45 ದಿನಗಳ ನಂತರ ತುರ್ತುಪರಿಸ್ಥಿತಿ ಹಿಂಪಡೆದ ಮಾಲ್ಡೀವ್ಸ್ ಅಧ್ಯಕ್ಷ
ಮಾಲೆ, ಮಾರ್ಚ್ 22: ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್ ಮೇಲೆ ಹೇರಿದ್ದ 45 ದಿನಗಳ ತುರ್ತುಪರಿಸ್ಥಿತಿ ಆದೇಶವನ್ನು ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಹಿಂಪಡೆದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ತಿರಸ್ಕರಿಸಿದ ಯಾಮಿನ್, ಫೆ.5 ರಂದು ತುರ್ತುಪರಿಸ್ಥಿತಿ ಹೇರಿದ್ದರು. ಮೊದಲು 15 ದಿನಗಳ ಕಾಲ ಹೇರಿದ್ದ ತುರ್ತುಪರಿಸ್ಥಿತಿಯನ್ನು ನಂತರ 45 ದಿನಗಳಿಗೆ ವಿಸ್ತರಿಸಿದ್ದರು.

ಬರೋಬ್ಬರಿ 45 ದಿನಗಳ ನಂತರ ತಮ್ಮ ಆದೇಶವನ್ನು ಅವರು ಹಿಂಪಡೆದಿದ್ದು, ಮಾಲ್ಡೀವ್ಸ್ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಮೀನ್ ಸರ್ವಾಧಿಕಾರಿಯಂತೆ ತೆಗೆದುಕೊಂಡ ನಿರ್ಧಾರವನ್ನಿ ಭಾರತ, ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಖಂಡಿಸಿದ್ದವು.












Click it and Unblock the Notifications