ಪುಟಿನ್ ಶತ್ರು ಸಾವು ಕನ್ಫರ್ಮ್: ಖಾಸಗಿ ಸೇನೆ ಹೊಣೆ ಯಾರ ಹೆಗಲಿಗೆ?

ಮಾಸ್ಕೋ: ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್‌ನ ಸಾವು ಪಕ್ಕಾ ಆಗಿದೆ. ಈ ಕುರಿತು ಪುಟಿನ್ ಸರ್ಕಾರ ತನಿಖಾ ತಂಡವನ್ನು ರಚಿಸಿತ್ತು, ತನಿಖೆ ಕೈಗೊಂಡಿದ್ದ ತಂಡ ವರದಿ ನೀಡಿದೆ. ಅಲ್ಲದೆ ಪ್ರಿಗೊಝಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟ ವಿಚಾರವನ್ನು ತಿಳಿಸಿದೆ. ಇದರ ಜೊತೆ ಮತ್ತೊಂದು ತಲೆನೋವು ವ್ಲಾದಿಮಿರ್ ಪುಟಿನ್ ಆಡಳಿತಕ್ಕೆ ಇದೀಗ ಎದುರಾಗಿದೆ.

ರಷ್ಯಾ ಖಾಸಗಿ ಸೇನೆ ಆ ದೇಶದ ಪ್ರಮುಖ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ. ಉಕ್ರೇನ್ ಯುದ್ಧದಲ್ಲಿ ಖಾಸಗಿ ಸೇನೆ ಇಲ್ಲದೆ ರಷ್ಯಾ ಗೆಲುವು ಅಸಾಧ್ಯ ಎಂಬ ಪರಿಸ್ಥಿತಿ ಎದುರಾಗಿದೆ. ಈಗ ರಷ್ಯಾ ಬಳಿ ಇರುವ ಯೋಧರು ಸಾಲುತ್ತಿಲ್ಲ, ಹೀಗಾಗಿ ಮತ್ತೊಮ್ಮೆ ಖಾಸಗಿ ಸೇನೆಯ ಸಹಕಾರ ಪಡೆದು ಮುನ್ನುಗ್ಗಲು ತೆರೆಮರೆಯ ಪ್ರಯತ್ನ ಸಾಗಿದೆ. ಆದ್ರೆ ಖಾಸಗಿ ಸೇನೆಯನ್ನ ಕಟ್ಟಿ ಬೆಳೆಸಿದ್ದ ಯೆವ್ಗೆನಿ ಪ್ರಿಗೊಝಿನ್ ಈಗ ಬದುಕುಳಿದಿಲ್ಲ. ಹೀಗಾಗಿ ಹೊಸ ಮುಖ್ಯಸ್ಥನ ನೇಮಕ ಪುಟಿನ್ ಆಡಳಿತಕ್ಕೆ ಕೆಂಡವಾಗಿ ಪರಿಣಮಿಸಿದೆ. ಹಾಗಾದರೆ ಯಾರಿಗೆ ಸಿಗಬಹುದು ಈ ಹುದ್ದೆ?

Moscow probe confirms the death of Wagner Group Chief Yevgeny Prigozhin

ಹಾವು ಸಾಯಬಾರದು, ಕೋಲು ಮುರಿಯಬಾರದು

ರಷ್ಯಾ ಸ್ಥಿತಿ ಹೇಗಾಗಿದೆ ಅಂದ್ರೆ ಹಾವು ಸಾಯಬಾರದು, ಕೋಲು ಕೂಡ ಮುರಿಯಬಾರದು ಎಂಬಂತಾಗಿದೆ. ಹೀಗಾಗಿ ಯಾರ ಕೈಗೆ ರಷ್ಯಾದ ಖಾಸಗಿ ಸೇನೆಯ ಅಧಿಕಾರ ಕೊಡಬೇಕು? ಎಂದು ಚರ್ಚೆ ಶುರುವಾಗಿದೆ. ಯಾಕಂದ್ರೆ ಒಮ್ಮೆ ಇದೇ ಕಾರಣಕ್ಕೆ ರಷ್ಯಾ ಆಂತರಿಕ ದಂಗೆ ಎದುರಿಸಿದೆ. ಈಗ ಮತ್ತೆ ಯೆವ್ಗೆನಿ ಪ್ರಿಗೊಝಿನ್ ರೀತಿಯ ವ್ಯಕ್ತಿಗೆ ಕೊಟ್ಟರೆ, ಮತ್ತೊಮ್ಮೆ ಈ ಖಾಸಗಿ ಸೇನೆ ರಷ್ಯಾ ವಿರುದ್ಧ ಬಂಡಾಯ ಏಳುವುದು ಗ್ಯಾರಂಟಿ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಸೇನಾಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಳೆದು, ತೂಗಿ ತಮ್ಮ ಮಾತು ಕೇಳುವ ವ್ಯಕ್ತಿಗೆ ರಷ್ಯಾ ಖಾಸಗಿ ಸೇನಾ ಪಡೆ ನೇತೃತ್ವ ಕೊಡಲು ಪುಟಿನ್ ಮುಂದಾಗಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ರಷ್ಯಾ ವಿರುದ್ಧ ಅಮೆರಿಕ ಗರಂ!

