ಜಗತ್ತನ್ನೇ ಸರ್ವನಾಶ ಮಾಡಲು ಸರ್ವಾಧಿಕಾರಿಯ ಬಾಂಬ್ ರೆಡಿ!

ಪ್ಯೊಂಗ್ಯಾಂಗ್: ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಜಂಟಿ ಸಮರಭ್ಯಾಸ ನಡೆಸಿದ ನಂತರ ಕೆಂಡ ಕಾರುತ್ತಿರುವ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇಡೀ ಜಗತ್ತನ್ನೇ ಸರ್ವನಾಶ ಮಾಡಲು ಹೊರಟಿದ್ದಾನಾ ಎಂಬ ಅನುಮಾನ ಮೂಡಿದೆ. ದಕ್ಷಿಣ ಕೊರಿಯಾ (South Korea) ಮತ್ತು ಅಮೆರಿಕಗೆ (America) ಪಾಠ ಕಲಿಸುವ ಭರದಲ್ಲಿ ಮತ್ತೊಂದು ಮಹಾ ಎಡವಟ್ಟು ಮಾಡಿದ್ದಾನೆ ಸರ್ವಾಧಿಕಾರಿ.

ಈಗಾಗಲೇ ಉತ್ತರ ಕೊರಿಯಾ ಬಳಿ 40ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳಿವೆ. ಇಷ್ಟು ಸಾಲದು ಎಂಬಂತೆ ಪ್ರತಿವರ್ಷ ಸುಮಾರು 6ರಿಂದ 7 ಪರಮಾಣು ಪರೀಕ್ಷೆಗಳನ್ನು ಉತ್ತರ ಕೊರಿಯಾ (North Korea) ನಡೆಸುತ್ತಲೇ ಬಂದಿದೆ. ಇದೀಗ ಅಮೆರಿಕದ ಮೇಲಿನ ಸಿಟ್ಟು ಮತ್ತು ದಕ್ಷಿಣ ಕೊರಿಯಾ ಮೇಲಿನ ಕೋಪಕ್ಕೆ ಮತ್ತಷ್ಟು ಪರಮಾಣು ಶಸ್ತ್ರಾಸ್ತ್ರ (Missile Test) ಪರೀಕ್ಷೆಗೆ ಮುಂದಾಗಿದ್ದಾನೆ ಉ.ಕೊರಿಯಾ ಸರ್ವಾಧಿಕಾರಿ ಕಿಮ್. ಉ.ಕೊರಿಯಾ ಮಿಲಿಟರಿ ಅಧಿಕಾರಿಗಳ ಉನ್ನತ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾನೆ ಸರ್ವಾಧಿಕಾರಿ.

Kim jong un instructed his military to prepare for another nuclear test

ಜಪಾನ್ ಮೇಲೆ ಪರಮಾಣು ಕ್ಷಿಪಣಿ!

2023ರ ಫೆಬ್ರವರಿಯಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪ್ರಯೋಗದ ಸಂದರ್ಭದಲ್ಲಿ ಜಗತ್ತಿಗೆ ಶಾಕ್ ಕೊಟ್ಟಿದ್ದ ಕಿಮ್. ಅಮೆರಿಕ & ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡುವ ಸಲುವಾಗಿ ಉ.ಕೊರಿಯಾ ಪರೀಕ್ಷಿಸಿದ್ದ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಜಪಾನ್ ಮೇಲೆ ಹಾರಿ ಹೋಗಿತ್ತು. ಕ್ಷಿಪಣಿ ಜಪಾನ್ ಸಮೀಪದಲ್ಲೇ ಪತನಗೊಂಡು ಭಯ ಮೂಡಿತ್ತು. ಜಪಾನ್ ನಾಯಕರ ಗುಂಡಿಗೆ ಅಲ್ಲಾಡಿ ಹೋಗಿತ್ತು. ಇದೀಗ ಮತ್ತೆ ಅಂತಹದ್ದೇ ಸಾಹಸಕ್ಕೆ ಕೈಹಾಕಲು ಕಿಮ್ ಜಾಂಗ್ ಉನ್ ಸಿದ್ಧತೆ ನಡೆಸಿದ್ದಾನೆ.

ಏಷ್ಯಾದಲ್ಲಿ ಅಮೆರಿಕದ ಡಬಲ್ ಗೇಮ್?

