹಿಂದೆ ಶುಕ್ರ ಗ್ರಹದಲ್ಲಿಯೂ ಜೀವ ಜಗತ್ತು ಇದ್ದಿರಬಹುದು. ಆದರೆ 'ಗ್ರೀನ್ ಹೌಸ್ ಎಫೆಕ್ಟ್' ಅಥವಾ ಹಸಿರುಮನೆ ಅನಿಲಗಳ ಪರಿಣಾಮದಿಂದಾಗಿ ಶುಕ್ರ ಗ್ರಹದಲ್ಲಿದ್ದ ಜೀವಜಗತ್ತು ನಾಶವಾಗಿರಬಹುದು ಎಂಬ ಪ್ರತಿಪಾದನೆ ಕೂಡ ವಿಜ್ಞಾನಿಗಳದ್ದಾಗಿದೆ. ಇದಕ್ಕೆಲ್ಲಾ ಉತ್ತರ ಸಿಗಲು ಶುಕ್ರ ಗ್ರಹದ ಮೇಲೆ ಮತ್ತಷ್ಟು ಅಧ್ಯಯನಗಳು ನಡೆಯಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+