Morocco Earthquake: ಬೃಹತ್ ಕಟ್ಟಡಗಳು ಅಲುಗಾಡಿದ ಭಯಾನಕ ವೀಡಿಯೊಗಳು ವೈರಲ್
ಮೊರಾಕೊದಲ್ಲಿ ಸಂಭವಿಸಿದ ಭಯಾನಕ ಪ್ರಬಲ ಭೂಕಂಪದಿಂದಾಗಿ ಹಲವಾರು ಸಾವು ನೋವುಗಳು ಸಂಭವಿಸಿವೆ. ಎರಡು ಸಾವಿರಕ್ಕೂ ಅಧಿಕ ಜನ ಭೂಕಂಪನದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಆಸ್ತಿ ಹಾನಿ ಸಂಭವಿಸಿದೆ. ಸದ್ಯ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾನುವಾರ ತಡರಾತ್ರಿ ಉತ್ತರ ಆಫ್ರಿಕಾದಲ್ಲಿ ಈ ಭೂಕಂಪ ಸಂಭವಿಸಿದೆ. ಹೆಚ್ಚಾಗಿ ಮೊರಾಕೊದ ಮರ್ಕೆಚ್ ಮತ್ತು ಭೂಕಂಪದ ಕೇಂದ್ರಬಿಂದು ಬಳಿಯ ಐದು ಪ್ರಾಂತ್ಯಗಳಲ್ಲಿ ಹೆಚ್ಚಿನ ಜನ ಬಾಧಿತರಾಗಿದ್ದಾರೆ. ಹಲವಾರು ಜನ ಇನ್ನೂ ಕಾಣೆಯಾಗಿದ್ದು ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರೆದಿದೆ. ಸಾವಿರಾಋಉ ಜನ ಇದರಿಂದ ಗಾಯಗೊಂಡಿದ್ದು ಹಲವರ ಸ್ಥಿತಿ ಚಿಂತಾಜನಕವಾಗಿದೆ.

BREAKING: 6.8 magnitude earthquake strikes Morocco, killing over 300 people.
— Hananya Naftali (@HananyaNaftali) September 9, 2023
My heart goes out to all those affected. Stay strong. 🇲🇦🙏 #Morocco pic.twitter.com/c2u56EA6DJ
6.8 ತೀವ್ರತೆಯ ಭೂಕಂಪ ಅಟ್ಲಾಸ್ ಪರ್ವತಗಳ ಇಳಿಜಾರಿನ ಪ್ರದೇಶಗಳನ್ನು ಸಂಪೂರ್ಣವಾಗಿ ನಾಶಪಡಿಸಿತು. ಜನಪ್ರಿಯ ಪ್ರವಾಸಿ ತಾಣವಾದ ಮರಾಕೇಶ್‌ನ ನೈಋತ್ಯಕ್ಕೆ 72 ಕಿಲೋಮೀಟರ್ (45 ಮೈಲುಗಳು) ಎಂದು ಅಲ್ ಜಜೀರಾ ವರದಿ ಮಾಡಿದೆ. ಭಾನುವಾರ ಇದೇ ಪ್ರದೇಶದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊಗಳಲ್ಲಿ ಜನರು ರಸ್ತೆಗಳಲ್ಲಿ ಮಲಗಿರುವುದನ್ನು ಕಾಣಬಹುದು. ಜೊತೆಗೆ ಸಿಸಿಟಿವಿಯಲ್ಲಿ ಸೆರೆಯಾದ ಹಲವಾರು ದೃಶ್ಯಗಳು ಭೂಕಂಪನದ ತೀವ್ರತೆ ಎಷ್ಟಿತ್ತು ಎನ್ನುವುದನ್ನು ತೋರಿಸುತ್ತವೆ. ವರದಿಗಳ ಪ್ರಕಾರ, ಬಹುಪಾಲು ಸಾವುನೋವುಗಳು ದೂರದ ಪರ್ವತ ಪ್ರದೇಶಗಳಲ್ಲಿ ಸಂಭವಿಸಿವೆ.