ಯೆವ್ಗೆನಿ ಪ್ರಿಗೊಝಿನ್ ಸಾವಿನ ವಿಚಾರವಾಗಿ ರಷ್ಯಾ ವಿರುದ್ಧ ಅಮೆರಿಕ ಮತ್ತೆ ಮತ್ತೆ ತನ್ನ ಆಕ್ರೋಶ ಹೊರಹಾಕುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ತಮ್ಮ ಮಾತು ಕೇಳುವವನೇ ಆಗಬೇಕು ಅನ್ನೋದು ಪುಟಿನ್ ಲೆಕ್ಕಾಚಾರ. ಅಲ್ಲದೆ ಪ್ರಿಗೊಝಿನ್‌ನ ಸಾವು ಖಾಸಗಿ ಸೈನಿಕರಲ್ಲಿ ಅನಿಶ್ಚಿತ ವಾತಾವರಣ ಸೃಷ್ಟಿಸಿದೆ. ಇದೆಲ್ಲವನ್ನು ಸರಿ ಮಾಡಿ, ಉಕ್ರೇನ್ ವಿರುದ್ಧ ಯುದ್ಧ ಮುಂದುವರಿಸಲು ರಷ್ಯಾ ರಣತಂತ್ರ ರೂಪಿಸುತ್ತಿದೆ.

ಖಾಸಗಿ ಸೈನಿಕರಿಗೆ 'ದೇಶ ಪ್ರೇಮ'ದ ಪ್ರತಿಜ್ಞೆ!

ವ್ಲಾದಿಮಿರ್ ಪುಟಿನ್ ರಷ್ಯಾದಲ್ಲಿ ಹಿಂದಿನ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ. ರಾಜ್ಯಕ್ಕೆ ನಿಷ್ಠರಾಗಿರುವ ಬಗ್ಗೆ ರಷ್ಯಾ ಖಾಸಗಿ ಸೈನಿಕರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶ ನೀಡಿದ್ದಾರೆ. ಅಲ್ಲದೆ ರಷ್ಯಾಗೆ ಹಾಗೂ ರಷ್ಯಾ ಸೇನೆಗೆ ಕೆಲಸ ಮಾಡುವ ಪ್ರತಿಯೊಬ್ಬ ಸೈನಿಕನು ಈ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಮತ್ತೆ ರಷ್ಯಾಗೆ ಖಾಸಗಿ ಸೈನಿಕರಿಂದ ಯಾವ ಸಮಸ್ಯೆ ಆಗದಂತೆ ಪುಟಿನ್ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Moscow probe confirms the death of Wagner Group Chief Yevgeny Prigozhin

ಒಟ್ನಲ್ಲಿ ಇದೇ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತ ಸಂಬಂಧ ತನಿಖೆ ವರದಿ ಈಗ ಹೊರಬಿದ್ದಿದೆ. ರಷ್ಯಾದ ಟ್ವೆರ್ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿ, ಪ್ರಿಗೊಝಿನ್ & ಆತನ ಜೊತೆಗೆ ಇದ್ದ 10 ಜನ ಮೃತಪಟ್ಟಿದ್ದರು. ಆದರೆ ಪ್ರಿಗೊಝಿನ್ ಸಾವಿನ ಬಗ್ಗೆ ತನಿಖೆ ನಡೆಸಲಾಗಿತ್ತು. ಈಗ ಪ್ರಿಗೊಝಿನ್ ಸಾವಿನ ವಿಚಾರ ಕನ್ಫರ್ಮ್ ಆಗಿದ್ದು, ಮುಂದೆ ಇದು ರಷ್ಯಾ ಖಾಸಗಿ ಸೇನೆ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+