ಅಮೆರಿಕ ಅಧ್ಯಕ್ಷರಿಗೆ ಸಿಗುವ ಸಂಬಳ & ಸೌಲಭ್ಯಗಳೇನು?- ಭಾರತದ ರೂಪಾಯಿ ಲೆಕ್ಕದಲ್ಲಿ ಮಾಹಿತಿ ಇಲ್ಲಿದೆ
ನವದೆಹಲಿ, ನವೆಂಬರ್, 07: ಈಗಾಗಲೇ ಅಮೇರಿದ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಗಿದಿದ್ದು, ಫಲಿತಾಂಶವೂ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಬಹುಮತಗಳ ಅಂತರದಿಂದ ಡೆಮೊಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಇಲ್ಲಿನ ಅಧ್ಯಕ್ಷರಿಗೆ ಸಂಬಳ ಎಷ್ಟು ಹಾಗೂ ಏನೆಲ್ಲ ಸೌಲಭ್ಯಗಳು ಸಿಗುತ್ತವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ, ದೊಡ್ಣಣ್ಣ ಅಂತಲೇ ಗುರುತಿಸಿಕೊಂಡಿರುವ ಯುನೈಟೆಡ್ ಸ್ಟೇಟ್‌ನ ಅಧ್ಯಕ್ಷರು ಕೂಡ ಸರ್ಕಾರಿ ಉದ್ಯೋಗಿ ಆಗಿದ್ದಾರೆ. ಇವರು ಇತರೆ ದುಡಿಯುವ ಜನರಂತೆ ಸಂಬಳವನ್ನು ಪಡೆಯುತ್ತಾರೆ. ಹಾಗಾದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸಂಬಳದ ಸಣಪೂರ್ಣ ವಿವರವನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.

ಪ್ರಸ್ತುತ, ಯುಎಸ್ ಅಧ್ಯಕ್ಷರು $4,00,000 ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 3,37,45,920 ರೂಪಾಯಿ ಸಂಬಳ ಪಡೆಯುತ್ತಾರೆ. ಅಲ್ಲದೆ, ಅಧ್ಯಕ್ಷರು $1,00,000 ಅಂದರೆ 84,36,447.82 ರೂಪಾಯಿ ಪ್ರಯಾಣ ಖಾತೆ, ವೆಚ್ಚಗಳಿಗಾಗಿ ಹೆಚ್ಚುವರಿ $50,000 ಅಂದರೆ 42,18,400 ರೂಪಾಯಿ ಮತ್ತು ಮನರಂಜನೆಗಾಗಿ $19,000 ಅಂದರೆ 16,02,992 ರೂಪಾಯಿ ಭತ್ಯೆಯನ್ನು ಪಡೆಯುತ್ತಾರೆ.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರು ಟ್ರಂಪ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದಾರೆ. ಈ ಮೂಲಕ ಇದೀಹ ಅಧ್ಯಕ್ಷರಾಗುವ ಡೊನಾಲ್ಡ್ ಟ್ರಂಪ್ ತಮ್ಮ ಹಿಂದಿನವರಂತೆಯೇ ವಾರ್ಷಿಕ 4,00,000 ಡಾಲರ್ ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 3,37,45,920 ರೂಪಾಯಿ ಆದಾಯವನ್ನು ಪಡೆಯುತ್ತಾರೆ.
ಮಾಜಿ ಅಧ್ಯಕ್ಷರು ಪಡೆದ ಸಂಬಳ ಎಷ್ಟು?: ಪ್ರಸ್ತುತ, ಯುಎಸ್ ಅಧ್ಯಕ್ಷರು 4,00,000 ಡಾಲರ್ ಸಂಬಳವನ್ನು ಪಡೆಯುತ್ತಿದ್ದಾರೆ. 2001ರಲ್ಲಿ ಖಜಾನೆ ಧನವಿನಿಯೋಗ ಮಸೂದೆಯಲ್ಲಿ ಒಂದು ನಿಬಂಧನೆಯನ್ನು ಅಂಗೀಕರಿಸುವ ಮೂಲಕ ಕಾಂಗ್ರೆಸ್ ಈ ಮೊತ್ತವನ್ನು ಜಾರಿಗೆ ತಂದಿತ್ತು.
ಇನ್ನು 1969ರಿಂದ 2001ರ ವರೆಗೆ, ಅಧ್ಯಕ್ಷರ ವಾರ್ಷಿಕ ಸಂಬಳವು $2,00,000 ಅಂದರೆ ಭಾರತದ ಕರೆನ್ಸಿ ಲೆಕ್ಕದಲ್ಲಿ 1,68,73,336.92 ರೂಪಾಯಿ ಆಗಿತ್ತು. ಪರಿಹಾರದ ಹೆಚ್ಚಳವು ಅತ್ಯಂತ ಕಷ್ಟಕರವಾದ, ಬೇಡಿಕೆಯ, ಒಂದು ಎಂದು ಪರಿಗಣಿಸಲ್ಪಟ್ಟದ್ದಕ್ಕೆ ಗೌರವದ ಸಂಕೇತವಾಗಿ ಸೂಕ್ತವೆಂದು ಪರಿಗಣಿಸಲಾಯಿತು. ಬಳಿಕ ಈ ಮೊತ್ತವನ್ನು ಹೆಚ್ಚು ಮಾಡಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ, ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಟ್ರಂಪ್ ಕೂಡ 4,00,000 ಡಾಲರ್ ಸಂಬಳ ಪಡೆಯಲಿದ್ದಾರೆ.












Click it and Unblock the Notifications