🚨🚨🇲🇦Following the 7.1 earthquake striking Morocco, the Kutubiyya Mosque may collapse 😨#Earthquake #Seisme #زلزال pic.twitter.com/SFB0Kqr16u
— AkramPRO (@iamAkramPRO) September 9, 2023
ಮೊರೊಕನ್ ನಾಗರಿಕರು ಭೂಕಂಪದ ನಂತರದ ಪರಿಣಾಮಗಳನ್ನು ತೋರಿಸುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ದೃಶ್ಯಗಳಲ್ಲಿ ಕಟ್ಟಡಗಳು ಭಗ್ನಾವಶೇಷಗಳನ್ನು ಕಾಣಬಹುದು ಮತ್ತು ಧೂಳಾಗಿರುವುದನ್ನು ಕಾಣಬಹುದು. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಮರಕೆಚ್‌ನ ಐತಿಹಾಸಿಕ ಹಳೆಯ ನಗರವನ್ನು ಸುತ್ತುವರೆದಿರುವ ಸಾಂಪ್ರದಾಯಿಕ ಕೆಂಪು ಗೋಡೆಗಳ ಭಾಗಗಳು ಸಹ ಹಾನಿಗೊಳಗಾಗಿವೆ.
A terrifying moment of a collapse captured by a security camera#Maroc #moroccoearthquake #Morocco #earthquakemorocco #earthquake pic.twitter.com/9aeA7XsmoS
— Kinetik (@KinetikNews) September 9, 2023
ಪ್ರವಾಸಿಗರು ಮತ್ತು ಸ್ಥಳೀಯರಿಂದ ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಜನರು ಭಯಭೀತರಾಗಿ ಅತ್ತಿತ್ತ ಓಡಾಡುವುದನ್ನು ಕಾಣಬಹುದು. ಎನ್‌ಬಿಸಿ ನ್ಯೂಸ್ ಪ್ರಕಾರ, ಮೊರಾಕೊದ ರಾಜ ಮೊಹಮ್ಮದ್ VI ಅವರು ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಬದುಕುಳಿದವರನ್ನು ಹುಡುಕಲು ಮತ್ತು ರಕ್ಷಿಸಲು ಮಿಲಿಟರಿ ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಿದ್ದಾರೆ.ಮೂರು ದಿನಗಳ ಶೋಕಾಚರಣೆ ಮತ್ತು ಸಾರ್ವಜನಿಕ ಕಟ್ಟಡಗಳ ಮೇಲೆ ರಾಷ್ಟ್ರಧ್ವಜಗಳನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು ಎಂದು ರಬತ್‌ನಲ್ಲಿರುವ ರಾಯಲ್ ಪ್ಯಾಲೇಸ್ ಶನಿವಾರ ಘೋಷಿಸಿತು.
Prayers🙏 for Morocco
— Suhan Raza (@SuhanRaza4) September 9, 2023
Powerful earthquake with M 6. 8 hit Morocco resulting in deaths of at least 296 people. #Morocco #earthquake #moroccoearthquake #deprem #morocco #maroc #earthquakes #abhisha #G20India2023 #DollarRate pic.twitter.com/dPSsOCPeDY
ಭೂಕಂಪದ ಕೇಂದ್ರದಿಂದ ಸುಮಾರು 350 ಕಿಮೀ ದೂರದಲ್ಲಿರುವ ರಾಜಧಾನಿ ರಬಾತ್‌ನಲ್ಲಿ ಮತ್ತು ಕಾಸಾಬ್ಲಾಂಕಾ ಹಾಗೂ ಎಸ್ಸೌಯಿರಾ ನಗರಗಳಲ್ಲಿಯೂ ಸಹ ಕಂಪನಗಳು ಸಂಭವಿಸಿವೆ ಎಂದು ವರದಿಯಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications