Muhammad Yunus Row: ಭಾರತದ ಈಶಾನ್ಯ ರಾಜ್ಯಗಳು ತನ್ನದು ಎಂದು ಪಾಕ್‌ನೊಂದಿಗೆ ಫೋಟೋ ಹಂಚಿಕೊಂಡ ಬಾಂಗ್ಲಾದೇಶ!
Muhammad Yunus Row: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಮತ್ತೊಂದು ಎಡವಟ್ಟು ಮಾಡಿದ್ದು, ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿಲ್ಲ. ಅದರಲ್ಲೂ ಬಾಂಗ್ಲದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಆಯ್ಕೆಯಾದ ಮೇಲೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಪಾಕಿಸ್ತಾನದೊಂದಿಗೆ ಕೈ ಜೋಡಿಸಿರುವ ಬಾಂಗ್ಲಾದೇಶ ಭಾರತದ ರಾಜ್ಯಗಳನ್ನೂ ಬಾಂಗ್ಲದೇಶಕ್ಕೆ ಸೇರಿದೆ ಎನ್ನುವ ಫೋಟೋವನ್ನು ಪಾಕ್‌ನೊಂದಿಗೆ ಹಂಚಿಕೊಂಡಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು 2024 ಮತ್ತು 2025ನೇ ಸಾಲಿನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸಂಬಂಧ ಹಾಳಾಗಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಈಚೆಗೆ ನಡೆದ ಯುದ್ಧದ ಸಂದರ್ಭದಲ್ಲೂ ಬಾಂಗ್ಲಾದೇಶ ಇದೇ ರೀತಿಯ ಹುಚ್ಚುತನವನ್ನು ಪ್ರದರ್ಶಿಸಿತ್ತು. ಭಾರತವೂ ಒಂದೊಮ್ಮೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಭಾರತದ ಮೇಲೆ ದಾಳಿ ಮಾಡಲಿದ್ದೇವೆ. ಈಶಾನ್ಯ ಭಾರತದ ಏಳು ರಾಜ್ಯಗಳನ್ನು ವಶ ಪಡಿಸಿಕೊಳ್ಳುವುದಕ್ಕೆ ಬಾಂಗ್ಲಾದೇಶಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಉದ್ಧಟತನ ಹೇಳಿಕೆಯನ್ನು ಮುಹಮ್ಮದ್ ಯೂನಸ್ ಕೊಟ್ಟಿದ್ದರು.

Muhammad Yunus Row: ಭಾರತ ಭೂಭಾಗ ಹಂಚಿಕೊಂಡ ಬಾಂಗ್ಲಾ!
ಇದೀಗ ಮುಹಮ್ಮದ್ ಯೂನಸ್ ಅವರು, ಭಾರತದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವಾಗಿ ಚಿತ್ರಿಸಿರುವ ಫೋಟೋಗಳನ್ನು ಪಾಕಿಸ್ತಾನಿ ಜನರಲ್‌ಗೆ ಕೊಟ್ಟಿರುವುದು ಭಾರೀ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರು ಈಚೆಗೆ ಬಾಂಗ್ಲಾದ ಢಾಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಯೂನಸ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಭಾರತದ ಪ್ರದೇಶಗಳೂ ಸಹ ಸೇರಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಜಂಟಿ ಫೋಟೋ ಹಾಗೂ ಭಾರತದ ಪ್ರದೇಶಗಳನ್ನು ಸೇರಿಸಿರುವ ಚಿತ್ರಗಳು ವೈರಲ್ ಆಗಿದ್ದು, ಭಾರತೀಯರು ಈ ಬೆಳವಣಿಗೆಗೆ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. 1971 ರ ವಿಮೋಚನಾ ಯುದ್ಧದ ನಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಮುರಿದಿತ್ತು. ಈ ರೀತಿ ನೋಡಿದರೆ ಬಾಂಗ್ಲಾದೇಶವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿತ್ತು.
Chief Adviser Seeks Malaysia’s Support for Bangladesh’s ASEAN Membership
— Chief Adviser of the Government of Bangladesh (@ChiefAdviserGoB) July 27, 2025
DHAKA, Sunday, July 27: Chief Adviser Professor Muhammad Yunus on Sunday renewed his call for Malaysia to support Bangladesh's bid to become a member of the ASEAN.
The Chief Adviser made the call when… pic.twitter.com/RAgGA3wMIh
ಯೂನಸ್ ಅವರು ಪಾಕಿಸ್ತಾನಿ ಜನರಲ್ ಅವರೊಂದಿಗಿನ ಭೇಟಿ ಮಾಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವಾಲಯವು ಯಾವುದೇ ಪ್ರತಿಕ್ರಿಯೆಯನ್ನು ಸಹ ನೀಡಿಲ್ಲ.












Click it and Unblock the Notifications