Imran Khan: ತಪ್ಪು ಒಪ್ಪಿಕೊಂಡರಾ ಪಾಕಿಸ್ತಾನ ಮಾಜಿ ಪ್ರಧಾನಿ?

ಭ್ರಷ್ಟಾಚಾರ ಆರೋಪದಡಿ ಈಗಾಗಲೇ ಜೈಲು ಸೇರಿ ಕಂಬಿ ಎಣಿಸುತ್ತಿರುವ ಪಾಕ್ ಮಾಜಿ ಪ್ರಧಾನಿಗೆ ನಡುಕ ಶುರುವಾಗಿದೆ. ಇಮ್ರಾನ್ ಖಾನ್ ಅವ್ರನ್ನ ಜೈಲಿಂದ ಹೊರಗೆ ಬಿಡದಂತೆ ಕಟ್ಟಿಹಾಕಲು, ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಕುತಂತ್ರ ಮಾಡಿವೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪದ ಮಧ್ಯೆ ಇಮ್ರಾನ್ ಖಾನ್ ಅಭಿಮಾನಿಗಳಿಗೆ ದೊಡ್ಡ ಆಘಾತ ಸಿಕ್ಕಿದೆ. ಇಮ್ರಾನ್ ಖಾನ್ ಜೈಲಿಂದ ಹೊರಗೆ ಬರೋದೆ ಅನುಮಾನವಾಗಿದೆ.

ಇಮ್ರಾನ್ ಖಾನ್ ಈಗ ವಿದೇಶಾಂಗ ಇಲಾಖೆಯ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪವನ್ನ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಉಡುಗೊರೆ ಮಾರಾಟದ ಮೂಲಕ 14 ಕೋಟಿ ರೂಪಾಯಿ ಹಣ ಗಳಿಸಿದ್ದ ಆರೋಪ ಎದುರಿಸಿದ್ದ ಇಮ್ರಾನ್‌ಗೆ 3 ಜೈಲು ಶಿಕ್ಷೆ ವಿಧಿಸಲಾಗಿದೆ. ಅದರ ನಡುವೆಯೇ ಅಮೆರಿಕ ರಾಯಭಾರ ಕಚೇರಿ ರಹಸ್ಯ ದಾಖಲೆಗಳ ಸೋರಿಕೆ ಆರೋಪ ಕೂಡ ಇಮ್ರಾನ್ ತಲೆಗೆ ಸುತ್ತಿಕೊಂಡಿತ್ತು. ಸೈಫರ್‌ ಕೇಸ್ ದಾಖಲಾಗಿದ್ದೇ ತಡ ಇಮ್ರಾನ್ ಅಭಿಮಾನಿಗಳಿಗೆ ಭಯ ಶುರುವಾಗಿತ್ತು. ಇದೀಗ ಆ ಭಯ ನಿಜವಾಗಿದ್ದು, ಇಮ್ರಾನ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಕಸ್ಮಾತ್ ಈ ಪ್ರಕರಣದ ಅಡಿ ಇಮ್ರಾನ್‌ಗೆ ಶಿಕ್ಷೆ ಪ್ರಕಟವಾದರೆ ಜೀವನ ಪರ್ಯಂತ ಅವರು ಜೈಲಿನಲ್ಲೇ ನರಳಬೇಕಿದೆ.

More tension erupted in Pakistan over Imran Khan case

ಪ್ರಕರಣದ ಹಿನ್ನೆಲೆ ತಿಳಿಯೋಣ ಬನ್ನಿ

ಖ್ಯಾತ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಏರಿದ್ದರು. ಆದ್ರೆ ಅಲ್ಲಿನ ಸೇನೆ ಹಾಗೂ ಪಾಕಿಸ್ತಾನದ ಐಎಸ್‌ಐ ವಿರೋಧ ಕಟ್ಟಿಕೊಂಡು ಮಾಜಿ ಪ್ರಧಾನಿ ಆಗಿದ್ದಾರೆ ಎಂಬ ಆರೋಪ ಇದೆ. ಇಷ್ಟೆಲ್ಲದರ ನಡುವೆ ಇಮ್ರಾನ್ ಖಾನ್ ತಮ್ಮನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕ ಬೆಂಬಲಿತ ಪಿತೂರಿ ನಡೆದಿತ್ತು ಎಂದು ಆರೋಪಿಸಿದ್ದರು. ಇದೇ ಆರೋಪ ಇದೀಗ ಇಮ್ರಾನ್‌ಗೆ ಮುಳುವಾಗಿದೆ. ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸುವ ಮುನ್ನ ಕೆಲ ದಾಖಲೆಗಳನ್ನು ಇಮ್ರಾನ್ ಪ್ರದರ್ಶನ ಮಾಡಿದ್ದೇ ಸಂಕಷ್ಟ ತಂದೊಡ್ಡಿದೆ.

ಅಧಿಕಾರಿಗಳ ವಿಚಾರಣೆಯಲ್ಲಿ ತಪ್ಪೊಪ್ಪಿಗೆ?

ಸೈಫರ್ ಅಂದರೆ ವರ್ಗೀಕೃತ ರಾಜತಾಂತ್ರಿಕ ದಾಖಲೆ ದುರುಪಯೋಗದಲ್ಲಿ ಇಮ್ರಾನ್‌ ಖಾನ್‌ರ ಉದ್ದೇಶಪೂರ್ವಕ ಭಾಗಿ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆ, ಎಫ್‌ಐಎಯ ಭಯೋತ್ಪಾದನಾ ನಿಗ್ರಹ ವಿಭಾಗ ಕೇಸ್ ದಾಖಲು ಮಾಡಿತ್ತು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಂದರೆ ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಈಗ ಸರಿಯಾಗೇ ಲಾಕ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅಧಿಕೃತ ರಹಸ್ಯ ಕಾಯ್ದೆ 1923ರ ಸೆಕ್ಷನ್ 5 ರ ಅಡಿ ಎಫ್‌ಐಆರ್‌ ದಾಖಲಾಗಿ, ಇಮ್ರಾನ್ ವಿಚಾರಣೆಯು ನಡೆದಿತ್ತು. ವಿಚಾರಣೆ ವೇಳೆ ಇಮ್ರಾನ್ ಇದೀಗ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಒಂದಲ್ಲ.. ಎರಡಲ್ಲ.. 140 ಕೇಸ್!

ಇಮ್ರಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಕೊಲೆ ಯತ್ನವೂ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಹೀಗೆ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ.

More tension erupted in Pakistan over Imran Khan case

ಇಮ್ರಾನ್ ಸ್ಥಿತಿ ಹೇಗಾಗಿದೆ ಎಂದರೆ, ಪಾಕ್ ಸೇನೆ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ. ಜೈಲಿನಲ್ಲಿ ನರಳುವ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ, ಜೈಲಿನಿಂದ ನನ್ನ ಹೇಗಾದರೂ ಹೊರಗಡೆ ಕರೆದುಕೊಂಡು ಹೋಗಿ ಎಂದು ಇಮ್ರಾನ್ ತಮ್ಮ ವಕೀಲರ ಬಳಿ ಬೇಡಿಕೊಂಡಿದ್ದರಂತೆ. ಹೀಗಾಗಿ ಇಮ್ರಾನ್ ಸ್ಥಿತಿ ಬಗ್ಗೆ ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಭಯ ಶುರುವಾಗಿತ್ತು. ಆದರೆ ಇಸ್ಲಾಮಾಬಾದ್ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ಪಾಕ್ ಮಾಜಿ ಪ್ರಧಾನಿಗೆ ಜೈಲಿನಲ್ಲಿ ಒಂದಷ್ಟು ಸೌಲಭ್ಯ ಒದಗಿಸಿದೆ. ಆದರೆ ಈಗ ಮತ್ತೊಂದು ಸಮಸ್ಯೆ ಶುರುವಾಗಿದ್ದು, ಪಾಕಿಸ್ತಾನದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+