ಗೂಢಚರ್ಯೆ ಆರೋಪದಲ್ಲಿ ಪಾಕ್ ಸೇನಾ ಜನರಲ್ ಗೆ ಜೀವಾವಧಿ ಜೈಲು

ಇಸ್ಲಾಮಾಬಾದ್ (ಪಾಕಿಸ್ತಾನ), ಮೇ 30: ಗೂಢಚಾರಿಕೆ ಮಾಡಿದ ಆರೋಪದಲ್ಲಿ ಪಾಕಿಸ್ತಾನ ಸೇನೆಯು ಅಲ್ಲಿನ ಸೇನಾ ಜನರಲ್ ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಇದರ ಜತೆಗೆ ಬ್ರಿಗೇಡಿಯರ್ ಹಾಗೂ ನಾಗರಿಕ ವೈದ್ಯರಿಗೆ ಇದೇ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲಾಗಿದೆ ಎಂದು ಸೇನಾ ಹೇಳಿಕೆಯಲ್ಲಿ ಗುರುವಾರ ತಿಳಿಸಲಾಗಿದೆ.

ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಈ ಬಗ್ಗೆ ಮಾಹಿತಿ ನೀಡಿದ್ದು, ಗೂಢಚರ್ಯೆ ಮತ್ತು ಸೂಕ್ಷ್ಮ ಮಾಹಿತಿಗಳನ್ನು ವಿದೇಶಿ ಸಂಸ್ಥೆಗಳಿಗೆ ಸೋರಿಕೆ ಮಾಡಿ, ರಾಷ್ಟ್ರೀಯ ಭದ್ರತೆಗೆ ಈ ಮೂವರು ಅಪಾಯ ತಂದೊಡ್ಡಿದ್ದರು ಎಂದು ಹೇಳಿದ್ದಾರೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾವೆದ್ ಇಕ್ಬಾಲ್ ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಪಾಕಿಸ್ತಾನದ ಕಾನೂನಿನ ಪ್ರಕಾರ ಹದಿನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು ನಿವೃತ್ತ ಬ್ರಿಗೇಡಿಯರ್ ರಾಜಾ ರಿಜ್ವಾನ್ ಹಾಗೂ ಸೇನಾ ಸಂಸ್ಥೆಯಿಂದ ನೇಮಿಸಿಕೊಂಡಿದ್ದ ವಾಸೀಂ ಅಕ್ರಂಗೆ ಮರಣದಂಡನೆ ವಿಧಿಸಲಾಗಿದೆ.

Life time imprisonment for Pakistan army general for espionage

ಈ ಮೂವರು ಸೋರಿಕೆ ಮಾಡಿದ ಮಾಹಿತಿ ಯಾವುದು ಹಾಗೂ ಯಾರಿಗೆ ಸೋರಿಕೆ ಮಾಡಿರುವುದು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನು ಇಬ್ಬರು ಸೇನಾಧಿಕಾರಿಗಳ ವಿರುದ್ಧ ವಿಚಾರಣೆ ಶುರುವಾಗುವ ಮುನ್ನವೇ ನಿವೃತ್ತರಾಗಿದ್ದರೆ ಎಂಬುದು ಕೂಡ ತಿಳಿದುಬಂದಿಲ್ಲ.

ಪಾಕಿಸ್ತಾನ ಸೈನ್ಯಕ್ಕೆ ಅದರದೇ ಕಾನೂನು ಹಾಗೂ ಕೋರ್ಟ್ ಇದೆ. ಸೇನಾಧಿಕಾರಿಗಳ ವಿರುದ್ಧ ಬರುವ ಆರೋಪದ ವಿಚಾರಣೆ ಅಲ್ಲೇ ನಡೆಯುತ್ತದೆ. ಅಲ್ಲಿ ನೀಡುವ ತೀರ್ಪು ಹಾಗೂ ಆದೇಶಗಳಿಗೆ ಮೇಲ್ಮನವಿ ಸಲ್ಲಿಸುವಂತಿದ್ದರೆ, ಆಕ್ಷೇಪ ಸಲ್ಲಿಸುವಂತಿದ್ದರೆ ಸೇನಾ ಪ್ರಕ್ರಿಯೆಗಳ ಅನ್ವಯವೇ ಮುಂದುವರಿಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+