Kim Jong Un: ರೊಚ್ಚಿಗೆದ್ದ ಹುಚ್ಚು ದೊರೆ ಮಾಡಿದ್ದೇನು ಗೊತ್ತಾ?

ಕಿಮ್ ಜಾಂಗ್ ಉನ್ ಅಂದ್ರೆ ಉತ್ತರ ಕೊರಿಯಾ ಎನ್ನುವಂತಾಗಿದೆ, ಯಾಕಂದ್ರೆ ಸರ್ವಾಧಿಕಾರಿ ನಾಡಲ್ಲಿ ಬದುಕಬೇಕು ಅಂದ್ರೆ ಉತ್ತರ ಕೊರಿಯಾದ ಜನರು ಉಸಿರು ಬಿಡುವಂತೆ ಇಲ್ಲ. ಈ ಮಾತು ಮೀರಿ ಯಾರಾದರೂ ಎಗರಾಡಿದರೆ ಅವರ ಕಥೆ ಮುಗೀತು ಅಂತಾನೇ ಅರ್ಥ. ಇಷ್ಟು ಭಯ ಹುಟ್ಟಿಸಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಮತ್ತೊಮ್ಮೆ ಸಂಚಲನವನ್ನೇ ಸೃಷ್ಟಿ ಮಾಡಿದ್ದಾನೆ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಶತ್ರು ದೇಶಗಳು ಪ್ರತಿದಿನ ಕೂಡ ಹಿಡಿಶಾಪ ಹಾಕುತ್ತವೆ. ಈ ಪೈಕಿ ಪಕ್ಕದಲ್ಲೇ ಇರುವ ಜಪಾನ್ & ದಕ್ಷಿಣ ಕೊರಿಯಾ ಜನರು ಜೀವ ಕೈಯಲ್ಲಿ ಹಿಡಿದುಕೊಂಡೇ ಜೀವನ ನಡೆಸಬೇಕಿದೆ. ಯಾಕಂದ್ರೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಬಳಿ ದೊಡ್ಡ ದೊಡ್ಡ ನ್ಯೂಕ್ಲಿಯರ್ ಅಸ್ತ್ರಗಳನ್ನು ಇಟ್ಟುಕೊಂಡಿದ್ದಾನೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಹೆಜ್ಜೆ ಇಟ್ಟಿದ್ದಾನೆ ಕಿಮ್ಮಣ್ಣ. ಹಾಗಾದ್ರೆ ಈ ಹುಚ್ಚು ದೊರೆ ಮಾಡುತ್ತಿರುವ ಕೆಲಸ ಏನು?

Kim Jong Un Inspects North Korea s Nuclear-Powered Submarine Project

ನ್ಯೂಕ್ಲಿಯರ್ ಸಬ್‌ಮರೀನ್ ಯೋಜನೆ ರೆಡಿ?

ಉತ್ತರ ಕೊರಿಯಾ ತನ್ನ ಶತ್ರುಗಳನ್ನು ಹೆದರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಇದೀಗ ಮಾಡಿಕೊಂಡಿದೆ. ಹೀಗಾಗಿ ತನ್ನ ಬಳಿ ಪರಮಾಣು ಅಸ್ತ್ರಗಳು, ರಾಸಾಯನಿಕ ಅಸ್ತ್ರ ಸೇರಿ, ಜೈವಿಕ ಅಸ್ತ್ರಗಳನ್ನು ಕೂಡ ಸಿದ್ಧ ಮಾಡಿಕೊಂಡು ಕೂತಿದೆ. ಹೀಗಿದ್ದಾಗ ನ್ಯೂಕ್ಲಿಯರ್ ವೆಪನ್ಸ್ ಬಳಸಲು ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸುತ್ತಿರುವ ಕಿಮ್ ಜಾಂಗ್ ಉನ್ ಅಧಿಕಾರಿಗಳು, ನ್ಯೂಕ್ಲಿಯರ್ ಸಬ್‌ಮರೀನ್ ಯೋಜನೆಗೆ ಕೈಹಾಕಿದ್ದಾರೆ. ಈ ಯೋಜನೆ ಬಗ್ಗೆ ಪರಿಶೀಲಿಸಿರುವ ಕಿಮ್ ಜಾಂಗ್ ಉನ್, ಇಡೀ ಜಗತ್ತಿಗೆ ಮತ್ತೊಂದು ರೌಂಡ್ ಭಯ ಹುಟ್ಟಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+