ಭಾರತೀಯ ಯುವಕ ವಿನ್ಯಾಗೊಳಿಸಿದ ಉಪಗ್ರಹಕ್ಕೆ ಮರುಳಾದ ನಾಸಾ

ಮುಂಬೈ, ಮೇ 16 : ತಮಿಳುನಾಡಿನ ಪಲ್ಲಪಟ್ಟಿಯದ ರಿಫಾತ್ ಶರೂಕ್ ಎನ್ನುವ 18 ವರ್ಷದ ವಿದ್ಯಾರ್ಥಿ ವಿಶ್ವದಲ್ಲಿಯೇ ಅತಿ ಹಗುರ ಉಪಗ್ರಹವನ್ನು ತಯಾರಿಸಿ ವಿಶ್ವದ ಗಮನಸೆಳೆದಿದ್ದಾನೆ.

ಕಲಾಂಸ್ಯಾಟ್ ಎಂದು ನಾಮಕರಣ ಮಾಡಲಾಗಿರುವ ಕೇವಲ 64ಗ್ರಾಂ ತೂಕದ ಉಪಗ್ರಹವನ್ನು ಅಮೆರಿಕಾದ ನಾಸಾ ಜೂನ್ 21ರಂದು ಉಡಾವಣೆ ಮಾಡಲಿದೆ. ಈ ಮೂಲಕ ನಾಸಾ ಇದೇ ಮೊದಲ ಬಾರಿಗೆ ಭಾರತೀಯ ವಿದ್ಯಾರ್ಥಿಯೊಬ್ಬರ ಪ್ರಾಯೋಗಿಕ ಉಪಗ್ರವನ್ನು ಕಕ್ಷೆಗೆ ಉಡಾಯಿಸಲಿದೆ.

ಉಪಗ್ರಹದ ಉಡಾವಣೆ ಪ್ರಕ್ರಿಯೆ 240 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದ್ದು ಬಾಹ್ಯಾಕಾಶದ ಅತಿಸೂಕ್ಷ್ಮ ಗುರುತ್ವಾಕರ್ಷಣೆ ಪರಿಸರದಲ್ಲಿ ಈ ಉಪಗ್ರಹವು 12 ನಿಮಿಷಗಳ ಕಾಲ ಕಾರ್ಯರ್ನಿಹಿಸಲಿದೆ.

Indian teen designs 'KalamSat,' World’s lightest satellite that will be launched by NASA

3ಡಿ ಪ್ರಿಂಟೆಡ್ ಕಾರ್ಬನ್ ಫೈಬರ್ ನ ಕಾರ್ಯಕ್ಷಮತೆಯನ್ನು ಸಾಬೀತು ಪಡಿಸುವುದಷ್ಟೇ ಈ ಉಪಗ್ರಹದ ಉದ್ದೇಶವಾಗಿರಲಿದೆ. ನಾಸಾ 'ಐ ಡೂಡ್ಲ್ ಲರ್ನಿಂಗ್' ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ 'ಕ್ಯೂಬ್ಸ್ ಇನ್ ಸ್ಟೇಸ್' ಎಂಬ ಸ್ಪರ್ಧೆಯಲ್ಲಿ ಈ ಉಪಗ್ರಹ ಆಯ್ಕೆಯಾಗಿದೆ ಎಂದು ರಿಷಾತ್ ತಿಳಿಸಿದ್ದಾರೆ.

64ಗ್ರಾಂ ತೂಕದ ನಾಲ್ಕು ಮೀಟರ್ ಕ್ಯೂಬ್ ಅನ್ನು ಈ ಪ್ರಯೋಗದಲ್ಲಿ ವಿನ್ಯಾಸಗೊಳಿಸುವುದು ಬಹುದೊಡ್ಡ ಸವಾಲಾಗಿತ್ತು.

ಜಗತ್ತಿನ ಎಲ್ಲಡೆಯ ಕ್ಯೂಬ್ ಆಕಾರದ ಉಪಗ್ರಹಗಳ ಕುರಿತು ಬಹಳಷ್ಟು ಅಧ್ಯಯನ ನಡೆಸಿದ ನಂತರ ನನ್ನ ಉಪಗ್ರಹವೇ ಅತಿ ಅಗುರವಾದದು ಎಂದು ದೃಢಪಟ್ಟಿತು ಎಂದು ರಿಷಾತ್ ಸಂತಸ ವ್ಯಕ್ತಪಡಿಸಿದರು.

ಈ ಉಪಗ್ರಹ ನಿರ್ಮಾಣಕ್ಕೆ ಬೇಕಾಗಿರುವ ಬಿಡಿಭಾಗಗಳನ್ನು ವಿದೇಶದಿಂದ ತರಿಸಲಾಗಿದೆ ಎಂದು ಉಪಗ್ರಹ ನಿರ್ಮಾಣದ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+