ವಾಷಿಂಗ್ಟನ್ ನಿಂದ ಹುಕುಂ, ಭಾರತ ಮೂಲದ ವಲಸಿಗರನ್ನು ಹೊರಗಟ್ಟಿದ ಮೆಕ್ಸಿಕೋ

ಮೆಕ್ಸಿಕೋ, ಅಕ್ಟೋಬರ್ 17: ಅಕ್ರಮವಾಗಿ ಅಮೆರಿಕದೊಳಗೆ ನುಸುಳಲು ಯತ್ನಿಸಿದ ಕಾರಣಕ್ಕೆ ಭಾರತದ ಮೂಲದ ವಲಸಿಗರನ್ನು ಮೆಕ್ಸಿಕೋ ತನ್ನ ಗಡಿಯಿಂದ ಹೊರಕ್ಕೆ ಕಳಿಸಿದ ಘಟನೆ ನಡೆದಿದೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಕಠಿಣ ಕ್ರಮವನ್ನು ಮೆಕ್ಸಿಕೋ ಜರುಗಿಸಿದೆ. ವಾಷಿಂಗ್ಟನ್ ನಿಂದ ಬಂದ ಹುಕುಂನಂತೆ ಅಕ್ರಮವಾಗಿ ಗಡಿಯಲ್ಲಿ ನುಸುಳುವವರ ಮೇಲೆ ನಿಯಂತ್ರಣ ಸಾಧಿಸಲು ಯುಎಸ್ ಮುಂದಾಗಿದೆ.

ರಾಷ್ಟ್ರೀಯ ವಲಸೆ ಸಂಸ್ಥೆ( ಐಎನ್ಎಂ)ಬುಧವಾರದಂದು ನೀಡಿದ ಪ್ರಕಟಣೆಯಂತೆ ಭಾರತ ಮೂಲದ ಸುಮಾರು 311 ಮಂದಿಯನ್ನು ನವದೆಹಲಿಗೆ ವಾಪಸ್ ಕಳಿಸಲಾಗಿದೆ. ಟೊಲುಕಾ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೋಯಿಂಗ್ 747 ಏರ್ ಕ್ರಾಫ್ಟ್ ನಲ್ಲಿ ಎಲ್ಲರನ್ನು ನವದೆಹಲಿಗೆ ಕಳಿಸಲಾಗಿದೆ.

ಓಕ್ಸಾಕಾ, ಬಜಾ ಕ್ಯಾಲಿಫೋರ್ನಿಯಾ, ವೆರಾಕ್ರೂಜ್, ಚಿಯಾಪಾಸ್, ಸೊನೊರಾ, ಮೆಕ್ಸಿಕೋ ಸಿಟಿ, ಡುರಾಂಗೋ ಹಾಗೂ ಟಬಾಸ್ಕೋ ನಗರಗಳಲ್ಲಿ ವಲಸೆ ಅಧಿಕಾರಿಗಳು ಅಕ್ರಮ ವಲಸೆ ಬಗ್ಗೆ ಹೆಚ್ಚಿನ ನಿಗಾವಹಿಸಿ, ಪರಿಶೀಲನೆ ನಡೆಸಿ ವಲಸಿಗರ ಪಟ್ಟಿಯನ್ನು ತಯಾರಿಸಿ ಕ್ರಮ ಕೈಗೊಂಡಿದ್ದಾರೆ.

Mexico Deports 311 Indians Illegally Trying to Cross Over to US After Pressure from Washington

ಅಕ್ರಮ ವಲಸೆ ತಡೆಯದಿದ್ದರೆ ಮೆಕ್ಸಿಕೋ ಮೇಲೆ ಆಮದು ತೆರಿಗೆ ಹೆಚ್ಚಿಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ಘೋಷಿಸಿದ್ದರು. ಮೆಕ್ಸಿಕೋ ಗಡಿ ದಾಟಿ ಅಮೆರಿಕಕ್ಕೆ ನುಸುಳುವವರ ಮೇಲೆ ನಿಯಂತ್ರಣ ಹೊಂದಲು ಅಮೆರಿಕ ಯತ್ನಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+