ಅಬುದಾಬಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಕೇರಳ ಶಿಕ್ಷಕಿ

ದೆಹಲಿ, ಏಪ್ರಿಲ್ 30: ಕೊರೊನಾ ಸೋಂಕಿಗೆ ತುತ್ತಾಗಿದ್ದ ಭಾರತೀಯ ಮೂಲದ ಹಿರಿಯ ಶಿಕ್ಷಕಿಯೊಬ್ಬರು ಯುಎಇ ದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

Recommended Video

      ಗೋವಿನ ಸೇವೆಯನ್ನು ಹೀಗೂ ಮಾಡಬಹುದಾ ? | Oneindia Kannada

      ಪ್ರಿನ್ಸಿ ರಾಯ್ ಮ್ಯಾಥ್ಯೂ ಅಬುದಾಬಿ ಇಂಡಿಯನ್ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಆಕೆಯ ಪತಿ ರಾಯ್ ಮ್ಯಾಥ್ಯೂ ಸ್ಯಾಮ್ಯುಯೆಲ್ ಗಲ್ಫ್ ನ್ಯೂಸ್‌ಗೆ ತಿಳಿಸಿದ್ದಾರೆ.

      ಪತ್ನಿಯ ಸಾವಿನ ಬಗ್ಗೆ ಮಾತನಾಡಿತುವ ರಾಯ್ ಮ್ಯಾಥ್ಯೂ ಸ್ಯಾಮ್ಯುಯೆಲ್ 'ಕಳೆದ ಕೆಲವು ದಿನಗಳಿಂದ ನನ್ನ ಪತ್ನಿ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆಕೆಗೆ ಉಸಿರಾಟ ತೊಂದರೆ ಹೆಚ್ಚಾಯಿತು. ಆಸ್ಪತ್ರೆಯಲ್ಲಿ ಆಕೆಯನ್ನು ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ' ಎಂದು ತಿಳಿಸಿದ್ದಾರೆ.

      Kerala Teacher Died In Abu Dhabi From Corona

      ಕೇರಳ ಮೂಲದ ಪ್ರಿನ್ಸಿ ರಾಯ್ ಮ್ಯಾಥ್ಯೂ ದಂಪತಿಗೆ ಮೂವರು ಮಕ್ಕಳಿದ್ದರು ಎಂದು ತಿಳಿದು ಬಂದಿದೆ. ಕುಟುಂಬದ ಇತರೆ ಸದಸ್ಯರು ಆರೋಗ್ಯವಾಗಿದ್ದು, ಯಾವುದೇ ತೊಂದರೆಗಳಿಲ್ಲ ಎಂದು ಹೇಳಿದ್ದಾರೆ.

      ಶಿಕ್ಷಕಿಯ ಸಾವು ಇಡೀ ಶಾಲೆಗೆ ಆಘಾತ ತಂದಿದೆ. ಬಹಳ ವರ್ಷದಿಂದ ಅವರು ಇಂಗ್ಲಿಷ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಶಾಲೆಯ ಪ್ರಾಂಶುಪಾಲ ನೀರಜ್ ಭಾರ್ಗವ ಸಂತಾಪ ಸೂಚಿಸಿದ್ದಾರೆ.

      ಇನ್ನು ಯುಎಇನಲ್ಲಿ ಒಟ್ಟು 11,929 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 98 ಜನರು ಮೃತಪಟ್ಟಿದ್ದಾರೆ. 2329 ಜನರು ಈ ಸೋಂಕಿನಿಂದ ಈವರೆಗೂ ಚೇತರಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+