China Rain: ಭಾರಿ ಮಳೆಗೆ ತತ್ತರಿಸಿದ ಚೀನಾ: ರಾಜಧಾನಿ ಜನರೇ ಅತಂತ್ರ!
ಬೀಜಿಂಗ್: ಪ್ರಕೃತಿ ಮಾತೆ ಮುನಿದರೆ ಎಂತಹ ಬಲಶಾಲಿ ದೇಶವೇ ಆದರೂ ನಲುಗುವುದು ಗ್ಯಾರಂಟಿ. ಅದರಲ್ಲೂ ಜಗತ್ತಿನ 2ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿರುವ ಚೀನಾ ಪ್ರಕೃತಿ ವಿಕೋಪಕ್ಕೆ ನಲುಗಿದೆ. ಚೀನಾದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಅಕ್ಷರಶಃ ನರಕ ಸೃಷ್ಟಿಸಿದೆ. ಹಾಗಾದರೆ ಈವರೆಗೆ ಚೀನಾ ಪ್ರವಾಹಕ್ಕೆ ಬಲಿಯಾದ ಜನರ ಸಂಖ್ಯೆ ಎಷ್ಟು? ಬನ್ನಿ ತಿಳಿಯೋಣ.
ಹೌದು ಚೀನಾ ರಾಜಧಾನಿ ಬೀಜಿಂಗ್ ಸುತ್ತಮುತ್ತ ಹಲವು ದಿನದಿಂದ ಭಾರಿ ಮಳೆ ಬೀಳುತ್ತಿದೆ. ಪರಿಣಾಮ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಇನ್ನೂ ಹಲವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಘಟನೆ ಬಗ್ಗೆ ಚೀನಾದ ಸ್ಥಳೀಯ ಸರ್ಕಾರಿ ಮಾಧ್ಯಮಗಳು ವರದಿ ಮಾಡಿದೆ. ಪ್ರವಾಹದ ಭೀಕರತೆ ಹೇಗಿದೆ ಎಂದರೆ, ಅಕ್ಷರಶಃ ನರಕ ಸೃಷ್ಟಿಯಾದ ಭಾವ ಮೂಡುತ್ತಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣಗಳು ಕೂಡ ಭಾರಿ ಮಳೆಯ ಪರಿಣಾಮ ನಲುಗಿ ಹೋಗಿವೆ. ಹೀಗಾಗಿ ಪ್ರವಾಹ ಕಾರಣ ರೈಲು ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.

Twitter Link:
After heavy rain fell, the new 🇨🇳 #Beijing Daxing International Airport (PKX) experienced major flooding, resulting in some flights being canceled.The Airport started its operation on September 25, 2019.
— FlightMode (@FlightModeblog) August 1, 2023
🎥 via @fl360aero#China #rain #flooding #flood #aviation #AvGeek #avgeeks pic.twitter.com/qc1szaUG92
ಮಳೆ ಬೀಳದ ಜಾಗದಲ್ಲಿ ಭಾರಿ ಮಳೆ?
ಅಷ್ಟಕ್ಕೂ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಪ್ರತಿವರ್ಷ ಕಡಿಮೆ ಬೀಳುವುದು ವಾಡಿಕೆ. ಆದ್ರೆ ಈ ಬಾರಿ ವರುಣ ದೇವ ಬೀಜಿಂಗ್ ಮೇಲೆ ವಕ್ರ ದೃಷ್ಟಿ ನೆಟ್ಟ ಪರಿಣಾಮ ಈ ಬೇಸಿಗೆಯಲ್ಲಿ ನಿರಂತರ ಮಳೆ ಬೀಳುತ್ತಿದೆ. ಪರಿಣಾಮ ಉತ್ತರ ಚೀನಾದ ಹಲವೆಡೆ ಪ್ರವಾಹ ಉಂಟಾಗಿ ಸಾವು ನೋವು ಸಂಭವಿಸಿದೆ. ಪ್ರವಾಹ ಭೀಕರತೆ ಕಂಡು ಚೀನಾ ಜನರು ಬೆಚ್ಚಿಬಿದ್ದಿದ್ದಾರೆ. ಹಾಗೇ ನಿಲ್ಲೋ ನಿಲ್ಲೋ ಮಳೆರಾಯ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸರ್ಕಾರ ಕೂಡ ಅಲರ್ಟ್ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
Another Video- The #Fangshan District of Beijing was severely flooded and all cars were destroyed. #Chinanews #Beijing #洪水 #台风 #杜苏芮 #暴雨 #china #Doksuri #flooding #TyphoonDoksuri #rain pic.twitter.com/KHXb0ihWHA
