ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 24 ಮಂದಿ ಸಾವು

ಕಾಬೂಲ್, ಜುಲೈ 24: ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಇಪ್ಪತ್ನಾಲ್ಕು ಮಂದಿ ಮೃತಪಟ್ಟು, ಇತರ ನಲವತ್ತೆರಡು ಮಂದಿ ಗಾಯಗೊಂಡ ಘಟನೆ ಆಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸೋಮವಾರ ಸಂಭವಿಸಿದೆ.

ಸ್ಥಳೀಯ ಕಾಲಮಾನ ಬೆಳಗ್ಗೆ 6.40ರ ವೇಳೆಗೆ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿದ ತಾಲಿಬಾನ್ ಉಗ್ರಗಾಮಿಗಳು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

ಆಫ್ಘನ್ ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ನ ಗುರಿ ಮಾಡಿಕೊಂಡು ಉಗ್ರರ ಗುಂಪು ದಾಳಿ ನಡೆಸಿರುವುದಾಗಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿಕೊಂಡಿದ್ದಾರೆ.

Many dead in suicide bomb attack in Kabul

"ಸಾರ್ವಜನಿಕ ಸೇವೆಯಲ್ಲಿರುವವರ ಮೇಲೆ ಉಗ್ರಗಾಮಿಗಳ ದಾಳಿ ನಡೆಸಿರುವುದನ್ನು ಖಂಡಿಸುತ್ತೇನೆ" ಎಂದು ಆಫ್ಘಾನಿಸ್ತಾನದ ಮುಖ್ಯಾಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಹೇಳಿದ್ದಾರೆ.

ಟೋಲೋ ನ್ಯೂಸ್ ವರದಿ ಪ್ರಕಾರ, ದಾಳಿಯ ವೇಳೆ ಮೂರು ವಾಹನ, ಹದಿನೈದು ಮಳಿಗೆಗಳು ಕೂಡ ಹಾನಿಗೊಳಗಾಗಿವೆ.

ನಗರ ಪೊಲೀಸ್ ಜಿಲ್ಲೆ ಮೂರರ ಬಳಿ ಟೊಯೊಟಾ ಕರೋಲಾ ಕಾರು ಸ್ಫೋಟಗೊಂಡಿತು ಎಂದು ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ದಾನಿಶ್ ಸಿಎನ್ ಎನ್ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+