ಮೋದಿ-ಟ್ರಂಪ್ ಭೇಟಿಯಿಂದ ಭಾರತಕ್ಕೆ ಯಾವ ಲಾಭವೂ ಆಗಿಲ್ಲ: ಕಾಂಗ್ರೆಸ್

ನವದೆಹಲಿ, ಜೂನ್ 27: ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಯಾವ ಉಪಯೋಗವೂ ಆಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಇಬ್ಬರು ನಾಯಕರ ಭೇಟಿ ಮತ್ತು ಜಂಟಿ ಹೇಳಿಕೆಗಳ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಈ ಭೇಟಿ ಎರಡು ದೇಶಗಳನ್ನು ಒಗ್ಗೂಡಿಸುವುದಕ್ಕಿಂತ, ವಿಭಜಿಸುತ್ತಿದೆ ಎಂದಿದ್ದಾರೆ.

Modi's US visit is really disappointing: Congress

ಅಮೆರಿಕದಲ್ಲಿರುವ ಭಾರತೀಯರಿಗೆ ದುಸ್ವಪ್ನ ಎನ್ನಿಸಿದ್ದ ಎಚ್ 1 ಬಿ ವೀಸಾ ಬಗ್ಗೆ ಯಾವುದೇ ಚರ್ಚೆ ನಡೆಯದಿರುವುದು ನಿಜಕ್ಕೂ ಅಚ್ಚರಿಯ ವಿಷಯ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಇಸ್ಲಾಮಿಕ್ ಭಯೋತ್ಪಾದನೆ ಎಂಬ ವ್ಯಾಖ್ಯಾನಕ್ಕೂ, ಭಾರತೀಯರು ಎದುರಿಸುತ್ತಿರುವ ಗಡಿಯ ಭಯೋತ್ಪಾದನೆಗೂ ಅಜಗಜಾಂತರವಿದೆ ಎಂದು ತಿವಾರಿ ಹೇಳಿದರು.

ಭಾರತದೊಂದಿಗೆ ವ್ಯವಹಾರ ನಡೆಸುವುದರಿಂದ ಅಮೆರಿಕಕ್ಕೆ ಎಷ್ಟು ಲಾಭವಾಗುತ್ತದೆ ಎಂಬ ಬಗ್ಗೆ ಟ್ರಂಪ್ ಯೋಚಿಸುತ್ತಿದ್ದಾರೆಯೇ ಹೊರತು ಇದರಿಂದ ಭಾರತಕ್ಕೆ ಯಾವ ಲಾಭವೂ ಆಗುವುದಿಲ್ಲ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+