ನಾಸಾದಿಂದ 'ರಿಯಲ್' ಗ್ರ್ಯಾವಿಟಿ ಅನಾವರಣ
'ಗ್ರ್ಯಾವಿಟಿ' ಅಥವಾ 'ಗುರುತ್ವ' ಎನ್ನುವ ಶಕ್ತಿಯೂ ಮಾನವ ಸಂಶೋಧನೆಯ ಮಾರ್ಗದಲ್ಲಿ ನಿರಂತರವಾಗಿ ಎದುರಾದ ಸವಾಲು. ಗುರುತ್ವ ಎನ್ನುವುದು ಅಗತ್ಯ. ಗುರುತ್ವದಾಚೆ ಸಾಗಿದಾಗಲೇ ಈ ಶಕ್ತಿಯ ಮಹತ್ವ ಅರಿವಾಗಿದೆ. ಅಂಥದೊಂದು ಗುರುತ್ವ ರಹಿತವಾದ ಆವರಣದಲ್ಲಿ ಎದುರಾಗುವ ಸವಾಲುಗಳನ್ನು ಅನುಭವಿಸುವ ಅವಕಾಶ ನೀಡಿರುವುದೇ ಹಾಲಿವುಡ್ ಚಿತ್ರ 'ಗ್ರ್ಯಾವಿಟಿ'.
ಈ ಸಿನಿಮಾವನ್ನು '3ಡಿ'ಯಲ್ಲಿ ನೋಡುವುದೇ ಒಂದು ಅದ್ಭುತ ಅನುಭೂತಿ. ಗುರುತ್ವದಾಚೆಗಿನ ಸವಾಲುಗಳ ರೋಮಾಂಚನವು ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ. ಇಂಥದೊಂದು ವಾಸ್ತವಕ್ಕೆ ತೀರ ಹತ್ತಿರವಾದ ರೋಚಕ ಕಲ್ಪನೆಯನ್ನು ವಾಸ್ತವ ಎನ್ನುವಂತೆ ಕಟ್ಟಿಕೊಡುವ ಆಲ್ಫಾನ್ಸೋ ಕಾರನ್ ನಿರ್ದೇಶನದ 'ಗ್ರ್ಯಾವಿಟಿ' ಚಿತ್ರವು ಬರೋಬ್ಬರಿ 7 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರವು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಶ್ರೇಷ್ಠ ನಿರ್ದೇಶಕ ಸೇರಿದಂತೆ 7 ಪ್ರಶಸ್ತಿಗಳು ಗ್ರ್ಯಾವಿಟಿ ಮಡಿಲು ಸೇರಿದವು.
ಇದು ಚಿತ್ರದ ಕಥೆಯಾದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗ್ರ್ಯಾವಿಟಿ ಚಿತ್ರದ ಆಸ್ಕರ್ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದೆ. ಬಾಹ್ಯಾಕಾಶದಲ್ಲಿ ಇಬ್ಬರು ಗಗನಯಾತ್ರಿಗಳ ಬದುಕನ್ನು ಕಟ್ಟಿಕೊಡುವ ಚಿತ್ರಗಳನ್ನು ನಾಸಾ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದೆ. #realgravity ಎಂಬ ಹ್ಯಾಶ್ ಟ್ಯಾಗ್ ಮೂಲಕ ಸರಣಿಯಾಗಿ ಚಿತ್ರಗಳನ್ನು ಸಾರ್ವಜನಿಕರ ಮುಂದಿಡಲಾಗಿದೆ.
ಬಾಹ್ಯಾಕಾಶದಿಂದ ನೋಡಿದಾಗ ರಾತ್ರಿ ವೇಳೆ ಭೂಮಿ ಹೇಗೆ ಕಾಣುತ್ತದೆ? ಗಗನಯಾತ್ರಿಗಳ ನಡಿಗೆ, ಗುರುತ್ವವಿಲ್ಲದ ಹಾರಾಟ ಸೇರಿದಂತೆ ಅನೇಕ ಗಗನಯಾತ್ರಿಗಳಿಂದ ಬಂದಿರುವ ಶುಭ ಹಾರೈಕೆ ಸಂದೇಶಗಳನ್ನು ನಾಸಾ ಹಂಚಿಕೊಂಡಿದೆ. ಈ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

ಶ್ರೇಷ್ಠ ನಿರ್ದೇಶಕ ಸೇರಿದಂತೆ 7 ಪ್ರಶಸ್ತಿಗಳು ಗ್ರ್ಯಾವಿಟಿ
ಆಲ್ಫಾನ್ಸೋ ಕಾರನ್ ನಿರ್ದೇಶನದ 'ಗ್ರ್ಯಾವಿಟಿ' ಚಿತ್ರವು ಬರೋಬ್ಬರಿ 7 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರವು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಶ್ರೇಷ್ಠ ನಿರ್ದೇಶಕ ಸೇರಿದಂತೆ 7 ಪ್ರಶಸ್ತಿಗಳು ಗ್ರ್ಯಾವಿಟಿ ಮಡಿಲು ಸೇರುವ ಹೊತ್ತಿಗೆ ನಾಸಾ ರಿಯಲ್ ಗ್ರ್ಯಾವಿಟಿ ಬಗ್ಗೆ ಚಿತ್ರಗಳನ್ನು ಹೊರ ಹಾಕಿದೆ.
