ಬಿತ್ತು ಬಿತ್ತು ಡ್ರೋನ್ ಬಿತ್ತು, ರಷ್ಯಾ & ಉಕ್ರೇನ್ ಯುದ್ಧ ಮುಗಿಯುವುದು ಯಾವತ್ತು?
ಉಕ್ರೇನ್ ದಿಢೀರ್ ರಷ್ಯಾ ಮೇಲೆ ಡ್ರೋನ್‌ಗಳ ಸುರಿಮಳೆ ಸುರಿಸಿದ್ದು, ರಷ್ಯಾ ರಾಜಧಾನಿಯ ಶಕ್ತಿ ಸಾಮಾರ್ಥ್ಯವೇ ನಲುಗಿ ಹೋಗುವಂತೆ ಆಗಿದೆ. ಅಮೆರಿಕ ನೇತೃತ್ವದಲ್ಲಿ ಒಂದು ಕಡೆ ಈಗ ಕದನ ವಿರಾಮದ ಮಾತುಕತೆ ನಡೆಯುತ್ತಿದೆ, ಆದರೆ ಇದೇ ಸಮಯದಲ್ಲಿ ಎರಡೂ ದೇಶಗಳ ನಡುವೆ ಘನಘೋರ ತಿಕ್ಕಾಟ ನಡೆಯುತ್ತಿದೆ. ಹಾಗೇ ಮತ್ತೊಂದು ಕಡೆ ರಷ್ಯಾ ಸೇನೆಯಿಂದ ಭೀಕರ ಅಸ್ತ್ರಗಳನ್ನು ಬಳಕೆ ಮಾಡಲು ಇದು ಪ್ರಚೋದನೆ ನೀಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬಹುದು ಎಂಬ ಅಂದಾಜು ಸುಳ್ಳಾಗುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಬರೋಬ್ಬರಿ 2 ತಿಂಗಳು ಕಳೆದಿದ್ದರೂ ಯುದ್ಧ ನಿಲ್ಲಿಸುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಯುರೋಪ್ ದೇಶಗಳ ಬುಡವನ್ನೇ ಅಲುಗಾಡಿಸಿರುವ ರಷ್ಯಾ & ಉಕ್ರೇನ್ ಯುದ್ಧ ಬೇಗ ನಿಲ್ಲಬೇಕು ಎಂಬ ಆಗ್ರಹದ ನಡುವೆ ಇಂದು ಉಕ್ರೇನ್ ಸೇನೆ ಮಾಡಬಾರದ ಕೆಲಸವನ್ನು ಮಾಡಿದೆ!

ಉಕ್ರೇನ್ ವಿರುದ್ಧ ರೊಚ್ಚಿಗೆದ್ದ ರಷ್ಯಾ ಸೇನೆ!
ಭಾನುವಾರದ ರಜೆಯಲ್ಲಿ ಆರಾಮಾವಾಗಿ ಇದ್ದ ರಷ್ಯಾಗೆ ಇದೀಗ ಉಕ್ರೇನ್ ಸೇನೆ ಡ್ರೋನ್‌ಗಳ ಮೂಲಕ ಭೀಕರ ಆಘಾತ ನೀಡಿದೆ. ರಷ್ಯಾ ರಾಜಧಾನಿ ಮಾಸ್ಕೋಗೆ ತೈಲ, ವಿದ್ಯುತ್ ಪೂರೈಕೆ ಮಾಡುವ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಇದೀಗ ಉಕ್ರೇನ್ ಸೇನೆ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿದೆ. ದಿಢೀರ್ ಈ ರೀತಿ ಉಕ್ರೇನ್ ಸೇನೆಯಿಂದ ನಡೆದ ಡ್ರೊನ್ ದಾಳಿಗೆ ರಷ್ಯಾ ಕೂಡ ಆಘಾತಕ್ಕೆ ಒಳಗಾಗಿದ್ದು, ಸದ್ಯಕ್ಕೆ ಸಿಗುತ್ತಿರುವ ಮಾಹಿತಿ ಪ್ರಕಾರ ರಷ್ಯಾ ದೇಶದ ಹಲವು ಕಡೆ ಬೆಂಕಿ ಹೊತ್ತಿಕೊಂಡಿದೆ.












Click it and Unblock the Notifications