ಚಿಲಿಯಲ್ಲಿ 7.6 ಪ್ರಮಾಣದ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ
ಚಿಲಿ, ಡಿಸೆಂಬರ್ 25 : ಚಿಲಿಯ ಪುರ್ಟೋ ಮಾಂಟ್ ಎಂಬ ಸ್ಥಳದಿಂದ 225 ದೂರದಲ್ಲಿ 7.6 ಪ್ರಮಾಣದ ಭಾರೀ ಭೂಕಂಪ ಭಾನುವಾರ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ದಕ್ಷಿಣ ಚಿಲಿಯ ಕ್ವೆಲ್ಲಾನ್ ಎಂಬಲ್ಲಿಂದ 40 ಕಿ.ಮೀ. ದೂರದಲ್ಲಿ 34 ಕಿ.ಮೀ. ಭೂಮಿಯಾಳದಲ್ಲಿ ಭೂಮಿ ಕಂಪಿಸಿದೆ. ಕರಾವಳಿಯಲ್ಲಿರುವ ಜನರಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿದ್ದು, ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ದಿ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಸುನಾಮಿ ಎಚ್ಚರಿಕೆ ನೀಡಿದ್ದು, ಸಾಮಾನ್ಯ ಅಲೆಗಳಿಗಿಂತ 3 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ.












Click it and Unblock the Notifications