ಭೂತಳದಲ್ಲಿ ಹುದುಗಿದೆ ಅಗಾಧ ಪ್ರಮಾಣದ ವಜ್ರದ ರಾಶಿ

ವಾಷಿಂಗ್ಟನ್, ಜುಲೈ 19: ಭೂಮಿಯ ಮೇಲಿನ ಅತ್ಯಮೂಲ್ಯ ವಸ್ತುಗಳಲ್ಲಿ ವಜ್ರವೂ ಒಂದು. ವಜ್ರ ಅತ್ಯಂತ ದುರ್ಲಭ ವಸ್ತು ಎಂಬ ಕಾರಣಕ್ಕಾಗಿಯೇ ಅದಕ್ಕೆ ಬೆಲೆ ಅಧಿಕ.

ಆದರೆ, ಸಂಶೋಧಕರ ಪ್ರಕಾರ ಭೂಮಿಯ ಒಡಲಿನಲ್ಲಿ ಭಾರಿ ಪ್ರಮಾಣದ ವಜ್ರದ ಗಣಿಯೇ ಹುದುಗಿದೆ. ಅದು ಒಂದಲ್ಲ, ಎರಡಲ್ಲ, ಸಾವಿರಾರು ಲಕ್ಷ ಕೋಟಿ ಟನ್ ತೂಕದಷ್ಟಾಗುವ ವಜ್ರ.

ಭೂಮಿಯ ಮೇಲ್ಮೈನ ಒಳಗೆ ಅಗಾಧ ಪ್ರಮಾಣದ ವಜ್ರ ಇದೆ ಎಂದು ಅಮೆರಿಕದ ಮಸಾಷುಸೆಟ್ಸ್ ತಾಂತ್ರಿಕ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.

Massive diamond in earths surface

ಹಾಗೆಂದು ಭೂಮಿಯ ಒಡಲನ್ನು ಅಗೆಯಲು ಹೊರಟೀರಾ ಮತ್ತೆ...! ಈ ಅಮೂಲ್ಯ ವಜ್ರದ ಸಂಪತ್ತು ಯಾವ ಡ್ರಿಲ್ಲಿಂಗ್ ಯಂತ್ರಗಳ ಮೊನಚಿಗೂ ಸಿಗಲಾರದು.

ಈಗಿರುವ ಗಣಿಗಳಲ್ಲಿ ಸಿಗುವಷ್ಟು ಸುಲಭವಾಗಿ ನಮ್ಮ ಕೈಗೆ ವಜ್ರ ಸಿಗುವುದಿಲ್ಲ. ನಮ್ಮ ಭೂಗ್ರಹದ ತಳಭಾಗದ 145-240 ಕಿ.ಮೀ. ಆಳದಲ್ಲಿ ಈ ವಜ್ರಕೋಟಿ ಸಂಪತ್ತಿನ ವೈಭವ ಅಡಗಿದೆಯಂತೆ.

ಭೂಮಿಯ ಆಳದಲ್ಲಿ ಇರುವ ಈ ವಜ್ರಗಳನ್ನು ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ನಾವು ಈ ಹಿಂದೆ ಯೋಚಿಸಿದ್ದಕ್ಕಿಂತಲೂ ಭಾರಿ ಪ್ರಮಾಣದ ವಜ್ರ ಭೂಮಿಯಲ್ಲಿದೆ ಎನ್ನುತ್ತಾರೆ ಎಂಐಟಿಯ ಭೂ, ವಾತಾವರಣ ಹಾಗೂ ಗ್ರಹಗಳ ವಿಜ್ಞಾನ ವಿಭಾಗದ ಸಂಶೋಧನಾ ವಿಜ್ಞಾನಿ ಉಲ್ರಿಚ್ ಫೌಲ್.

ಭೂಮಿ ಒಳಗೆ ಶಬ್ಧದ ಅಲೆಗಳು ಹೇಗೆ ಸಾಗುತ್ತವೆ ಎನ್ನುವುದನ್ನು ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳಿಗೆ, ತಲೆಕೆಳಗಾದ ಸ್ಥಿತಿಯಲ್ಲಿರುವ ಪರ್ವತಗಳ ಸಾಲಿನ ಬಂಡೆಗಳ ಕೆಳಗೆ ವಜ್ರಗಳ ಬೃಹತ್ ಸಂಪತ್ತು ಅಡಗಿರುವುದು ಗೊತ್ತಾಗಿದೆ.

ಭೂಮಿಯ ಆಳದಲ್ಲಿರುವ ಪುರಾತನ ಬಂಡೆಗಳನ್ನು ಹಾದುಹೋಗುವಾಗ ಶಬ್ಧ ತರಂಗಗಳು ವೇಗ ಪಡೆದುಕೊಳ್ಳುವುದು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಬಳಿಕ ನಡೆಸಿದ ಅಧ್ಯಯನದಿಂದ, ಈ ಭಾಗದಲ್ಲಿ ವಜ್ರದ ಬೃಹತ್ ರಾಶಿಯೇ ಇದೆ ಎನ್ನುವುದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+