ಮೌಲ್ಯಗಳ ಬಗ್ಗೆ ಮಾತನಾಡಿ ಡೊನಾಲ್ಡ್ ಟ್ರಂಪ್‌ಗೆ ಆಘಾತ ನೀಡಿದ ಭಾರತೀಯ ಮಹಿಳೆ ಕಮಲಾ ಹ್ಯಾರಿಸ್!
ಭಾರತ ಮೂಲದ ಮಹಿಳೆ ಒಬ್ಬರು ಅಮೆರಿಕದಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗುವ ಸಾಧ್ಯತೆ ದಟ್ಟವಾಗಿದ್ದು, ಇನ್ನು ಒಂದೇ ಒಂದು ಹೆಜ್ಜೆಯಲ್ಲಿ ಇತಿಹಾಸ ಬರೆಯಲು ಇದೀಗ ಸಿದ್ಧತೆ ನಡೆಸಿದ್ದಾರೆ. ಹೀಗಿದ್ದಾಗ ಭಾರತ ಮೂಲದ ಕಮಲಾ ಹ್ಯಾರಿಸ್ ಪರವಾಗಿ ಅಮೆರಿಕ & ಅಮೆರಿಕದ ಪ್ರಜೆಗಳು ಒಂದಾಗಿದ್ದು, ಸಿಕ್ಕಾಪಟ್ಟೆ ಸಪೋರ್ಟ್ ಸಿಗುತ್ತಿದೆ. ಇದೇ ಸಮಯದಲ್ಲಿ ಕಮಲಾ ಹ್ಯಾರಿಸ್ ಅವರು ಮೌಲ್ಯಗಳ ಬಗ್ಗೆ ಮಾತನಾಡಿ ಡೊನಾಲ್ಡ್ ಟ್ರಂಪ್‌ಗೆ ಆಘಾತವನ್ನ ನೀಡಿದ್ದಾರೆ! ಅಲ್ಲದೆ ಈ ಮೂಲಕ ಅಮೆರಿಕದ ಚುನಾವಣೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಈ ಬಾರಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಯಾಕಂದ್ರೆ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಅವಕಾಶ ಇದ್ದರೂ, ಅವರನ್ನ ಚುನಾವಣೆ ಕಣದಿಂದ ಹಿಂದೆ ಸರಿಸಲಾಗಿದೆ. ಅಲ್ಲದೆ ಭಾರತ ಮೂಲಕ ಕಮಲಾ ಹ್ಯಾರಿಸ್ ಅವರಿಗೆ ಅವಕಾಶವನ್ನ ನೀಡಿದೆ ಡೆಮಾಕ್ರಟಿಕ್ ಪಕ್ಷ. ಈಗಾಗಲೇ ಅಮೆರಿಕದ ಉಪಾಧ್ಯಕ್ಷ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ & ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಪರವಾಗಿ, ಹೆಚ್ಚಾಗಿ ಅಮೆರಿಕದ ಮತದಾರರ ಬೆಂಬಲವು ಸಿಗುತ್ತಿದೆ. ಹೀಗಿದ್ದಾಗಲೇ ಕಮಲಾ ಹ್ಯಾರಿಸ್ ಅವರು ತಮ್ಮ ಎದುರಾಳಿ ಡೊನಾಲ್ಡ್ ಟ್ರಂಪ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ಟ್ರಂಪ್ ವಿರುದ್ಧ ಕಮಲಾ ವಾಗ್ದಾಳಿ!
ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸಿಎನ್‌ಎನ್‌ಗೆ ಮಹತ್ವದ ಸಂದರ್ಶನ ನೀಡಿದ್ದಾರೆ ಕಮಲಾ ಹ್ಯಾರಿಸ್. ಹೀಗೆ ಮೊದಲನೇ ಸಂದರ್ಶನದಲ್ಲಿ ತಮ್ಮ ಮೌಲ್ಯಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕಮಲಾ ಹ್ಯಾರಿಸ್ ಅವರು, ನೀತಿ ಹಾಗೂ ದೃಷ್ಟಿಕೋನದಲ್ಲಿ ನನ್ನ ಮೌಲ್ಯಗಳು ಬದಲಾಗಿಲ್ಲ ಎಂದಿದ್ದಾರೆ. ಈ ಮೂಲಕ ನೇರವಾಗಿ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ಹೊರಹಾಕಿ ತಮ್ಮ ಚುನಾವಣಾ ಪ್ರಚಾರ ಮುಂದುವರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ಏನು?
ಇದರ ಜೊತೆಗೆ, ಕಮಲಾ ಹ್ಯಾರಿಸ್ ಅವರು ಇದೀಗ ಅಮೆರಿಕದ ಹಾಲಿ ಅಧ್ಯಕ್ಷರಾದ ಜೋ ಬೈಡನ್ ಅವರ ಆಡಳಿತದ ಬಗ್ಗೆ ಕೂಡ ಮಾತನಾಡಿದ್ದಾರೆ. ಜೋ ಬೈಡನ್ ನೇತೃತ್ವದಲ್ಲೀಗ ಉತ್ತಮ ಆಡಳಿತ ನೀಡಿದ್ದೇವೆ. ಆರ್ಥಿಕತೆ ಸವಾಲಿನಿಂದ ಕೂಡಿದ ವಿಷಯವಾಗಿದ್ದು, ಇನ್ನೂ ಉತ್ತಮ ಕೆಲಸ ಮುಂದುವರಿಸಬೇಕಿದೆ ಎಂದಿದ್ದಾರೆ ಕಮಲಾ ಹ್ಯಾರಿಸ್. ಈ ಕುರಿತು ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಕಮಲಾ ಹ್ಯಾರಿಸ್ ಅವರ ಸಂದರ್ಶನ ತುಂಬಾ ಬೋರಿಂಗ್ ಆಗಿತ್ತು ಎಂದಿದ್ದಾರೆ. ಅಲ್ಲದೆ ಕಮಲಾ ಹ್ಯಾರಿಸ್ ಅವರ ಬಗ್ಗೆ 'ನಾಯಕಿ ಅಲ್ಲ' ಎಂಬ ಪದ ಬಳಕೆ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್!












Click it and Unblock the Notifications