Russian President Vladimir Putin: ಅರೆಸ್ಟ್ ವಾರಂಟ್‌ನಿಂದ ಪುಟಿನ್ ಮೇಲೆ ಆಗಬಹುದಾದ ಪರಿಣಾಮ ತಿಳಿಯಿರಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ( ICC ) ಬಂಧನ ವಾರಂಟ್ ಹೊರಡಿಸಿದೆ. ಇದರಿಂದ ಪುಟಿನ್ ಮೇಲೆ ಆಗುವ ಪರಿಣಾಮದ ಬಗ್ಗೆ ತಿಳಿಯಿರಿ
ಹೇಗ್, ಮಾರ್ಚ್ 18: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ( Vladimir Putin ) ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ( ICC ) ಬಂಧನ ವಾರಂಟ್ ಹೊರಡಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾಸ್ಕೋದಿಂದ ದಾಳಿಗೊಳಗಾದ ಉಕ್ರೇನ್‌ನಲ್ಲಿ ನಡೆದ ಯುದ್ಧ ಅಪರಾಧಗಳಿಗೆ ಅವರು ಜವಾಬ್ದಾರರು ಎಂದು ಆರೋಪಿಸಿ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.
ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಆರೋಪಗಳಲ್ಲಿ ಮಕ್ಕಳ ಕಾನೂನುಬಾಹಿರ ಗಡೀಪಾರು ಕೂಡ ಸೇರಿದೆ. ಇದಕ್ಕಾಗಿ ನ್ಯಾಯಾಲಯವು ರಷ್ಯಾದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ- ಬೆಲೋವಾ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಈ ಆರೋಪಗಳನ್ನು ರಷ್ಯಾ ಸರ್ಕಾರ ನಿರಾಕರಿಸಿದೆ. ಮಾಸ್ಕೋ ICC ನ್ಯಾಯವ್ಯಾಪ್ತಿಯಲ್ಲಿ ಮಾಸ್ಕೋ ಬರುವುದಿಲ್ಲ. ಈ ಕಾರಣ ಬಂಧನ ವಾರಂಟ್ ಕಾನೂನುಬದ್ಧವಾಗಿ ' ಅನೂರ್ಜಿತವಾಗಿದೆ ' ಎಂದು ಪುಟಿನ್ ಸರ್ಕಾರ ಹೇಳಿದೆ.

ಈ ಬೆಳವಣಿಗೆಯ ನಡುವೆಯೇ ಪುಟಿನ್ ಅವರು ಯುದ್ಧ ಅಪರಾಧಗಳನ್ನು ಎಸಗಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಫೆಬ್ರವರಿ 24, 2022 ರಿಂದ ಉಕ್ರೇನ್‌ನಲ್ಲಿ ಅಪರಾಧಗಳನ್ನು ಎಸಗಲಾಗಿದೆ ಎಂದು ಐಸಿಸಿ ತೀರ್ಪು ನೀಡಿದೆ.
ವ್ಲಾಡಿಮಿರ್ ಪುಟಿನ್ ವಿರುದ್ಧದ ಆರೋಪಗಳೇನು?
'ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡುವ ಯುದ್ಧಾಪರಾಧಕ್ಕೆ ರಷ್ಯಾದ ಅಧ್ಯಕ್ಷರು ಕಾರಣರಾಗಿದ್ದಾರೆ. ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾಕ್ಕೆ ಮಕ್ಕಳನ್ನು ಕಾನೂನುಬಾಹಿರವಾಗಿ ವರ್ಗಾಯಿಸುವುದಕ್ಕೆ ಹೊಣೆಗಾರರಾಗಿದ್ದಾರೆ' ಎಂದು ICC ಹೇಳಿಕೆ ನೀಡಿದೆ.

