ನೇಪಾಳ: ಮತ್ತೊಂದು ವಿಮಾನ ದುರಂತ, 18 ಸಾವು

Kathmandu Nepal Airlines plane crash 21 dead on Feb 16 -2014
ಕಠ್ಮಂಡು, ಫೆ. 17: ನಿನ್ನೆ ಭಾನುವಾರ ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಎಲ್ಲ 18 ಪ್ರಯಾಣಿಕರ ಮೃತದೇಹಗಳು ಇಂದು ಪತ್ತೆಯಾಗಿವೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲವಾದರೂ ಹವಾಮಾನ ವೈಪರೀತ್ಯವೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದೆ.

ಬೆಳಗಿನ ಸುದ್ದಿ: ಬೆಟ್ಟ-ತಪ್ಪಲುಗಳಿಂದ ಆವೃತವಾದ ಹಿಮ ಪ್ರದೇಶ ನೇಪಾಳದಲ್ಲಿ ವಿಮಾನಯಾನ ದುಸ್ತರ ಮತ್ತು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಆಗಾಗ್ಗೆ ಪುಟ್ಟ ಪುಟ್ಟ ವಿಮಾನಗಳು ನೆಲದಿಂದ ಎದ್ದುಹೋದ ಕೆಲವೇ ನಿಮಿಷಗಳಲ್ಲಿ ಯಾವುದೋ ಬೆಟ್ಟಕ್ಕೆ ಡಿಕ್ಕಿ ಹೊಡೆದು ವಿಮಾನದಲ್ಲಿದ್ದ ಅಷ್ಟೂ ಮಂದಿ ಸುಟ್ಟು ಭಸ್ಮವಾದ ದುರಂತಗಳು ಘಟಿಸುತ್ತಲೇ ಇವೆ.

ಇದಕ್ಕೆ ತಾಜಾ ಸೇರ್ಪಡೆಯೆಂದರೆ ನಿನ್ನೆ ಮಧ್ಯಾಹ್ನ 1.30ರಲ್ಲಿ ಹೊರಟ ವಿಮಾನವೊಂದು 15ನೇ ನಿಮಿಷದಲ್ಲಿ ಅಪಘಾತಕ್ಕೀಡಾಗಿ ಪುಟ್ಟ ವಿಮಾನದಲ್ಲಿದ್ದ ಸಿಬ್ಬಂದಿ ಸಮೇತ 18 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ.

Nepal Airlines ದುರಂತಕ್ಕೀಡಾದ ನತದೃಷ್ಟ ವಿಮಾನ. ಸುಟ್ಟು ಕರಕಲಾದ ವಿಮಾನದ ಅವಶೇಷಗಳು ಪತ್ತೆಯಾಗಿವೆ. ರಾಜಕೀಯ ನಾಯಕರು, ಉನ್ನತಾಧಿಕಾರಿಗಳು ಮತ್ತು ಪತ್ರಕರ್ತರು ವಿಮಾನದಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+