Ukraine VS Russia: ಉತ್ತರ ಕೊರಿಯಾಗೆ ರಷ್ಯಾ ಭರ್ಜರಿ ಉಡುಗೊರೆ
ಮಾಸ್ಕೋ: ಕಿಮ್ ಜಾಂಗ್ ಉನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಮಧ್ಯೆ ಇದೀಗ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಮೊನ್ನೆ ಮೊನ್ನೆ ರಷ್ಯಾಗೆ ಭೇಟಿ ನೀಡಿದ್ದ ಸರ್ವಾಧಿಕಾರಿಗೆ ಭಾರಿ ದೊಡ್ಡ ಉಡುಗೊರೆಯೇ ಸಿಕ್ಕಿದೆ. ಅಮೆರಿಕ ವಿರುದ್ದ ತೊಡೆತಟ್ಟಿ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಕೈಜೋಡಿಸಿದ ಕಿಮ್‌ಗೆ ಡ್ರೋನ್‌ಗಳನ್ನ ಗಿಫ್ಟ್ ಆಗಿ ನೀಡಿದೆ ಅಮೆರಿಕದ ಶತ್ರು ರಾಷ್ಟ್ರ.
ಅಷ್ಟಕ್ಕೂ ರಕ್ಷಣಾ ಮೈತ್ರಿ ಸಾಧಿಸಲು ಕೆಲ ದಿನಗಳ ಹಿಂದೆ, ರಷ್ಯಾಗೆ ಭೇಟಿ ಕೊಟ್ಟಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ 6 ದಿನಗಳ ಪ್ರವಾಸ ಮುಗಿಸಿ ಭಾನುವಾರ ತಮ್ಮ ದೇಶಕ್ಕೆ ವಾಪಸ್ ಹೊರಟಿದ್ದಾನೆ. ರಷ್ಯಾ ಕಡೆಗೆ ತನ್ನ ವಿಶೇಷ ರೈಲಿನಲ್ಲಿ ತೆರಳಿದ್ದ ಕಿಮ್ ಜಾಂಗ್ ಉನ್‌ಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಖುದ್ದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತರ ಕೊರಿಯಾ ಅಧ್ಯಕ್ಷನ ಜೊತೆ ಡೀಲ್ ಫಿಕ್ಸ್ ಮಾಡಿದ್ದರು. ಈಗ ರಷ್ಯಾ ಕಡೆಯಿಂದ ಕಿಮ್‌ಗೆ ಭಾರಿ ಗಿಫ್ಟ್ ಸಿಕ್ಕಿದೆ. ಹಾಗಾದ್ರೆ ಉತ್ತರ ಕೊರಿಯಾ & ರಷ್ಯಾ ನಡುವೆ ನಡೆದಿರುವ ಒಪ್ಪಂದ ಏನು? ಮುಂದೆ ಓದಿ.

ಸರ್ವಾಧಿಕಾರಿಗೆ ಬುಲೆಟ್ ಪ್ರೂಫ್ ಜಾಕೆಟ್!
ಅಷ್ಟಕ್ಕೂ ತನ್ನ ಬುಲೆಟ್ ಪ್ರೂಫ್ ರೈಲಲ್ಲಿ ಉತ್ತರ ಕೊರಿಯಾಗೆ ವಾಪಸ್ ಬರುತ್ತಿರುವ ಈ ಸರ್ವಾಧಿಕಾರಿಗೆ ಕೈತುಂಬಾ ಉಡುಗೊರೆ ಕೊಟ್ಟಿದೆ ರಷ್ಯಾ. ರಷ್ಯಾದಿಂದ ಭಾನುವಾರ ಕಿಮ್ ನಿರ್ಗಮಿಸುವಾಗ ಪ್ರಿಮೊರಿ ಪ್ರದೇಶದ ಪ್ರಾದೇಶಿಕ ಗವರ್ನರ್ ಒಟ್ಟು 5 ಕಮಿಕೇಜ್ ಡ್ರೋನ್, ಬೇಹುಗಾರಿಕೆ ಸಮಾರ್ಥ್ಯ ಇರುವ 'ಗೆರಾನ್-25' ಡ್ರೋನ್ ಸೇರಿದಂತೆ ಥರ್ಮಲ್ ಕ್ಯಾಮೆರಾ ಮೂಲಕವೂ ಪತ್ತೆಹಚ್ಚಲು ಆಗದ ವಿಶೇಷ ಉಡುಪು ಮತ್ತು ಗುಂಡು ನಿರೋಧಕ ಜಾಕೆಟ್‌ಗಳ ಒಂದು ಸೆಟ್ ಅನ್ನ ಗಿಫ್ಟ್ ಆಗಿ ನೀಡಿದ್ದಾರೆ.