— Chaudhary Parvez (@ChaudharyParvez) August 1, 2023
ಚೀನಾ ಅಧ್ಯಕ್ಷರಿಂದ ಖಡಕ್ ಆದೇಶ
ತಮ್ಮ ದೇಶದಲ್ಲಿ ಉಂಟಾಗಿರುವ ಭೀಕರ ಪ್ರಾಕೃತಿಕ ವಿಕೋಪದ ಬಗ್ಗೆ ಚೀನಾ ಸರ್ಕಾರವು ಕಠಿಣ ಕ್ರಮಗಳನ್ನ ಕೈಗೊಂಡಿದೆ. ಹಾಗೇ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಹಾಗೂ ಆಸ್ತಿ ಪಾಸ್ತಿ ಹಾನಿ ತಡೆಗಟ್ಟಲು ಸೂಕ್ತ ಕಾರ್ಯಾಚರಣೆ ನಡೆಸಲು ಸ್ಥಳೀಯ ಆಡಳಿತಗಳಿಗೂ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಖಡಕ್ ಆದೇಶ ನೀಡಿದ್ದಾರೆ. ಸದ್ಯ ಸಾವಿರಾರು ಜನರನ್ನು ಶಾಲೆ ಹಾಗೂ ಜಿಮ್‌ಗಳಿಗೆ ಸ್ಥಳಾಂತರಿಸಿ ಆಶ್ರಯ ನೀಡಲಾಗಿದೆ. ಕಾರು, ಬಸ್ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿ ರಾಶಿಯಾಗಿ ಬಿದ್ದಿರುವ ದೃಶ್ಯಗಳು ಕಂಡು ಬರುತ್ತಿವೆ. ಹಾಗೇ ಪ್ರಮುಖ ರಸ್ತೆಗಳೇ ಕೆಸರು ಗುಂಡಿಯಂತೆ ಕಾಣುತ್ತಿವೆ.

Another Video- The #Fangshan District of Beijing was severely flooded and all cars were destroyed. #Chinanews #Beijing #洪水 #台风 #杜苏芮 #暴雨 #china #Doksuri #flooding #TyphoonDoksuri #rain pic.twitter.com/KHXb0ihWHA
— Chaudhary Parvez (@ChaudharyParvez) August 1, 2023
ಪರ್ವತ ಪ್ರದೇಶದಲ್ಲಿ ಭಯದ ವಾತಾವರಣ
ಮತಪಟ್ಟವರ ಬಗ್ಗೆ ಸಂಪೂರ್ಣ ಮಾಹಿತಿ ಸಿಗದೇ ಇದ್ದರೂ ಈವರೆಗೆ 20 ಜನ ಪ್ರವಾಹಕ್ಕೆ ಬಲಿಯಾಗಿರುವ ಸಾಧ್ಯತೆ ಇದೆ. ಆದರೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಸೂಕ್ತ ಹಾಗೂ ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಿದೆ ಚೀನಾ ಸರ್ಕಾರ. ಬೀಜಿಂಗ್‌ನ ಪಶ್ಚಿಮದ ಪರ್ವತಗಳಲ್ಲಿ ಪ್ರವಾಹದಿಂದ 11 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಪ್ರವಾಹದಿಂದ 5 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಚೀನಾ ಸರ್ಕಾರ ಖಡಕ್ ಕ್ರಮ ಕೈಗೊಂಡಿದೆ.
#Flood in Mentougou, Fangshan District, #Beijing #China pic.twitter.com/pIuBsQ40xF
— Rahul Sisodia (@Sisodia19Rahul) August 1, 2023
ಒಟ್ಟಾರೆ ಚೀನಾ ಪ್ರವಾಹ ಆತಂಕ ಹುಟ್ಟಿಸಿದೆ. ಈಗಲೂ ಮಳೆ ಕಂಟ್ರೋಲ್‌ಗೆ ಸಿಗದಿರುವ ಕಾರಣ ಮತ್ತಷ್ಟು ಭಯ ಉದ್ಭವಿಸಿದೆ. ಈ ಬಾರಿಯ ಪ್ರವಾಹ ಚೀನಾದಲ್ಲಿ ಸಾಕಷ್ಟು ಆಸ್ತಿ ಹಾಗೂ ಜೀವ ಹಾನಿಗೆ ಕಾರಣವಾಗಿದೆ. ಪರಿಹಾರ ಕಾರ್ಯಾಚರಣೆಯು ಕೂಡ ಸಾಗುತ್ತಿದ್ದು ಸಂಕಷ್ಟಕ್ಕೆ ಸಿಲುಕಿದ ಚೀನಾ ಜನರ ನೆರವಿಗೆ ಅಲ್ಲಿನ ಸರ್ಕಾರ ಧಾವಿಸಿದೆ. ಅಲ್ಲದೆ ಚೀನಾ ಸರ್ಕಾರ ಸ್ಥಳೀಯ ಆಡಳಿತಗಳಿಗೂ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದೆ. ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications