ಮೋದಿಯನ್ನು ಹಾಡಿ ಹೊಗಳಿದ ಮುಸ್ಲಿಂ ದೇಶದ ಮಾಧ್ಯಮ

ಜಕಾರ್ತಾ, ಮೇ 30: ವಿಶ್ವದ ಅತ್ಯಂತ ದೊಡ್ಡ ಮುಸ್ಲಿಂ ರಾಷ್ಟ್ರವಾದ ಇಂಡೋನೇಶಿಯಾದ ಮಾಧ್ಯಮಗಳು ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿವೆ.

ಇಲ್ಲಿನ 'ಜಕಾರ್ತಾ ಪೋಸ್ಟ್' ನಲ್ಲಿ ಪ್ರಕಟವಾದ 'ಅನಿಸಿಕೆ'ಯಲ್ಲಿ ವಡೋದರಾ ಮೂಲದ ಲೇಖಕರೊಬ್ಬರು 'ಭಾರತ ಮತ್ತು ಇಂಡೋನೇಶಿಯಾ' ನಡುವಿನ ಸಂಬಂಧವನ್ನು 'ಮೃದು ಮತ್ತು ಕಠಿಣ ಶಕ್ತಿಗಳ ಬಾಂಧವ್ಯ' ಎಂದು ಬಣ್ಣಿಸಿದ್ದಾರೆ.

ನಾಲ್ಕು ವರ್ಷಗಳಿಂದ ಮೋದಿ ಸರ್ಕಾರ ಏಶ್ಯಾದ ಇತರ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕುರಿತು ಈ ಬರಹದಲ್ಲಿ ಉಲ್ಲೇಖಿಸಲಾಗಿದೆ.

Modi visit- India-Indonesia relations interplay of hard & soft power: Jakarta Post piece

ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಶಿಯಾಕ್ಕೆ ತೆರಳಿದ್ದಾರೆ. ನಿನ್ನೆ(ಮೇ 30) ಜಕಾರ್ತಾಕ್ಕೆ ತೆರಳಿರುವ ನರೇಂದ್ರ ಮೋದಿ, ಇಂದು ಇಂಡೋನೇಶಿಯಾ ಅಧ್ಯಕ್ಷ ಜೋಕೋ ವಿಡೊಡೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಮೋದಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ಇಂಡೋನೇಶಿಯಾಕ್ಕೆ ತೆರಳಿದ್ದು ಸಹ ಉಲ್ಲೇಖಾರ್ಹ ಸಂಗತಿ. ಉಭಯ ರಾಷ್ಟ್ರದ ನಾಯಕರು ಇಂದು ಭಾರತ ಮತ್ತು ಇಂಡೋನೇಶಿಯಾ ನಡುವಿನ ಭದ್ರತಾ ಸಹಕಾರದ ಕುರಿತು ಚರ್ಚಿಸುವ ನಿರೀಕ್ಷೆಯಿದೆ.

ಇಂಡೋನೇಶಿಯಾ ಪ್ರವಾಸದ ನಂತರ ಮೋದಿ, ಪಕ್ಕದ ಮಲೇಶಿಯಾ ಮತ್ತು ಸಿಂಗಪುರ ಪ್ರವಾಸವನ್ನು ಸಹ ಕೈಗೊಳ್ಳಲಿದ್ದಾರೆ. ಇಂಡೋನೇಶಿಯಾಕ್ಕೆ ತೆರಳಿದ ಪ್ರಧಾನಿಯವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತವನ್ನು ತುಂಬು ಹೃದಯದಿಂದ ಸ್ವೀಕರಿಸಿದ ಮೋದಿ, 'ನನಗೆ ಇಂಥ ಅದ್ಧೂರಿ ಸ್ವಾಗತ ಕೋರಿದ ಇಂಡೋನೇಶಿಯಾದ ಭಾರತೀಯ ಸಮುದಾಯಕ್ಕೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+