ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ!

ನವದೆಹಲಿ, ಜೂನ್ 01 : ಖಗೋಳ ಶಾಸ್ತ್ರಜ್ಞರಲ್ಲಿ ಇಂದಿಗೂ ಕುತೂಹಲದ ಕೇಂದ್ರವಾಗಿರುವ ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿದೆ.

ಸೂರ್ಯಮಂಡಲದ ರಹಸ್ಯ ತಿಳಿಯಲು ಹತ್ತಾರು ವರ್ಷಾಗಳಿಂದ ವಿಜ್ಞಾನಿಗಳು ಹಲವು ರೀತಿಯಲ್ಲಿ ಶೋಧನಾ ಕಾರ್ಯ ನಡೆಸಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೀಗ ನಾಸಾ ನಕ್ಷತ್ರ ಸೂರ್ಯ ಅಧ್ಯಯನಕ್ಕಾಗಿ ಜಗತ್ತಿನ ಮಿಷನ್‌ ಸಿದ್ಧಪಡಿಸಿ ರವಾನಿಸುತ್ತಿದೆ. [ಭಾರತೀಯ ಯುವಕ ವಿನ್ಯಾಗೊಳಿಸಿದ ಉಪಗ್ರಹಕ್ಕೆ ಮರುಳಾದ ನಾಸಾ]

NASA to launch world's first mission to Sun in 2018

60 ವರ್ಷಗಳ ಹಿಂದೆಯೇ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್ ಪಾರ್ಕರ್ ಅವರ ಗೌರವಾರ್ಥ 'ಪಾರ್ಕರ್ ಸೌರ ಶೋಧನಾನೌಕೆ' ಎಂದು ಹೆಸರಿಸಿರುವುದಾಗಿ ನಾಸಾ ತಿಳಿಸಿದೆ. [ಕೊನೆಗೂ ಪತ್ತೆಯಾಯ್ತು ಏಲಿಯನ್ಸ್ ಪುರಾವೆ: NASA ಹೊಸ ಡಿಸ್ಕವರಿ]

2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಈವರೆಗೂ ಕಾಣದ ವಲಯದಲ್ಲಿ ನೌಕೆ ಶೋಧನಾ ಕಾರ್ಯ ನಡೆಸಲಿದೆ ಎಂದು ಪ್ರೊ.ಪಾರ್ಕರ್ ತಿಳಿಸಿದ್ದಾರೆ.

ಸೂರ್ಯ ತನ್ನ ಮೇಲ್ಭಾಕ್ಕಿಂತಲೂ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ. 4.5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+