ಚಾರ್ಜಿಗಿಟ್ಟ ಮೊಬೈಲ್ ಸ್ಪೋಟಕ್ಕೆ ಮಲೇಷ್ಯಾ ಸಿಇಒ ಸಾವು
ಕೌಲಲಂಪುರ್, ಜೂನ್ 21: ಚಾರ್ಜಿಗಿಟ್ಟ ಮೊಬೈಲ್ ಸ್ಪೋಟಿಸಿದ ಪರಿಣಾಮ ಮಲೇಷ್ಯಾದ ಸಿಇಒ ಒಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಲೇಷ್ಯಾ ಸಚಿವಾಲಯದ ಕ್ರಡಲ್ ಫಂಡ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಜ್ರಿನ್ ಹಸನ್ ಮೊಬೈಲ್ ಸ್ಫೋಟಕ್ಕೆ ಪ್ರಾಣ ಕಳೆದುಕೊಂಡವರಾಗಿದ್ದಾರೆ.
ಇಂಗ್ಲೆಂಡ್‌ನ ಬಕಿಂಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದ ನಜ್ರಿನ್ ಹಸನ್ ಉದ್ಯಮ, ಶಿಕ್ಷಣ ಮೊದಲಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರು ರಾತ್ರಿ ವೇಳೆ ತಮ್ಮ ಬ್ಲಾಕ್‌ಬೆರಿ ಹಾಗೂ ಹುವಾಯ್ ಮೊಬೈಲ್ ಚಾರ್ಜ್‌ಗೆ ಇಟ್ಟು ಮಲಗಿದ್ದರು. ಈ ವೇಳೆ ಮೊಬೈಲ್ ಓವರ್ ಹೀಟ್ ಆಗಿ ಸ್ಫೋಟಗೊಂಡಿದೆ. ಬೆನ್ನಿಗೆ ಬೆಡ್ ರೂಂಗೆ ಬೆಂಕಿ ಹತ್ತಿಕೊಂಡಿದೆ.

ಸ್ಫೋಟದ ವೇಳೆ ಉಂಟಾದ ಗಾಯ ಮತ್ತು ವಿಷ ಅನಿಲ ಸೇವನೆ ಹಸನ್ ಮೃತಪಟ್ಟಿರುವುದಕ್ಕೆ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿದೆ. ಆದರೆ ಬೆಡ್ ರೂಂನಲ್ಲಿದ್ದ ಎರಡು ಫೋನ್ ಗಳಲ್ಲಿ ಯಾವ ಫೋನ್ ಸ್ಫೋಟಗೊಂಡಿರುವುದು ಎಂಬುದು ತಿಳಿದು ಬಂದಿಲ್ಲ.












Click it and Unblock the Notifications