ಹೊಡಿ ಮಗಾ, ಚಚ್ಚು ಮಗಾ.. ಥೂ ಸಂಸದರಾ ಇವರು?

ಸಂಸದರು ಅಂದ್ರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಆಯ್ಕೆಯಾಗಿ ಹೋಗುವ ಜನರ ಪ್ರತಿನಿಧಿಗಳು. ಆದರೆ ಇದೇ ಸಂಸದರು ಮೂರು ಬಿಟ್ಟವರಂತೆ ಫೈಟಿಂಗ್ ಮಾಡಿದರೆ ಅದು ಹೇಗೆ ಇರಬೇಡ ಹೇಳಿ? ಹೌದು ಇಂತಹ ಭೀಕರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಅದ್ರಲ್ಲೂ ಒಬ್ಬ ಸಂಸದ ಮತ್ತೊಬ್ಬ ಸಂಸದನ ಕುತ್ತಿಗೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ?

ಅಂದಹಾಗೆ ಪದೇ ಪದೇ ಭಾರತದ ಬಗ್ಗೆ ಮಾತನಾಡುತ್ತಾ, ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಮಾಲ್ಡೀವ್ಸ್ ದೇಶ ತನ್ನ ಮಾನವನ್ನು ತಾನೇ ಹರಾಜು ಹಾಕಿಸಿಕೊಳ್ಳುತ್ತಿದೆ. ಈ ದೇಶ ಇನ್ನೇನು ಆರ್ಥಿಕವಾಗಿ ಕೂಡ ದಿವಾಳಿ ಆಗುವ ಮುನ್ಸೂಚನೆ ಸಿಗುತ್ತಿದೆ. ಹೀಗಿದ್ದಾಗಲೇ, ಮಾಲ್ಡೀವ್ಸ್ ದೇಶದ ಸಂಸದರು ಸಂಸತ್‌ನಲ್ಲಿ ಫುಲ್ ಫೈಟಿಂಗ್ ಮಾಡಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆ ವಿಡಿಯೋಗಳು ಈಗ, ಫುಲ್ ವೈರಲ್ ಆಗುವ ಜೊತೆ ಜೊತೆಗೆ ಸಂಚಲನ ಸೃಷ್ಟಿ ಮಾಡಿವೆ. ಹೀಗೆ ಸಂಸದರ ಫೈಟಿಂಗ್ ವಿಡಿಯೋ ನೋಡಲು ಮುಂದೆ ಓದಿ.

Maldives MPs Engage in Fight in Parliament after destroying relation with India

ಏನ್ ಗುರೂ ಇವರ ಕಥೆ?

ಹೌದು, ಮಾಲ್ಡೀವ್ಸ್​ ಸಂಸತ್ತು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಅಲ್ಲಿನ ಅಧ್ಯಕ್ಷರಾಗಿರುವ ಮೊಹಮ್ಮದ್ ಮುಯಿಝು ನೇತೃತ್ವದ ಸಚಿವ ಸಂಪುಟಕ್ಕೆ ಸಂಸತ್ತಿನ ಅನುಮೋದನೆಗಾಗಿ ನಡೆದ ವಿಶೇಷ ಅಧಿವೇಶನ ರಣರಂಗವೇ ಆಗಿತ್ತು. ಮಾಲ್ಡೀವ್ಸ್ ದೇಶದ ಸಂಸದರು ಇದೇ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಬಡಿದಾಡಿದ್ದಾರೆ. ಈ ಮೂಲಕ ಆ ದೇಶದ ಮಾನವನ್ನು ಹರಾಜು ಹಾಕಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಆಡಳಿತ ನಡೆಸುತ್ತಿರುವ ಪೀಪಲ್ಸ್​ ನ್ಯಾಷನಲ್​ ಕಾಂಗ್ರೆಸ್​ ಮತ್ತು ಪ್ರೊಗ್ಸೆಸ್ಸಿವ್​ ಪಾರ್ಟಿ ಆಫ್​ ಮಾಲ್ಡೀವ್ಸ್​ (ಪಿಪಿಎಂ) ಸಂಸದರು ಒಂದು ಕಡೆ, ಹಾಗೇ ಈ ವೇಳೆ ಇನ್ನೊಂದು ಕಡೆ ಪ್ರತಿಪಕ್ಷ ಮಾಲ್ಡೀವಿಯನ್​ ಡೆಮಾಕ್ರೆಟಿಕ್​ ಪಾರ್ಟಿ(ಎಂಡಿಪಿ)ಯ ಸಂಸದರು ಫೈಟಿಂಗ್ ಮಾಡಿದ್ದಾರೆ.

ಕತ್ತಿನ ಮೇಲೆ ಕಾಲಿಟ್ಟ ಸಂಸದ!

ಇನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಸಂಸದರು ಒಬ್ಬರಿಗೊಬ್ಬರು ಜಾಡಿಸಿ ಒದೆಯುತ್ತಿರುವುದು. ಹಾಗೇ ಸಂಸದನ ಕತ್ತಿನ ಮೇಲೆಯೇ ಕಾಲಿಟ್ಟು ಭೀಕರ ಹಲ್ಲೆಗೆ ಯತ್ನಿಸಿದ್ದಾರೆ. ಈ ವಿಡಿಯೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಗೇ ಸಂಸದರು ರೌಡಿಗಳ ರೀತಿ ಫೈಟಿಂಗ್ ಮಾಡಿರುವ ವಿಡಿಯೋ ಬಗ್ಗೆ ಜನ ಬೇಸರ ಹೊರ ಹಾಕುತ್ತಿದ್ದಾರೆ. ಈ ಎಲ್ಲ ಘಟನೆ ಪರಿಣಾಮ ಮಾಲ್ಡೀವ್ಸ್ ಸಂಸತ್ತಿನಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿ ರಣರಂಗವಾಗಿತ್ತು.

ಮಾನ, ಮರ್ಯಾದಿ ಎಲ್ಲಾ ಹೋಯ್ತು!

ಅಷ್ಟಕ್ಕೂ ಮಾಲ್ಡೀವ್ಸ್‌ನ ಸ್ಥಳೀಯ ಮಾಧ್ಯಮಗಳ ಪ್ರಕಾರ, ಆಡಳಿತಾರೂಢ ಮೈತ್ರಿಕೂಟದ ಸಂಸದರು ಪ್ರತಿಪಕ್ಷ ಸಂಸದರ ಸಭಾಂಗಣ ಪ್ರವೇಶಕ್ಕೆ ಅಡ್ಡಿ ಮಾಡಿದ್ದರಂತೆ. ಈ ವೇಳೆ ಭಾರಿ ದೊಡ್ಡ ಗಲಾಟೆ ನಡೆದು. ಒಬ್ಬರ ಮೇಲೆ ಮತ್ತೊಬ್ಬರು ಭೀಕರ ಹಲ್ಲೆ ಕೂಡ ನಡೆಸಿದ್ದಾರೆ. ಹೀಗಾಗಿ ಮಾಲ್ಡೀವ್ಸ್ ಮಾನ & ಮರ್ಯಾದಿ ಈಗ ಜಾಗತಿಕ ಮಟ್ಟದಲ್ಲಿ ಹರಾಜಾಗಿದ್ದು, ಈ ವಿಡಿಯೋಗಳು ಈಗ ಫುಲ್ ವೈರಲ್ ಆಗುತ್ತಿವೆ. ಈಗಾಗಲೇ ಭಾರತದ ಜೊತೆ ಸಂಬಂಧವನ್ನು ಹಾಳು ಮಾಡಿಕೊಂಡಿರುವ ಮಾಲ್ಡೀವ್ಸ್ ಹೊಸ ಅಧ್ಯಕ್ಷ, ತನ್ನ ದೇಶದಲ್ಲೂ ಅತಂತ್ರ ಸ್ಥಿತಿ ಮುಂದುವರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಭಾರತೀಯ ಸೇನೆ ಹೊರಗೆ ಬರುತ್ತಾ?

ಮಾಲ್ಡೀವ್ಸ್ ಈಗಾಗಲೇ ಭಾರತದ ವಿರೋಧ ಕಟ್ಟಿಕೊಂಡು ಸಮಸ್ಯೆ ಎದುರಿಸುತ್ತಿದೆ. ಇಷ್ಟಾದ್ರೂ ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಅದರಲ್ಲೂ ಭಾರತದಿಂದ ಸಾಕಷ್ಟು ಸಹಾಯ ಪಡದರೂ, ಈಗ ಚೀನಾ ಪರವಾಗಿ ನಿಲ್ಲುತ್ತಿದೆ ಮಾಲ್ಡೀವ್ಸ್ ಎನ್ನುವ ಆರೋಪ ಕೇಳಿಬಂದಿದೆ. ಅದರಲ್ಲೂ ಮಾಲ್ಡೀವ್ಸ್ ದೇಶದ ಈ ನಡೆಗೆ ಭಾರತ ಕೂಡ ತಕ್ಕ ತಿರುಗೇಟು ನೀಡಿದೆ. ಹೀಗೆ ಎರಡೂ ದೇಶದ ನಡುವೆ ಸಂಬಂಧ ಕೂಡ ಹಾಳಾಗುತ್ತಿದೆ. ಈಗಲಾದರೂ ಮಾಲ್ಡೀವ್ಸ್ ಈ ವಿಚಾರದಲ್ಲಿ ಬುದ್ಧಿ ಕಲಿಯುತ್ತಾ? ಗೊತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+