ಕಮಲಾ.. ಕಮಲಾ.. ಕಮಲಾ.. ಅಂತಿದ್ದಾರೆ ಅನಿವಾಸಿ ಭಾರತೀಯರು!
ಭಾರತದ ತಾಕತ್ ಏನು ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ, ಹೀಗಾಗಿ ಇದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಯಾಕಂದ್ರೆ ಆಧುನಿಕ ಜಗತ್ತಿನಲ್ಲಿ ಭಾರತ ಬಲವಾಗಿ, ಮತ್ತು ರಾಜಕೀಯ ಪ್ರಾಬಲ್ಯ ಹೆಚ್ಚಿಸಿಕೊಂಡಿರುವ ದೇಶವಾಗಿ ಅಭಿವೃದ್ಧಿ ಹೊಂದಿದೆ. ಇದೇ ಕಾರಣಕ್ಕೋ ಏನೋ ಭಾರತ ಮೂಲದವರು ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ದೇಶಗಳು ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಶಕ್ತಿಶಾಲಿ ಆಗಿದ್ದಾರೆ. ಹೀಗಿದ್ದಾಗಲೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಭಾರತ ಮೂಲದ ಕಮಲಾ ಹ್ಯಾರಿಸ್ ಅಬ್ಬರ ಜೋರಾಗಿದ್ದು, ಹೊಸ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ!
ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಹವಾ ಎಬ್ಬಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿರುವ ಕಮಲಾ ಹ್ಯಾರಿಸ್ ಪರ ಕೋಟ್ಯಂತರ ಜನರು ಸ್ವಂತವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹಾಗೇ ಇದೀಗ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಸಿಗುತ್ತಿದೆ. ಇದೇ ಸಮಯದಲ್ಲಿ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರಿಗೆ ಅನಿವಾಸಿ ಭಾರತೀಯರು ಕೂಡ ಭಾರಿ ಸಪೋರ್ಟ್ ಕೊಡುತ್ತಿದ್ದು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಭಾರತ ಮೂಲದ ಒಬ್ಬರನ್ನು...
ಡೊನಾಲ್ಡ್ ಟ್ರಂಪ್ ಸೋಲಿಗೆ ಹತ್ತಿರವಾಗುತ್ತಿದ್ದು, ಕಮಲಾ ಹ್ಯಾರಿಸ್ ಅವರಿಗೆ ಭಾರಿ ಬೆಂಬಲ ಸಿಗುತ್ತಿದೆ. ಅದರಲ್ಲೂ ಅನಿವಾಸಿ ಭಾರತೀಯರು ಇದೀಗ ಕಮಲಾ ಹ್ಯಾರಿಸ್ ಗೆಲುವಿಗೆ ಅಂತಾ ಹೊಸ ಹೊಸ ಉಪಾಯ ಮಾಡುತ್ತಿದ್ದಾರೆ. ಇದರಲ್ಲಿ ಇಂಡಿಯನ್ ಅಮೆರಿಕನ್ಸ್ ಫಾರ್ ಹ್ಯಾರಿಸ್ ಎಂಬ ಹೆಸರಿನ ಅಡಿ ಪ್ರಚಾರ ಕೂಡ ಆರಂಭ ಮಾಡಲಾಗಿದೆ. ಭಾರತ ಮೂಲದ ಒಬ್ಬರನ್ನ ಅಮೆರಿಕದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆಗಳು ಸಾಗಿವೆ.
ಯಾಕಂದ್ರೆ ಅಮೆರಿಕದ ಇತಿಹಾಸದಲ್ಲಿ ಈವರೆಗೂ ಯಾವುದೇ ಒಬ್ಬ ಮಹಿಳೆ ಅಧ್ಯಕ್ಷೆ ಆಗಿಲ್ಲ. ಹಾಗೇ ಭಾರತ ಮೂಲದವರು ಕೂಡ ಅಧ್ಯಕ್ಷರಾಗಿಲ್ಲ. ಇದೀಗ ಆ ಸ್ಥಾನ ತುಂಬಲು ಕಮಲಾ ರೆಡಿ ಆಗಿದ್ದಾರೆ ಎಂಬುದು ಭಾರತೀಯರ ನಂಬಿಕೆ. ಆ ನಂಬಿಕೆ ನಿಜ ಮಾಡಲು ಅಮೆರಿಕದ ಕೋಟ್ಯಂತರ ಭಾರತೀಯರು ಇದೀಗ ಶ್ರಮ ವಹಿಸುತ್ತಿದ್ದಾರೆ. ಹೀಗಾಗಿ ಚುನಾವಣೆ ಕುತೂಹಲ ಕೆರಳಿಸುತ್ತಿದೆ.
ಟ್ರಂಪ್ ಸೋಲಿಗೆ ಕಾಯುತ್ತಿದೆಯಾ ಕುಟುಂಬ?
ಡೊನಾಲ್ಡ್ ಟ್ರಂಪ್ ಯಾರ ಜೊತೆಯಲ್ಲಿ ಕೂಡ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ. ಈ ಪೈಕಿ ಸ್ವತಃ ಡೊನಾಲ್ಡ್ ಟ್ರಂಪ್ ಕುಟುಂಬದ ಸದಸ್ಯರು ಕೂಡ ಆಕ್ರೋಶ ಹೊರ ಹಾಕುತ್ತಿದ್ದು ಅವರೆಲ್ಲಾ ಟ್ರಂಪ್ ಜೊತೆಗೆ ಚನ್ನಾಗಿಲ್ಲ ಎಂಬ ಆರೋಪ ಇದೆ. ಇಂತಹ ಪರಿಸ್ಥಿತಿ ಇದ್ದಾಗ ಸ್ವತಃ ಟ್ರಂಪ್ ಅವರ ಹೆಂಡತಿ ಕೂಡ ಇದೀಗ ಟ್ರಂಪ್ ಸೋಲಬೇಕು ಅಂತಾ ಕಾಯುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಈಗಾಗಲೇ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದು, ಮತ್ತೊಂದು ಕಡೆ ಈ ರೀತಿ ಅವರ ಮನೆಯವರೇ ಅವರ ಜೊತೆಯಲ್ಲಿ ಸರಿ ಇಲ್ಲ ಎಂಬ ಆರೋಪ ಮಾಡಲಾಗಿದೆ. ಅದರಲ್ಲೂ ಈ ಹಿಂದೆ ಟ್ರಂಪ್ ಅವರ ಕುಟುಂಬದ ಜೊತೆಗೆ ಸಹಾಯಕರಾಗಿ ಕೆಲಸ ಮಾಡಿದ್ದ ವ್ಯಕ್ತಿಯೇ ಈಗ ಗಂಭೀರವಾದ ಆರೋಪ ಮಾಡಿದ್ದಾರೆ.












Click it and Unblock the Notifications