ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಕಾದಲ್ಲಿ ಕುಸಿದು ಬಿದ್ದ ಕ್ರೇನ್, 100 ಸಾವು

|
Google Oneindia Kannada News

ರಿಯಾದ್, ಸೆಪ್ಟೆಂಬರ್, 12 : ಮೆಕ್ಕಾದ ಮುಖ್ಯ ಮಸೀದಿಯಲ್ಲಿ ಸಂಭವಿಸಿದ ದುರಂತದಲ್ಲಿ 100ಕ್ಕೂ ಅಧಿಕ ಹಜ್ ಯಾತ್ರಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ 184 ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 9 ಮಂದಿ ಭಾರತೀಯ ಯಾತ್ರಿಗಳು.

ಮೆಕ್ಕಾದ ಮುಖ್ಯ ಮಸೀದಿ ಮಸ್ಜಿದ್‌ ಅಲ್‌ ಹರಾಮ್‌ ಪಕ್ಕದಲ್ಲಿ ನಿರ್ಮಾಣ ಕಾಮಗಾರಿಗೆ ಅಳವಡಿಸಲಾಗಿದ್ದ ಕ್ರೇನ್ ಕುಸಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಶುಕ್ರವಾರದಂದು ಭಾರೀ ಸಂಖ್ಯೆಯ ಯಾತ್ರಾರ್ಥಿಗಳು ಮಸೀದಿಗೆ ಆಗಮಿಸುತ್ತಾರೆ. ಘಟನೆ ನಡೆದ ವೇಳೆಯೂ ಮಸೀದಿಯಲ್ಲಿ ಯಾತ್ರರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದರು. [ಯೆಮನ್ : ನಾಪತ್ತೆಯಾಗಿದ್ದ 6 ಭಾರತೀಯರ ಶವ ಪತ್ತೆ]

mecca

ಹಜ್‌ ಯಾತ್ರಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಲೇ ಇದೆ. ಆದ್ದರಿಂದ, ಮಸೀದಿ ಹೊರ ಆವರಣ 4 ಲಕ್ಷ ಚದರ ಮೀ. ಪ್ರದೇಶದಲ್ಲಿ ವಿಸ್ತರಣೆ ಕಾಮಗಾರಿ ನಡೆಯುತ್ತುತ್ತು. ಇದಕ್ಕಾಗಿ ಮಸೀದಿ ಸುತ್ತ ಹಲವಾರು ಕ್ರೇನ್‌ಗಳನ್ನು ಅಳವಡಿಸಲಾಗಿತ್ತು.

ಭಾರೀ ಮಳೆ ಮತ್ತು ಕ್ರೇನ್‌ಗೆ ಸಿಡಿಲು ಬಡಿದಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 100ಕ್ಕೂ ಹೆಚ್ಚು ಯಾತ್ರಿಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದರೆ, 184 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

English summary
At least 100 people died and more than 180 people were injured when a crane collapsed in Mecca in Saudi Arabia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X