ಉತ್ತರ ಕೊರಿಯಾಗೆ ಹೋಗ್ತಾರಾ ಪುಟಿನ್?
ಮತ್ತೊಂದು ಕಡೆ ಕಿಮ್ ಹೊರಡುವಾಗ ಭರ್ಜರಿ ಬೀಳ್ಕೊಡುಗೆ ನೀಡಿದೆ ರಷ್ಯಾದ ಆಡಳಿತ. ರೈಲು ನಿಲ್ದಾಣದಲ್ಲಿ ಕಿಮ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಕಿಮ್‌ಗೆ ಅಂತಾ 'ಸ್ಲಾವಿಯಾಂಕಾ ವಿದಾಯ' ಪರೇಡ್ ನಡೆಯಿತು. ಅಲ್ಲದೆ ಕಿಮ್ ಜಾಂಗ್ ಉನ್‌ಗೆ ಸೂಕ್ತ ಭದ್ರತೆಯ ವ್ಯವಸ್ಥೆಯನ್ನೂ ನೀಡಿದ್ದ ರಷ್ಯಾ ಸೇನೆ, ಸುತ್ತಮುತ್ತಲ ಭಾಗದಲ್ಲಿ ಭಾರಿ ಬಂದೋಬಸ್ತ್ ಕೈಗೊಂಡಿತ್ತು. ಹಾಗೇ ಇನ್ನೊಂದು ಮಹತ್ವದ ಬೆಳವಣಿಗೆ ಕೂಡ ನಡೆದು, ಪುಟಿನ್ ಅವರನ್ನ ಕಿಮ್ ಜಾಂಗ್ ಉನ್ ತನ್ನ ದೇಶಕ್ಕೆ ಬರುವಂತೆ ಆಹ್ವಾನಿಸಿದ್ದಾನೆ.
ಮತ್ತೊಂದು ಕಡೆ ರೈಲಿನಲ್ಲಿ ಹೊರಡುವ ಮೊದಲು ರಷ್ಯಾ ನೈಸರ್ಗಿಕ ಸಂಪನ್ಮೂಲಗಳ ಸಚಿವ ಅಲೆಕ್ಸಾಂಡರ್ ಕೊಜ್ಲೋವ್ ನೇತೃತ್ವದ ರಷ್ಯಾ ನಿಯೋಗಕ್ಕೆ ಕಿಮ್ ಜಾಂಗ್ ಉನ್, ವಿದಾಯ ಹೇಳಿದ ವಿಡಿಯೋ 'ರಿಯಾ ನೊವೊಸ್ಟಿ' ಸುದ್ದಿ ಸಂಸ್ಥೆ ಪ್ರಸಾರ ಮಾಡಿದೆ. ಹಾಗೇ ಪುಟಿನ್ ಅವರನ್ನ ಉತ್ತರ ಕೊರಿಯಾಗೆ ಬರುವಂತೆ ಕಿಮ್ ಸ್ವಾಗತಿಸಿದ್ದು ಈ ಹಿನ್ನೆಲೆಯಲ್ಲಿ ಪುಟಿನ್ ಶೀಘ್ರದಲ್ಲೇ ಉತ್ತರ ಕೊರಿಯಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ನಲ್ಲಿ ಕಿಮ್ ಜಾಂಗ್ ಉನ್ ರಷ್ಯಾಗೆ ಭೇಟಿ ನೀಡಿ ದೊಡ್ಡ ಡೀಲ್ ಫಿಕ್ಸ್ ಮಾಡಿದ್ದಾರೆ. ಇದು ಈಗಾಗಲೇ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ನಿದ್ದೆ ಹಾರಿಹೋಗುವ ರೀತಿ ಭಯ ಹುಟ್ಟಿಸಿದೆ. ಅಮೆರಿಕ & ದಕ್ಷಿಣ ಕೊರಿಯಾ ನಾಯಕರು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಕೇರ್ ಮಾಡದ ಕಿಮ್, ರಷ್ಯಾ ನೀಡಿದ ಉಡುಗೊರೆ ಹೊತ್ತು ತನ್ನ ದೇಶದ ಕಡೆ ಪ್ರಯಾಣ ಆರಂಭಿಸಿದ್ದಾನೆ. ಈಗ ತನ್ನ ದೇಶಕ್ಕೆ ವಾಪಸ್ ಬಂದ ಮೇಲೆ ಇನ್ನೇನು ಅವಾಂತರ ಮಾಡುತ್ತಾನೋ ಈ ಸರ್ವಾಧಿಕಾರಿ ಅನ್ನೋ ಭಯ ಕೂಡ ಅಕ್ಕಪಕ್ಕದ ದೇಶಗಳಲ್ಲಿ ಸೃಷ್ಟಿಯಾಗಿದೆ.












Click it and Unblock the Notifications