ಮೋದಿ- ಲೀ ಸೀನ್ ಒಪ್ಪಂದ : ಭದ್ರತೆಯಿಂದ ನಗರಾಭಿವೃದ್ಧಿ ತನಕ
ಸಿಂಗಪುರ, ನ.24: ಮಲೇಷಿಯಾ ಪ್ರವಾಸ ಮುಗಿಸಿಕೊಂಡು ಸಿಂಗಪುರಕ್ಕೆ ಆಗಮಿಸಿದ ಭಾರತದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಪ್ರವಾಸದ ಎರಡನೇ ದಿನದಂದು ಉಭಯ ದೇಶಗಳ ನಡುವೆ 10 ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜೊತೆಗೆ ಉಭಯ ದೇಶಗಳ ಬಾಂಧವ್ಯದ ಪ್ರತೀಕವಾಗಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಿಂಗಪುರದ ಪ್ರಧಾನಿ ಲೀ ಸೀನ್, ಅಧ್ಯಕ್ಷ ಟೋನಿ ಟಾನ್ ಕೆಂಗ್ ಯಾಮ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.ಸೆಲ್ಫಿ ತೆಗೆದುಕೊಂಡರು, ಬೆಳಗಿನ ಉಪಾಹಾರ ಸೇವಿಸಿದರು.
ಸೈಬರ್ ಭದ್ರತೆ, ನಾಗರಿಕ ವಿಮಾನಯಾನ, ನಗರಾಭಿವೃದ್ಧಿ, ರಕ್ಷಣೆ ಸೇರಿದಂತೆ ಸುಮಾರು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಮತ್ತು ಸಿಂಗಪುರ ದೇಶಗಳು ಮಂಗಳವಾರ ಸಹಿ ಹಾಕಿವೆ.
ದ್ವಿಪಕ್ಷೀಯ ಒಪ್ಪಂದಗಳ ಜೊತೆಗೆ ನಗರಾಭಿವೃದ್ಧಿ ಹಾಗೂ ಸಾಂಸ್ಕೃತಿಕ ವಿನಿಮಯ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಸಮುದ್ರ, ಬಾಹ್ಯಾಕಾಶ ಮತ್ತು ಸೈಬರ್ ಜಗತ್ತು ಅಭಿವೃದ್ಧಿಯ ಮೂಲವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸಿಂಗಪುರದ ಹೂಡಿಕೆಗೆ ಅತ್ಯುತ್ತಮ ದೇಶವಾಗಿದೆ. ಭಾರತದಲ್ಲಿ ಈಗ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶವಿದೆ ಎಂದು ಪ್ರಧಾನಿ ಮೋದಿ ಅವರು ಉದ್ಯಮಿಗಳ ಜೊತೆಗೆ ಮಾತನಾಡುತ್ತಾ ಹೇಳಿದರು.

ಉಭಯ ದೇಶಗಳ ಬಾಂಧವ್ಯದ ಪ್ರತೀಕವಾಗಿ
ಮಲೇಷಿಯಾ ಪ್ರವಾಸ ಮುಗಿಸಿಕೊಂಡು ಸಿಂಗಪುರಕ್ಕೆ ಆಗಮಿಸಿದ ಭಾರತದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಪ್ರವಾಸದ ಎರಡನೇ ದಿನದಂದು ಉಭಯ ದೇಶಗಳ ನಡುವೆ 10 ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜೊತೆಗೆ ಉಭಯ ದೇಶಗಳ ಬಾಂಧವ್ಯದ ಪ್ರತೀಕವಾಗಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ.

ಐಟಿಇ ನಲ್ಲಿ ಉಭಯ ದೇಶದ ನಾಯಕರು
ಸೆಂಟ್ರಲ್ ಕ್ಯಾಂಪಸ್ ಆಫ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ (ಐಟಿಇ) ನಲ್ಲಿ ಲೀ ಸೀನ್ ಹಾಗೂ ಮೋದಿ.

ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ ಐ) ಸ್ಮಾರಕಕ್ಕೆ ನಮಿಸಿದ ಪ್ರಧಾನಿ
ಸುಭಾಶ್ ಚಂದ್ರ ಬೋಸ್ ಸ್ಥಾಪನೆಯ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ ಐ) ಸ್ಮಾರಕಕ್ಕೆ ನಮಿಸಿದ ಪ್ರಧಾನಿ ನರೇಂದ್ರ ಮೋದಿ.
|
ಸಿಂಗಪುರ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ
ಸಿಂಗಪುರ ಅಧ್ಯಕ್ಷ ಟೋನಿ ಟಾನ್ ಕೆಂಗ್ ಯಾಮ್ ಅವರ ಜೊತೆ ಪ್ರಧಾನಿ ಮೋದಿ.
|
ಐದು ಬಗೆಯ ಸಹಕಾರ ಒಪ್ಪಂದ
ಐದು ಬಗೆಯ ಸಹಕಾರ ಒಪ್ಪಂದ, ಆರ್ಥಿಕ ಅಭಿವೃದ್ಧಿ ನಮ್ಮ ಗುರಿ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ವಿಕಾಸ್ ಸ್ವರೂಪ್ ಟ್ವೀಟ್.

ಸ್ಮಾರಕ ಕಾಣಲು ಬಂದ ಮೋದಿ
ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ ಐ) ಸ್ಮಾರಕ ಕಾಣಲು ಬಂದ ಮೋದಿ ಅವರಿಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಿಕ್ಕ ಸ್ವಾಗತ
|
ಮೋದಿ- ಲೀ ಸೀನ್ ಸೆಲ್ಫಿ
ನರೇಂದ್ರ ಮೋದಿ- ಲೀ ಸೀನ್ ಸೆಲ್ಫಿ ಚಿತ್ರ
|
ಪ್ರಧಾನಿ ಮೋದಿ ಜೊತೆ ಬ್ರೇಕ್ ಫಾಸ್ಟ್
ಸಿಂಗಪುರದ ಗಣ್ಯರ ಜೊತೆ ಪ್ರಧಾನಿ ಮೋದಿ ಜೊತೆ ಬ್ರೇಕ್ ಫಾಸ್ಟ್












Click it and Unblock the Notifications