Modi in Russia: ರಷ್ಯಾ ಪ್ರವಾಸದಲ್ಲಿ ಮೋದಿ- ಎರಡು ದೇಶಗಳ ಸ್ನೇಹ ಗಟ್ಟಿಗೊಳಿಸಿದ ನಮೋ!

ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ಸೋಮವಾರ ಮೋದಿ ಮಾಸ್ಕೋ ತಲುಪಿದ್ದು ಇಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. ರಷ್ಯಾ ಉಕ್ರೇನ್‌ಗೆ ಸೇನೆಯನ್ನು ಕಳುಹಿಸಿದ ನಂತರ ಮತ್ತು ಭಾರತದಲ್ಲಿ ಮೂರನೇ ಬಾರಿಗೆ ಸರ್ಕಾರವನ್ನು ರಚಿಸಿದ ನಂತರ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ.

ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಅಧಿಕೃತ ನಿವಾಸದಲ್ಲಿ 'ಖಾಸಗಿ ಔತಣಕೂಟ'ದ ಸಂದರ್ಭದಲ್ಲಿ ಮೋದಿ ಅವರು, ಭಾರತದ ಜನರಿಗೆ ಸೇವೆ ಸಲ್ಲಿಸುವುದು ತಮ್ಮ ಏಕೈಕ ಗುರಿ ಎಂದು ಅವರು ಹೇಳಿದ್ದಾರೆ. ನೀವು ನಿಮ್ಮ ಇಡೀ ಜೀವನವನ್ನು ಭಾರತೀಯ ಜನರ ಸೇವೆಗೆ ಮುಡಿಪಾಗಿಟ್ಟಿದ್ದೀರಿ. ಜನರು ಅದನ್ನು ಅನುಭವಿಸುತ್ತಾರೆ ಎಂದು ರಷ್ಯಾದ ಅಧ್ಯಕ್ಷರು ಮೋದಿಗೆ ತಿಳಿಸಿದರು. ಇದಕ್ಕೆ ಮೋದಿ, ನೀವು ಹೇಳಿದ್ದು ನಿಜ, ನನಗೆ ಒಂದೇ ಒಂದು ಗುರಿ ಇದೆ. ನನ್ನ ದೇಶ, ಭಾರತದ ಜನರು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Modi Russia Tour Narendra Modi strengthened friendship between two countries

ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಪ್ರವಾಸದ ಮೊದಲ ದಿನವೇ ಯಶಸ್ಸು ಲಭಿಸಿದೆ. ವಾಸ್ತವವಾಗಿ, ರಷ್ಯಾ ಉಕ್ರೇನ್‌ನಲ್ಲಿ ರಷ್ಯಾದ ಸೈನ್ಯಕ್ಕಾಗಿ ಹೋರಾಡುತ್ತಿರುವ ಎಲ್ಲಾ ಭಾರತೀಯರಿಗೆ ರಜೆ ನೀಡಲು ಮತ್ತು ಅವರ ವಾಪಸಾತಿಗೆ ಅನುಕೂಲ ಮಾಡಲು ನಿರ್ಧರಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ಸಾಧಿಸಿದ ಪ್ರಮುಖ ಯಶಸ್ಸು ಆಗಿದೆ.

ಮೋದಿ-ಪುಟಿನ್‌ ಭೇಟಿ

ಮಾಸ್ಕೋದ ರಾಷ್ಟ್ರಪತಿ ಭವನದಲ್ಲಿ ಖಾಸಗಿ ಔತಣಕೂಟಕ್ಕಾಗಿ ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಹ್ವಾನಿಸಿದ್ದರು. ಇಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇ-ಕಾರ್ಟ್ ರೈಡ್ ಅನ್ನು ಆನಂದಿಸಿದರು. ವಿಶೇಷವೆಂದರೆ ಇ-ಕಾರ್ಟ್ ಅನ್ನು ಪುಟಿನ್ ಓಡಿಸಿದರು ಮತ್ತು ಪ್ರಧಾನಿ ಮೋದಿ ಸವಾರಿಯನ್ನು ಆನಂದಿಸಿದರು.

ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಆತಿಥ್ಯ ವಹಿಸಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಎಂದು Instagram ನಲ್ಲಿ ಬರೆದಿದ್ದಾರೆ. ಇಂದಿನ ನಮ್ಮ ಮಾತುಕತೆಗಾಗಿ ನಾವು ಸಹ ಕುತೂಹಲದಿಂದ ಕಾಯುತ್ತಿದ್ದೇವೆ, ಇದು ಭಾರತ ಮತ್ತು ರಷ್ಯಾ ನಡುವಿನ ಸ್ನೇಹದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಬರೆದಿದ್ದಾರೆ.

Modi Russia Tour Narendra Modi strengthened friendship between two countries

22ನೇ ಭಾರತ- ರಷ್ಯಾ ವಾರ್ಷಿಕ ಶೃಂಗದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಪುಟಿನ್ ಅವರ ಆಹ್ವಾನದ ಮೇರೆಗೆ ಜುಲೈ 8 ಮತ್ತು 9ರಂದು ಮಾಸ್ಕೋದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.

ಭಾರತ ಹಾಗೂ ರಷ್ಯಾ ಸಂಬಂಧವು ವ್ಯೂಹಾತ್ಮಕ ಪಾಲುದಾರಿಕೆ ಮಟ್ಟದಲ್ಲಿದೆ. ಕ್ರೆಮ್ಲಿನ್‌ನಲ್ಲಿ ಇಬ್ಬರೂ ನಾಯಕರು ಮುಖಾಮುಖಿಯಾಗಿ ಹಾಗೂ ನಿಯೋಗಗಳನ್ನು ಒಳಗೊಂಡ ಮಾತುಕತೆಗಳಲ್ಲಿ ಭಾಗಿಯಾಗಲಿದ್ದಾರೆ.

ಮೋದಿ ಅವರ ರಷ್ಯಾ ಪ್ರವಾಸವನ್ನು ಪಶ್ಚಿಮದ ದೇಶಗಳು ಬಹಳ ಸೂಕ್ಷ್ಮವಾಗಿ ಮತ್ತು ಹೊಟ್ಟೆಕಿಚ್ಚಿನಿಂದ ನೋಡುತ್ತಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ. "ಅವರು ಹೊಟ್ಟೆಯುರಿಯಲ್ಲಿದ್ದಾರೆ- ಅಂದರೆ ಅವರು ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಅವರು ಅಷ್ಟು ನಿಕಟವಾಗಿ ನಿಗಾ ಇರಿಸುತ್ತಿದ್ದಾರೆ ಎಂದರೆ, ಅವರು ಅದಕ್ಕೆ ಭಾರಿ ಮಹತ್ವ ನೀಡಿದ್ದಾರೆ ಎಂದರ್ಥ. ಈ ವಿಚಾರದಲ್ಲಿ ಅವರು ತಪ್ಪು ತಿಳಿದಿಲ್ಲ. ಏಕೆಂದರೆ ಅದಕ್ಕೆ ಅಪಾತ ಮಹತ್ವ ಇದ್ದೇ ಇದೆ" ಎಂದು ಮೋದಿ ಅವರ ರಷ್ಯಾ ಭೇಟಿ ಕುರಿತು ಪಶ್ಚಿಮ ದೇಶಗಳ ಪ್ರತಿಕ್ರಿಯೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+