ಪುಟಿನ್ ಅವರು ಇತರರೊಂದಿಗೆ ಸೇರಿ ನೇರವಾಗಿ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆ. 'ಕೃತ್ಯಗಳನ್ನು ಎಸಗಿರುವ ಮಿಲಿಟರಿ ಅಧೀನ ಅಧಿಕಾರಿಗಳ ಮೇಲೆ ಸರಿಯಾಗಿ ನಿಯಂತ್ರಣವನ್ನು ಚಲಾಯಿಸಲು ಪುಟಿನ್ ವಿಫಲರಾಗಿದ್ದಾರೆ. ಇದಕ್ಕೆ ಪುರಾವೆಗಳು ಇವೆ' ಎಂದು ICC ತಿಳಿಸಿದೆ.
ವಿಶ್ವಸಂಸ್ಥೆಯ ತನಿಖಾ ಆಯೋಗದ ವರದಿಯನ್ನು ಉಲ್ಲೇಖಿಸಿ BBC ವರದಿಯೊಂದನ್ನು ನೀಡಿದೆ. ಉಕ್ರೇನ್‌ನಿಂದ ಒತ್ತಾಯಪೂರ್ವಕವಾಗಿ ಕರೆದೊಯ್ದ ಮಕ್ಕಳಲ್ಲಿ ಕೆಲವರಿಗೆ ರಷ್ಯಾದ ಪೌರತ್ವವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ವರದಿ ಹೇಳಿದೆ.
ಇದರಿಂದಾಗಿ ಅವರು ರಷ್ಯಾದಲ್ಲಿ ಶಾಶ್ವತವಾಗಿ ಉಳಿಯುವಂತಾಗಿದೆ ಎಂದು ಬಿಬಿಸಿ ತಿಳಿಸಿದೆ. ವಿಶ್ವಸಂಸ್ಥೆಯ ತನಿಖಾಧಿಕಾರಿಗಳ ಪ್ರಕಾರ, 16,221 ಮಕ್ಕಳನ್ನು ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ಯಲಾಗಿದೆ. ಈ ಕೃತ್ಯಗಳು ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ರಷ್ಯಾ ಮಾಡಿದ ಇತರ ಯುದ್ಧ ಅಪರಾಧಗಳು ಯಾವುವು?
ಅತ್ಯಾಚಾರ ಮತ್ತು ಚಿತ್ರಹಿಂಸೆಯ ಹೊರತಾಗಿ, ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲಿನ ದಾಳಿಗೆ ರಷ್ಯನ್ನರು ಜವಾಬ್ದಾರರು ಎಂದು ಯುಎನ್ ತನಿಖಾಧಿಕಾರಿಗಳ ಸಮಿತಿ ಹೇಳಿದೆ ಎಂದು ಬಿಬಿಸಿ ವರದಿ ಮಾಡಿದೆ.

ಉಕ್ರೇನ್‌ನ ಬುಚಾ ಮತ್ತು ಇಜಿಯಂ (ಖಾರ್ಕಿವ್‌ನಲ್ಲಿ) ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಹೂಳಲಾಗಿದೆ. ಈ ಪ್ರದೇಶಗಳಲ್ಲಿ ರಷ್ಯಾ ಗಂಭೀರವಾದ ಅಪರಾಧಗಳು ಎಸಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಖರ್ಸನ್ ಪ್ರದೇಶದಲ್ಲಿ ಮಾತ್ರ 400 ಯುದ್ಧ ಅಪರಾಧಗಳನ್ನು ಎಸಗಿದ್ದಾರೆ ಎಂಬ ಆರೋಪವಿದೆ.
ಯುದ್ಧ ಅಪರಾಧಗಳನ್ನು ಹೇಗೆ ವಿಚಾರಣೆ ಮಾಡಲಾಗುತ್ತದೆ?
ನರಹತ್ಯೆ, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧಾಪರಾಧಗಳಂತಹ ಗಂಭೀರ ಅಪರಾಧಗಳನ್ನು ಐಸಿಸಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ. ಆದಾಗ್ಯೂ, ಶಂಕಿತರನ್ನು ಬಂಧಿಸಲು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪುಟಿನ್ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಅಂತರಾಷ್ಟ್ರೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications