ಅಯ್ಯಯ್ಯೋ.. ಪುಟಿನ್ ಶತ್ರು ರಷ್ಯಾ ವಿಪಕ್ಷ ನಾಯಕ ಜೈಲಿನಲ್ಲೇ ಸಾವು!

ರಷ್ಯಾದಲ್ಲಿ ಏನಾಗುತ್ತಿದೆ? ಪುಟಿನ್ ವಿರುದ್ಧ ನಿಂತ ಒಬ್ಬೊಬ್ಬರೇ ಸಾಯುತ್ತಿದ್ದಾರೆ ಅನ್ನೋ ಅಮೆರಿಕದ ಆರೋಪಗಳ ನಡುವೆ, ಇದೀಗ ಮತ್ತೊಬ್ಬ ವಿರೋಧ ಪಕ್ಷದ ನಾಯಕನ ಸಾವು ಇಡೀ ರಷ್ಯಾ ದೇಶಕ್ಕೆ ಆಘಾತ ನೀಡಿದೆ. ಹಾಗಾದರೆ ಇದೀಗ ಜೀವ ಬಿಟ್ಟಿರುವ ಆ ನಾಯಕ ಯಾರು? ಆತನ ಸಾವು ಹೇಗಾಯ್ತು? ರಷ್ಯಾದ ಜೈಲಿನಲ್ಲಿ ದಿಢೀರ್ ಆ ರಾಜಕೀಯ ನಾಯಕ ಜೀವ ಬಿಟ್ಟಿದ್ದು ಯಾಕೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಗಟ್ಟಿ ಎದೆಯಲ್ಲಿ ನಿಂತು ಹೋರಾಡಿದ್ದ, ಕೆಲವೇ ಕೆಲವು ನಾಯಕರ ಪೈಕಿ ಅಲೆಕ್ಸಿ ನವಲ್ನಿ ಕೂಡ ಒಬ್ಬರು ಎಂಬುದು ಪಾಶ್ಚಿಮಾತ್ಯ ದೇಶಗಳ ಮಾತು. ಹೀಗಿದ್ದಾಗ ಪುಟಿನ್ ಅವರ ಆಡಳಿತದ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ, ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಈಗ ಮೃತಪಟ್ಟಿದ್ದು ಸಂಚಲನ ಸೃಷ್ಟಿಸಿದೆ. 47 ವರ್ಷ ವಯಸ್ಸಿನ ರಷ್ಯಾ ವಿರೋಧ ಪಕ್ಷದ ನಾಯಕ ನವಲ್ನಿ ಈಗ ಜೈಲಿನಲ್ಲೇ ಜೀವ ಬಿಟ್ಟಿದ್ದಾರೆ.

Kremlin Critic Alexei Navalny Is No More

19 ವರ್ಷಗಳ ಕಾರಾಗೃಹ ಶಿಕ್ಷೆ

ಅಂದಹಾಗೆ ಮೊದಲೇ ಹೇಳಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬಹುದೊಡ್ಡ ವಿರೋಧಿ ಎಂದೇ ಅಲೆಕ್ಸಿ ನವಲ್ನಿ ಅವರನ್ನ ಗುರುತಿಸಲಾಗಿತ್ತು. ಹೀಗೆ ಅಲೆಕ್ಸಿ ನವಲ್ನಿ ವಿರುದ್ಧ ವಿಧ್ವಂಸಕ ಕೃತ್ಯದ ಆರೋಪ ಹೊರಿಸಿ, 19 ವರ್ಷಗಳ ಕಾರಾಗೃಹ ಶಿಕ್ಷೆ ಕೂಡ ವಿಧಿಸಲಾಗಿತ್ತು. ಆದರೆ ಹೀಗೆ ಶಿಕ್ಷೆಗೆ ಗುರಿಯಾಗಿದ್ದ ಅಲೆಕ್ಸಿ ನವಲ್ನಿ, ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲೇ ಬೇರೆ ಜೈಲಿಗೆ ಶಿಫ್ಟ್ ಆಗಿದ್ದರು. ವ್ಲಾದಿಮಿರ್ ಪ್ರಾಂತ್ಯದ ರಷ್ಯಾ ಕೇಂದ್ರೀಯ ಕಾರಾಗೃಹದಿಂದ ಭಾರಿ ಭದ್ರತೆ ಇರುವ ಕಾರಾಗೃಹಕ್ಕೆ ಅವರನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಇದೀಗ ಆತನ ಜೀವವೇ ಹೋಗಿಬಿಟ್ಟಿದೆ.

ಏನಾಗಿತ್ತು ರಷ್ಯಾ ಅಧ್ಯಕ್ಷರ ಶತ್ರುಗೆ?

ಈಗಿನ ಮಾಹಿತಿಗಳ ಪ್ರಕಾರ, ರಷ್ಯಾ ಕಾಲಮಾನದಂತೆ ಶುಕ್ರವಾರ ಬೆಳಗ್ಗೆ. ವಾಯು ವಿಹಾರ ಮಾಡುವ ವೇಳೆ ಅಲೆಕ್ಸಿ ನವಲ್ನಿ ಅನಾರೋಗ್ಯಕ್ಕೆ ತುತ್ತಾಗಿ ಪ್ರಜ್ಞೆ ಕಳೆದುಕೊಂಡ್ರು ಅಂತಾ ಈಗ ಹೇಳಲಾಗುತ್ತಿದೆ. ಆ ತಕ್ಷಣವೇ ಅಲೆಕ್ಸಿ ನವಲ್ನಿಯನ್ನ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬಂದಿತ್ತು. ಆದರೆ ಆಗಲೇ ಅಲೆಕ್ಸಿ ನವಲ್ನಿ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಹೀಗೆ ನವಲ್ನಿ ಸಾವು ಇದೀಗ ರಷ್ಯಾ ರಾಜಕೀಯದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗೇ ಅಲೆಕ್ಸಿ ನವಲ್ನಿ ಸಾವಿನ ಸುದ್ದಿಯನ್ನ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ತಿಳಿಸಲಾಗಿದೆ ಎಂದು ಕ್ರೆಮ್ಲಿನ್ ವಕ್ತಾರರು ಮಾಹಿತಿ ನೀಡಿದ್ದಾರೆ.

Kremlin Critic Alexei Navalny Is No More

ನವಲ್ನಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ವೈರಿ, ಇದೇ ಕಾರಣಕ್ಕೆ ನವಲ್ನಿಯ ವಿರುದ್ಧ ಗಂಭೀರ ಆರೋಪವನ್ನ ಹೊರಿಸಿ ಜೈಲಿಗೆ ಹಾಕಿರುವ ಆರೋಪ ಇದೆ. ಅದರಲ್ಲೂ ಉಗ್ರವಾದದ ಕಾರಣಕ್ಕಾಗಿ 19 ವರ್ಷ ಜೈಲು ಶಿಕ್ಷೆ ಅನುಭವಿಸುವ ಸ್ಥಿತಿ ಎದುರಾಗಿತ್ತು ಅಲೆಕ್ಸಿ ನವಲ್ನಿಗೆ. ಹೀಗೆ ನವಲ್ನಿ ಪರದಾಡುತ್ತಿರುವ ಸಮಯದಲ್ಲಿ, ಅವರ ಬೆಂಬಲಿಗರು ಭಯಪಟ್ಟು ರಷ್ಯಾ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದರು. ಈಗ ನೋಡಿದರೆ ನವಲ್ನಿ ಜೀವವೇ ಹೋಗಿದೆ. ಇದು ರಷ್ಯಾದಲ್ಲಿ ಚುನಾವಣೆಗೆ ಮೊದಲು ಭಾರಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಏನಾಗುತ್ತಿದೆ ರಷ್ಯಾ ದೇಶದಲ್ಲಿ ಈಗ?

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿ ಇನ್ನೇನು ಕೆಲವೇ ದಿನದಲ್ಲಿ 2 ವರ್ಷ ತುಂಬಲಿದೆ. ಈ ಸಮಯದಲ್ಲೇ ಈ ರೀತಿಯ ಘಟನೆ ನಡೆದಿದೆ. ಅದರಲ್ಲೂ ಪುಟಿನ್ ಅವರ ಶತ್ರು ನವಲ್ನಿ ಸಾವು ಇದೀಗ ರಷ್ಯಾದಲ್ಲಿ ಭಾರಿ ಸೂಕ್ಷ್ಮ ಪರಿಸ್ಥಿತಿ ಸೃಷ್ಟಿ ಮಾಡಿದೆ. ಹೀಗಾಗಿ ರಷ್ಯಾ ಸೇನೆ ಹಾಗೂ ರಷ್ಯಾದ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ ಎನ್ನಲಾಗಿದೆ. ಯುದ್ಧ ನಡೆಯುವಾಗ ಪರಿಸ್ಥಿತಿ ಕೈಮೀರುತ್ತಿದೆ.

ಹಾಗೇ ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿಗಳು ಈಗ ಈ ಘಟನೆಯ ಬಗ್ಗೆ ಆಕ್ರೋಶ ಹೊರಹಾಕಿ, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ರಷ್ಯಾದ ಜೈಲಿನಲ್ಲಿ ಮೃತಪಟ್ಟ ವಿರೋಧ ಪಕ್ಷದ ನಾಯಕನ ಬಗ್ಗೆ ಸಂತಾಪ ಸೂಚಿಸಿವೆ ಪಾಶ್ಚಿಮಾತ್ಯ ದೇಶಗಳು. ಆದರೂ ರಷ್ಯಾ ತನ್ನ ವಿರೋಧಿಗಳಿಗೆ ಈಗ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಪುಟಿನ್ ಅವರ ನಡೆ, ಭಾರಿ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+