ಏಷ್ಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಹ ಸ್ಥಿತಿ ಎದುರಾಗಿದೆ. ಅಕ್ಕಪಕ್ಕದ ದೇಶಗಳ ಮಧ್ಯೆ ದ್ವೇಷದ ವಾತಾವರಣ ಬೆಳೆಯುತ್ತಲೇ ಇದೆ. ಇದೀಗ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವೆ ದಿಢೀರ್ ಮಾತುಕತೆಯೇ ನಿಂತು ಹೋಗಿದೆ. ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಜಂಟಿ ಸಮರಭ್ಯಾಸ ನಡೆಸಿದ ನಂತರ ದಕ್ಷಿಣ ಕೊರಿಯಾ ಜೊತೆಗಿನ ಸಂಪರ್ಕವನ್ನೇ ಸಂಪೂರ್ಣವಾಗಿ ಕಡಿದುಕೊಂಡಿದೆ ಉತ್ತರ ಕೊರಿಯಾ. ಈ ಕುರಿತು ಈಗಾಗಲೇ ದಕ್ಷಿಣ ಕೊರಿಯಾ ಆತಂಕ ಹೊರಹಾಕಿರುವ ಸಂದರ್ಭದಲ್ಲೇ ಮತ್ತೊಂದು ಕ್ಷಿಪಣಿ ಪ್ರಯೋಗಕ್ಕೆ ಕಿಮ್ ಸಿದ್ಧನಾಗಿದ್ದಾನೆ.

Kim jong un instructed his military to prepare for another nuclear test

ಸರ್ವಾಧಿಕಾರಿ ಕಿಮ್ ಗುಡುಗಿದರೆ ಅಷ್ಟೇ!

ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಸಮರಾಭ್ಯಾಸ ನಡೆಸಿದ ನಂತರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಪ ಮಿತಿಮೀರಿದೆ. ಅಮೆರಿಕ ಮತ್ತು ತನ್ನ ನೆರೆಯ ದೇಶ ಒಟ್ಟೊಟ್ಟಿಗೆ ಸೇರಿ ಪರೋಕ್ಷವಾಗಿ ಬೆದರಿಕೆ ಹಾಕುತ್ತಿರುವುದಾಗಿ ಉತ್ತರ ಕೊರಿಯಾ ಆಕ್ರೋಶ ಹೊರಹಾಕಿತ್ತು. ಈ ಸಿಟ್ಟನ್ನು ಹೊಸ ಪರಮಾಣು ಕ್ಷಿಪಣಿಯ ಮೂಲಕ ತೋರಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ. ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಕಳೆದ 4 ದಿನಗಳಿಂದ ಎರಡೂ ರಾಷ್ಟ್ರಗಳ ನಡುವಿನ ಮಾತುಕತೆ ನಿಲ್ಲಿಸಿದ್ದಾನೆ ಎನ್ನಲಾಗುತ್ತಿದೆ.

ಯುದ್ಧ ಭೀತಿಯಲ್ಲಿ ದ.ಕೊರಿಯಾ

'ಪಕ್ಕದ ದೇಶದಲ್ಲಿ ಕೂತಿರುವುದು ಮೊದಲೇ ಮೆಂಟಲ್ ಗಿರಾಕಿ, ಈಗಾಗಲೇ ಪರಮಾಣು ಶಸ್ತ್ರಾಸ್ತ್ರ ತೋರಿಸುತ್ತಾ ಬೆದರಿಕೆ ಬೇರೆ ಹಾಕುತ್ತಿದ್ದಾನೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಮೇಲೆ ನ್ಯೂಕ್ಲಿಯರ್ ದಾಳಿ ನಡೆದರೆ ಕಥೆ ಏನು?' ಅನ್ನೋ ಚಿಂತೆ ದಕ್ಷಿಣ ಕೊರಿಯಾ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಪದೇ ಪದೆ ಉತ್ತರ ಕೊರಿಯಾ ಅಧಿಕಾರಿಗಳನ್ನು ಸಂಪರ್ಕಿಸಲು ಕರೆ ಮಾಡುತ್ತಿದೆ ದಕ್ಷಿಣ ಕೊರಿಯಾ. ಆದರೆ ಕಳೆದ ಮೂರು ದಿನಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

Kim jong un instructed his military to prepare for another nuclear test

ಇಷ್ಟೆಲ್ಲದರ ನಡುವೆ ತನ್ನ ದೇಶದ ರಕ್ಷಣೆ ನೆಪದಲ್ಲಿ ಮತ್ತಷ್ಟು ಪರಮಾಣು ಶಸ್ತ್ರಾಸ್ತ್ರ ಸಂಗ್ರಹ ಮಾಡಿಕೊಳ್ಳುತ್ತಿದ್ದಾನೆ ಕಿಮ್ ಜಾಂಗ್ ಉನ್. ಈ ಕುರಿತು ಅಂತಾರಾಷ್ಟ್ರೀಯ ಸಮುದಾಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಅದರಲ್ಲೂ ಅಮೆರಿಕ ತುಟಿ ಬಿಚ್ಚುತ್ತಿಲ್ಲ. ತನ್ನ ಬೆಂಬಲಕ್ಕೆ ಚೀನಾ ಮತ್ತು ರಷ್ಯಾ ಇದೆ ಎಂಬ ನಂಬಿಕೆಯಲ್ಲೇ ಕಿಮ್ ಇಂತಹ ಪ್ರಯತ್ನಗಳಿಗೆ ಕೈಹಾಕುತ್ತಿದ್ದು, ಮೊದಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕಿದೆ ಎಂಬುದು ಉ.ಕೊರಿಯಾ ಅಕ್ಕಪಕ್ಕದ ರಾಷ್ಟ್ರಗಳ ಒತ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+