ಆಟಂ ಬಾಂಬಿಗಿಂತ ಹೈಡ್ರೋಜನ್ ಬಾಂಬ್ ಭಯಂಕರ ಏಕೆ?

Posted By:
Subscribe to Oneindia Kannada

ನವದೆಹಲಿ, ಜ. 06: ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಸುದ್ದಿ ಇಡೀ ವಿಶ್ವವೇ ಬೆಚ್ಚುವಂತೆ ಮಾಡಿದೆ. ಹೈಡ್ರೋಜನ್ ಬಾಂಬ್ ಪರೀಕ್ಷೆ ಬೆನ್ನಲ್ಲೇ 5.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಒಂದು ಕಡೆ ಭೂಕಂಪ ಮತ್ತೊಂದೆಡೆ ಅಮೆರಿಕ ಸೇರಿದಂತೆ ಅನೇಕ ದೇಶಗಳಿಗೆ ಅಣ್ವಸ್ತ್ರ ಪ್ರಯೋಗದ ಭೀತಿ, ಅತಂಕ ಎದುರಾಗಿದೆ.

ಉತ್ತರ ಕೊರಿಯ ಪುಯೊಂಗ್‌ಯಾಂಗ್‌ನ ಪುಂಗಿಯೆರಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಸುದ್ದಿಯಿದೆ. ದಕ್ಷಿಣ ಕೊರಿಯಾ, ಜಪಾನ್, ಯುಎಸ್ಎ ವಿರೋಧ ವ್ಯಕ್ತಪಡಿಸಿವೆ. ಅಮೆರಿಕ, ಚೀನಾ, ರಷ್ಯಾ, ಜಪಾನ್, ಫ್ರಾನ್ಸ್ ದೇಶಗಳ ಪ್ರತಿನಿಧಿಗಳು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Know how Hydrogen Bomb Is More Dangerous Than An Atom Bomb

ಉತ್ತರ ಕೊರಿಯಾ ಈಗಾಗಲೇ ಮೂರು ಬಾರಿ ಆಟಂ ಬಾಂಬ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ. ಹೈಡ್ರೋಜನ್ ಬಾಂಬ್ ಪರೀಕ್ಷೆ ಬಗ್ಗೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕಿಮ್ ಜಾಂಗ್ ಉನ್ ಅವರು ಸುಳಿವು ನೀಡಿದ್ದರು. ಇಷ್ಟಕ್ಕೂ ಆತಂಕಕ್ಕೆ ಕಾರಣವೇನು?

* ಅಣ್ವಸ್ತ್ರಕ್ಕಿಂತ ಹೈಡ್ರೋಜನ್ ಬಾಂಬ್ ಅತ್ಯಂತ ವಿಧ್ವಂಸಕಾರಿ ಹಾಗೂ ಭಯಂಕರ ಪರಿಣಾಮಕಾರಿ.
* ಒಂದು ದೊಡ್ಡ ನಗರವನ್ನು ಒಂದೇ ಒಂದು ಬಾಂಬ್ ಸ್ಫೋಟದಿಂದ ಸಂಪೂರ್ಣ ನೆಲಸಮ ಮಾಡಿಬಿಡಬಹುದು.
* ಅಣು ಸಮ್ಮಿಳನ (Nuclear Fusion) ಹಾಗೂ ಅಣು ವಿದಳನ (Nuclear Fission) ಗಳಿಂದ ಹೊರ ಹೊಮ್ಮುವ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೈಡ್ರೋಜನ್ ಬಾಂಬ್ ತಯಾರಿಕೆಯಲ್ಲಿ ಅಣು ಸಮ್ಮಿಳನ ಪ್ರಕ್ರಿಯೆ ನಡೆಸಲಾಗುತ್ತದೆ. ಎರಡು ಅಥವಾ ಹೆಚ್ಚು ಅಣುಗಳು ಒಟ್ಟಿಗೆ ಕೂಡಿ ಭಾರಿ ಗಾತ್ರದ ಪರಮಾಣುವಾಗುವ ಪ್ರಕ್ರಿಯೆ ಇದಾಗಿದೆ.
* ಸಾಮಾನ್ಯವಾಗಿ ಹೈಡ್ರೋಜನ್ ಬಾಂಬ್ ತಯಾರಿಕೆ ಅತ್ಯಂತ ಕಷ್ಟಕರ ಹಾಗೂ ಮಾರಣಾಂತಿಕವಾಗಿದೆ.
* ಹಿರೋಷಿಮಾ ಹಾಗೂ ನಾಗಾಸಾಕಿಯಲ್ಲಿ ಹಾಕಿದ ಆಟಂ ಬಾಂಬ್ ನಿಂದಾದ ಪರಿಣಾಮದಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಹೈಡ್ರೋಜನ್ ಬಾಂಬ್ ಪರಿಣಾಮದ ಬಗ್ಗೆ ಸಹಜವಾಗಿ ಆತಂಕ ಉಂಟಾಗಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
North Korea has announced it had successfully carried out its first hydrogen bomb test, a move that had earned widespread condemnation from across the world.
Please Wait while comments are loading...