ಮೊಬೈಲ್ ಮುಟ್ಟಲು ಭಯ.. ಭಯ.. ಈ ದೇಶದಲ್ಲಿ ಮೊಬೈಲ್ ಬಾಂಬ್ ಹಾವಳಿ?
ಮೊಬೈಲ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಈಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು, ಹಣ್ಣು ಹಣ್ಣು ಮುದುಕರ ತನಕ ಎಲ್ಲರಿಗೂ ಮೊಬೈಲ್ ಸೆಳೆಯುತ್ತದೆ. ಊಟ ಮಾಡುವ ತನಕ ಹಿಡಿದು, ನಿದ್ದೆ ಮಾಡುವ ತನಕ ಕೈಯಲ್ಲಿ ಮೊಬೈಲ್ ಇಟ್ಟುಕೊಂಡೇ ಬಾಳುತ್ತಿದ್ದಾರೆ ಮನುಷ್ಯರು. ಆದರೆ ಇಲ್ಲೊಂದು ದೇಶದಲ್ಲಿ ಮಾತ್ರ ಮೊಬೈಲ್ ಕಂಡರೆ ಜನರು ಹೆದರುತ್ತಾ, ಓಡಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾದ್ರೆ ಮೊಬೈಲ್ ಮುಟ್ಟಲು ಭಯಪಡುವ ದೇಶ ಯಾವುದು? ಬನ್ನಿ ತಿಳಿಯೋಣ.
ಭಾರತ ಅದೆಷ್ಟು ಶಾಂತಿಯುತ ಜೀವನ ನಡೆಸುತ್ತಿದೆ ಎಂದರೆ, ನಮ್ಮ ವಿರುದ್ಧ ಯಾವುದೇ ದೇಶ ಕೂಡ ಯುದ್ಧಕ್ಕೆ ಸಿದ್ಧವಾಗಲು ಇಷ್ಟಪಡಲ್ಲ. ಯಾಕಂದ್ರೆ ಭಾರತ ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಆದರೆ ಮಧ್ಯಪ್ರಾಚ್ಯ ಭಾಗದ ಪರಿಸ್ಥಿತಿ ಮಾತ್ರ ಭಾರತ ದೇಶಕ್ಕಿಂತ ವಿಭಿನ್ನ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಪ್ರತಿಯೊಂದು ದೇಶವು ಮತ್ತೊಂದು ದೇಶದ ಜೊತೆಗೆ ಯುದ್ಧಕ್ಕೆ ಸಿದ್ಧ ಎನ್ನುವಂತೆ ನಿಂತಿರುತ್ತದೆ. ಹೀಗಿದ್ದಾಗ ಮತ್ತೊಮ್ಮೆ ಇದೇ ಮಧ್ಯಪ್ರಾಚ್ಯ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಜನರು ಕೂಡ ನಲುಗಿ ಹೋಗಿದ್ದಾರೆ. ಯಾವ ಕ್ಷಣದಲ್ಲಿ ಏನಾಗುತ್ತೆ ಎಂಬ ಭಯ ಆವರಿಸಿದ ಸಮಯದಲ್ಲೇ, ಮೊಬೈಲ್ ಮುಟ್ಟಲು ಭಯ ಪಡುವ ಸ್ಥಿತಿ ನಿರ್ಮಾಣ ಆಗಿದೆ!

ಮೊಬೈಲ್ ಕಂಡರೆ ಓಡುತ್ತಿದ್ದಾರೆ ಜನ!
ಇಸ್ರೇಲ್ ಹಾವಳಿ ಕಂಡು ರೊಚ್ಚಿಗೆದ್ದಿರುವ ಇರಾನ್ ದೇಶಕ್ಕೆ ಇದೀಗ ಯುದ್ಧ ಮಾಡೋದಕ್ಕೆ ಮತ್ತಷ್ಟು ಕಾರಣ ಸಿಕ್ಕಂತಾಗಿದೆ. ಈಗಾಗಲೇ ಲೆಬನಾನ್ ದೇಶದಲ್ಲಿ ಪೇಜರ್ಸ್ & ವಾಕಿ ಟಾಕಿ ಬ್ಲಾಸ್ಟ್ ಆಗಿದ್ದು, ಇದೀಗ ಮೊಬೈಲ್ ಕಂಡರು ಕೂಡ ಜನರು ಭಯಪಡುವ ಪರಿಸ್ಥಿತಿ ಅಲ್ಲಿ ನಿರ್ಮಾಣ ಆಗಿದೆ. ಯಾಕಂದ್ರೆ ಮೊದಲಿಗೆ ಪೇಜರ್ಸ್ ಸ್ಫೋಟದ ಪರಿಣಾಮ ಸಾವಿರ ಸಾವಿರ ಜನರು ಕೈ & ಕಾಲು ಕಳೆದುಕೊಂಡು ಹಲವರು ಜೀವ ಕಳೆದುಕೊಂಡು ಪರಿಸ್ಥಿತಿ ತುಂಬಾನೇ ಸೂಕ್ಷ್ಮವಾಗಿದೆ. ಹೀಗಿದ್ದಾಗ ಮತ್ತೊಮ್ಮೆ ವಾಕಿ ಟಾಕಿ ಸ್ಫೋಟಗೊಂಡ ಪರಿಣಾಮ ಪರಿಸ್ಥಿತಿಗೆ ಕಿಚ್ಚು ಹಚ್ಚಿದಂತೆ ಆಗಿದ್ದು, ಜನರು ಮೊಬೈಲ್ ದೂರ ಇಟ್ಟಿದ್ದಾರೆ!












Click it and Unblock the Notifications