ಶ್ವೇತ ಭವನದ ಹಿರಿಯಣ್ಣನೆದುರು ನಂಗಾನಾಚ್
ವಾಷಿಂಗ್ಟನ್, ಮೇ 24: ಶ್ವೇತ ಭವನದ ಹಿರಿಯಣ್ಣನ ಹಿರಿಮೆಗೆ ಮತ್ತೊಮ್ಮೆ ಕಳಂಕ ಬಂದಿದೆ. ಶ್ವೇತ ಭವನದೆದುರು ಸಾರ್ವಜನಿಕರಲ್ಲೇ ನೋಡನೋಡುತ್ತಿದ್ದಂತೆ ವ್ಯಕ್ತಿಯೊಬ್ಬ ವಿವಸ್ತ್ರನಾಗಿ ನಂಗಾನಾಚ್ ನಲ್ಲಿ ತೊಡಗಿದ್ದಾನೆ.
ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಶುಕ್ರವಾರ ಬೆಳಗ್ಗೆ ಪ್ರತಿಭಟನಾರ್ಥವಾಗಿ ಈ ರೀತಿ ಶ್ವೇತ ಭವನದ ಪ್ರಮುಖ ಗೇಟಿನ ಎದುರು ನಗ್ನನಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಅಮೆರಿಕದ ಗುಪ್ತ ಸೇವಾ ಸಿಬ್ಬಂದಿ (US Secret Service) ತಕ್ಷಣ ಕಾರ್ಯಾಚರಣೆಗಿಳಿದು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶ್ವೇತಭವನಕ್ಕೆ ನೂತನ ಅಧಿಕಾರಿಯನ್ನು ನೇಮಿಸುವ ಸಂಬಂಧ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಘೋಷಣೆ ಮಾಡುವ ಕೆಲವೇ ನಿಮಿಷಗಳ ಮುನ್ನ ಶ್ವೇತಭವನದೆದುರು ಈ ವಿಚಿತ್ರ ಘಟನೆ ನಡೆದಿದೆ.

ಅಮೆರಿಕದ ರಾಜಧಾನಿಯಲ್ಲಿ ನಿನ್ನೆ ವಿಪರೀತವಾದ ಬಿಸಿಲು ಕಾಣಿಸಿಕೊಂಡಿತ್ತು (26 ಡಿಗ್ರಿ ಸೆಂಟಿಗ್ರೇಡ್). ಆ ಬಿಸಿಲಿನಲ್ಲಿ ಶ್ವೇತ ಭವನದ ಪ್ರಮುಖ ಗೇಟಿನ ಎದುರು ಕಾಣಿಸಿಕೊಂಡ ಆ ವ್ಯಕ್ತಿ, ಅಭದ್ರತಾ ಸಿಬ್ಬಂದಿಯತ್ತ ತಿರುಗಿ ಮೈಮುಗಿಯತೊಡಗಿದೆ. ನಂತರ ಎಲ್ಲರೂ ನೋಡನೋಡುತ್ತಿದ್ದಂತೆ ನಗ್ನನಾಗತೊಡಗಿದ.
ಹೀಗೆ ವಿಚಿತ್ರವಾಗಿ ನಡೆದುಕೊಂಡ ವ್ಯಕ್ತಿಯನ್ನು ಶ್ವೇತ ಭವನದ ಅಧಿಕಾರಿಗಳು ಮೈಕೆಲ್ ಬೆಚಾರ್ಡ್ ಎಂದು ಗುರುತಿಸಿದ್ದಾರೆ. ಅಧಿಕಾರಿಗಳು ಎಚ್ಚರಿಕೆ ನೀಡಿದರೂ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದಾಗ ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರಿದು ಅನಿವಾರ್ಯವಾಗಿ ಬಂಧಿಸಿದರು.
ಈ ವಿಚಿತ್ರ ಘಟನೆಗೆ ಸಾಕ್ಷಿಯಾದ ಸಾರ್ವಜನಿಕರು ಇಡೀ ಘಟನಾವಳಿಯನ್ನು ಮುಸಿನಗುತ್ತಾ ಆಸ್ವಾದಿಸತೊಡಗಿದರು. ಕೆಲವರು ಒಂದೇ ಸಮನೆ ಮೊಬೈಲುಗಳಲ್ಲಿ ದೃಶ್ಯಾವಳಿಗಳನ್ನು ಸೆರೆ ಹಿಡಿದರು. ಕೊನೆಗೆ ಶ್ವೇತ ಭವನದ ಅಧಿಕಾರಿಗಳೇ ಘಟನೆಯ ಬಗ್ಗೆ ವಿವರಣೆ ನೀಡಿ, ವ್ಯಕ್ತಿಯ ಫೋಟೋಗಳನ್ನು ಟ್ವಿಟ್ಟರಿಗೆ ಪೋಸ್ಟ್ ಮಾಡಿದ್ದಾರೆ.
Officially summer MT "@whphotos2013: Some guy got naked outside the white house! #drama #whitehouse #thecopsbeathim pic.twitter.com/fpMn77yaXl"
— SKIRT (@talktoskirt) May 23, 2014 











Click it and Unblock the Notifications