ಪ್ಯಾರೀಸ್ : ರಿಕ್ಕಿ ಕೇಜ್ ಆಲ್ಬಂ ಬಿಡುಗಡೆ ಮಾಡಿದ ಮೋದಿ
ಪ್ಯಾರೀಸ್, ಡಿ.01: ಪರಿಸರ ಜಾಗೃತಿ ಮೂಡಿಸುವ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿತೇಜ್ ಅವರ ಮ್ಯೂಸಿಕ್ ಆಲ್ಬಂ 'ಶಾಂತಿ ಸಂಸಾರ" ವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಫ್ರಾಂಕಯಿಸ್ ಹೊಲಾಂಡೆ ಅವರು ಲೋಕಾರ್ಪಣೆ ಮಾಡಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ (ವೈಪರೀತ್ಯ) ಶೃಂಗಸಭೆಯಲ್ಲಿ ಈ ವಿಶಿಷ್ಟ ಆಲ್ಬಂ ಬಿಡುಗಡೆಯಾಗಿದೆ. ಈ ಆಲ್ಬಂನಲ್ಲಿ ಸಂಸ್ಕೃತ ಶ್ಲೋಕಗಳಿದ್ದು, ಈ ಆಲ್ಬಂಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಹಾಲಿವುಡ್ ತಾರೆ ಫ್ರಾನ್ಸಿಸ್ ಫಿಷರ್ ಮತ್ತು ಬಾಫ್ನಾ ಪ್ರಶಸ್ತಿ ವಿಜೇತರಾದ ರೋಸಾವಾ ಅರ್ಕ್ವೆಟ್ ಧ್ವನಿ ನೀಡಿದ್ದಾರೆ. [ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ]

ಕಳೆದ ಸೆಪ್ಟೆಂಬರ್‌ನಲ್ಲಿ ತಾವು ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭ ಅವರಾಡಿದ ಮಾತುಗಳೇ ನನ್ನ ಪತಿ ಈ ಆಲ್ಬಂ ನಿರ್ಮಾಣ ಮಾಡಲು ಪ್ರೇರಣೆಯಾಯಿತು ಎಂದು ವರ್ಷಾ ಕೇಜ್ ಹೇಳಿದ್ದಾರೆ. ಪ್ರಕೃತಿಯನ್ನು ಕೊಂಡಾಡುತ್ತಾ ವಿವಿಧ ಜಗತ್ತಿನ ಸಂಸ್ಕೃತಿಯನ್ನು ಪರಿಚಯಿಸುವ ಈ ಆಲ್ಬಂನಲ್ಲಿ ಸುಮಾರು 300ಕ್ಕೂ ಅಧಿಕ ಸಂಗೀತಗಾರರು ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications