ಕಲ್ಪನಾ ಚಾವ್ಲಾ ಹೆಸರಿನ 'ಸಿಗ್ನಸ್‌' ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ ನಾಸಾ

ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದ್ದ, 'ಎನ್‌ಜಿ-14 ಸಿಗ್ನಸ್‌' ಎಂಬ ಗಗನನೌಕೆಯನ್ನು ನಾಸಾ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ನಾಸಾದ ವಾಲೋಪ್ಸ್ ಫ್ಲೈಟ್ ಫೆಸಿಲಿಟಿ ಯಿಂದ ಉಡಾವಣೆಯಾದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿನ ಅಮೆರಿಕಾದ ನಾರ್ತ್ರೋಪ್ ಗ್ರಮ್ಮನ್‌ನ ಸಿಗ್ನಸ್ ಬಾಹ್ಯಾಕಾಶ ನೌಕೆ ಇದಾಗಿದೆ. ಈ ಗಗನ ನೌಕೆಯ ಮೂಲಕ ಸರಕು ಮತ್ತು ಸರಬರಾಜುಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸುತ್ತಿದೆ.

ವರ್ಜಿನಿಯಾದಲ್ಲಿ ನಾಸಾಕ್ಕೆ ಸೇರಿದ ವಾಲಪ್ಸ್‌ ಫ್ಲೈಟ್‌ ಫೆಸಿಲಿಟಿಯಿಂದ ಉಡಾವಣೆಗೊಂಡ ಈ ಗಗನನೌಕೆ, ಎರಡು ದಿನಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಈ ನೌಕೆ ಬಾಹ್ಯಾಕಾಶ ಅನ್ವೇಷಣೆ, ಸಂಶೋಧನೆಗೆ ಅಗತ್ಯವಿರುವ ಒಟ್ಟು 3,629 ಕೆ.ಜಿ ತೂಕದ ಸಾಮಗ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊತ್ತೊಯ್ಯಲಿದೆ.

NASA Launched US Northrop Grummans Cygnus spacecraft: Named As Astronaut Kalpana Chawla

ಇನ್ನು ಕಲ್ಪನಾ ಚಾವ್ಲಾ, ನಾಸಾ ಉಡಾವಣೆ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದರು. 2003ರಲ್ಲಿ ಈ ಗಗನನೌಕೆ ಭೂಮಿಗೆ ಮರಳುವಾಗ ಅಪಘಾತಕ್ಕೀಡಾಗಿತ್ತು. ಈ ಘೋರ ದುರಂತದಲ್ಲಿ ಚಾವ್ಲಾ ಸೇರಿದಂತೆ ಇತರೆ ಏಳು ಗಗನಯಾತ್ರಿಗಳು ಸಾವನ್ನಪ್ಪಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+