| Array |
ಇದು ಕಟ್ಟುಕಥೆಯಲ್ಲ ನೈಜ ಚಿತ್ರಗಳು: ನಾಸಾ
ಗ್ರ್ಯಾವಿಟಿ ಚಿತ್ರದಲ್ಲಿನ ಅನುಭವಗಳನ್ನು ಕಾಲ್ಪನಿಕ ಕಥೆ ಎಂದುಕೊಳ್ಳಬೇಡಿ ಇದೆಲ್ಲ ನೈಜ ಬದುಕಿನ ಚಿತ್ರಗಳು
| Array |
ಗ್ರ್ಯಾವಿಟಿಗೆ ಆಸ್ಕರ್ ಬಂದಿದ್ದಕ್ಕೆ ಖುಷಿಯೋ ಖುಷಿ
ಗ್ರ್ಯಾವಿಟಿಗೆ ಆಸ್ಕರ್ ಬಂದಿದ್ದಕ್ಕೆ ಖುಷಿ ಮುಗಿಲು ಮುಟ್ಟಿದೆ ಎಂಬ ಮಾತು ನಿಜವಾಗಿತ್ತು. ಖುಷಿ ಸಂಭ್ರಮ ಅಂಬರ ದಾಟಿ ಬಾಹ್ಯಾಕಾಶದಲ್ಲಿರುವ ನಿವಾಸಿಗಳನ್ನು ತಲುಪಿತ್ತು.
| Array |
ರಿಯಲ್ ಗ್ರ್ಯಾವಿಟಿ ಬಗ್ಗೆ ನಾಸಾ ಟ್ವೀಟ್
ರಿಯಲ್ ಗ್ರ್ಯಾವಿಟಿ ಬಗ್ಗೆ ನಾಸಾ ಟ್ವೀಟ್ ಸರಣಿ ಆರಂಭಿಸಿತು.
| Array |
ಶ್ರೇಷ್ಠ ನಿರ್ದೇಶಕನ ಪ್ರಶಸ್ತಿ ಗ್ರ್ಯಾವಿಟಿಗೆ
ಶ್ರೇಷ್ಠ ನಿರ್ದೇಶಕನ ಪ್ರಶಸ್ತಿ ಗ್ರ್ಯಾವಿಟಿಗೆ ಬಹುಪರಾಕ್ ಎಂದ ನಾಸಾ
| Array |
'ರಿಯಲ್' ಗ್ರ್ಯಾವಿಟಿ, ರಿಯಲ್ ಅರ್ಥ್ ನೋಡಿ
'ರಿಯಲ್' ಗ್ರ್ಯಾವಿಟಿ, ರಿಯಲ್ ಅರ್ಥ್ ನೋಡಿ
| Array |
ಗ್ರ್ಯಾವಿಟಿ ತಂಡಕ್ಕೆ ಶುಭ ಹಾರೈಕೆ ಸಲ್ಲಿಸಿ
ಗ್ರ್ಯಾವಿಟಿ ಚಿತ್ರ ತಂಡಕ್ಕೆ ಶುಭ ಹಾರೈಕೆ ಸಲ್ಲಿಸಿ
| Array |
ಭೂಮಿಗೆ ಬರಲು ಗಗನಯಾನಿಗಳು ತಯಾರು
ಭೂಮಿಗೆ ಬರಲು ಗಗನಯಾನಿಗಳು ತಯಾರು
| Array |
ನಾಸಾ ಗಗನಯಾನಿಗಳಿಂದ ಶುಭ ಹಾರೈಕೆ
ಗ್ರ್ಯಾವಿಟಿ ಚಿತ್ರದ ಛಾಯಾಗ್ರಹಣದ ಬಗ್ಗೆ ಪ್ರಶಂಸೆ, ನಾಸಾ ಗಗನಯಾನಿಗಳಿಂದ ಶುಭ ಹಾರೈಕೆ
| Array |
ರಿಯಲ್ ವರ್ಲ್ಡ್ ನೋಡಿ ಹೇಗಿರುತ್ತೆ
ರಿಯಲ್ ವರ್ಲ್ಡ್ ನೋಡಿ ಹೇಗಿರುತ್ತೆ: ನಾಸಾ












Click it and Unblock the Notifications