ಕೊನೇ ಘಳಿಗೆಯಲ್ಲಿ ಕೈಕೊಟ್ಟ ವಧು, ತನ್ನನ್ನು ತಾನೇ ಮದುವೆಯಾದ ವರ
ನಿಶ್ಚಯವಾಗಿದ್ದ ಮದುವೆ ಕೊನೇ ಘಳಿಗೆ ಮುರಿದುಬಿದ್ದಾಗ, ವರ ಸುಮ್ಮನೆ ಕೂರಲಿಲ್ಲ, ವಧುವನ್ನು ವಾಪಸ್ ಕರೆತರಲೂ ಇಲ್ಲ ಬದಲಾಗಿ ತನ್ನನ್ನು ತಾನೇ ಮದುವೆಯಾಗಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾನೆ.
ನಿಶ್ಚಯವಾಗಿದ್ದ ಮದುವೆ ಮುರಿದುಬಿದ್ದಾಗ ಅದೇ ಮುಹೂರ್ತದಲ್ಲಿ ಮತ್ತೊಂದು ಮದುವೆಯಾಗುವುದನ್ನು ನೋಡಿದ್ದೇವೆ ಆದರೆ ಈ ವ್ಯಕ್ತಿ ತನ್ನನ್ನ ತಾನೇ ಮದುವೆಯಾಗಿದ್ದಾನೆ.
ಡಿಯೋಗೊ ರೊಬೆಲೋ ಹಾಗೂ ವೈಟರ್ ಬೊಯೆನೊ ಕಳೆದ ನವೆಂಬರ್‌ನಲ್ಲಿ ಉಂಗುರು ಬದಲಾಯಿಸಿಕೊಂಡಿದ್ದರು.
ಈ ಒಂದು ವರ್ಷದ ಅವಧಿಯಲ್ಲಿ ಅವರ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳು ಬಂದು ಕೊನೆಗೆ ಯುವತಿ ವರನನ್ನು ನಿರಾಕರಿಸಿದ್ದಳು, ಬಳಿಕ ಮದುವೆಯನ್ನು ರದ್ದುಗೊಳಿಸುವ ಬದಲು ಅದೇ ದಿನ ಅದೇ ಮುಹೂರ್ತದಲ್ಲಿ ವರ ತನ್ನನ್ನು ತಾನು ಮದುವೆಯಾಗಿದ್ದಾನೆ.

ಬಾಹಿಯಾದ ಇಟಾಕೇರ್ ರೆಸಾರ್ಟ್‌ನಲ್ಲಿ ಡಿಯಾಗೋ ಅಕ್ಟೋಬರ್ 16 ರಂದು ತನ್ನನ್ನು ತಾನು ಮದುವೆಯಾಗಿದ್ದಾನೆ.ಸಮಾರಂಭಕ್ಕೆ 40 ಮಂದಿ ಸಂಬಂಧಿಕರು ಆಗಮಿಸಿದ್ದರು.ವೈಟರ್ ಕುಟುಂಬ ಹಾಗೂ ಸ್ನೇಹಿತರು ಗೈರಾಗಿದ್ದರು.
ಇಂದು ನನಗೆ ಅತ್ಯಂತ ಸಂತಸದ ದಿನ ನನ್ನನ್ನು ಇಷ್ಟಪಡುವವರ ಜತೆ ನಾನಿದ್ದೇನೆ, ನಾನೇನು ಮಾಡುತ್ತಿದ್ದೇನೆ ಅದು ಟ್ರಾಜೆಡಿಯಾಗಿದ್ದರು, ಕಾಮಿಡಿಯೆನಿಸಿದೆ.












Click it and Unblock the Notifications