ಕಮಲಾ ಹ್ಯಾರಿಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಡೊನಾಲ್ಡ್ ಟ್ರಂಪ್ ಸೋಲು...
ಪ್ರಪಂಚದ ಪಾಲಿಗೆ ದೊಡ್ಡಣ್ಣ ಎಂಬ ಬಿರುದು ಪಡೆದ & ಜಾಗತಿಕ ಅರ್ಥ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಅಮೆರಿಕದ ಅಧ್ಯಕ್ಷಿಯ ಚುನಾವಣೆ ಕುತೂಹಲ ಮೂಡಿಸುವ ಹಂತಕ್ಕೆ ಬಂದು ನಿಂತಿದೆ. ಒಂದು ಕಡೆ ಈ ಚುನಾವಣೆ ಡೊನಾಲ್ಡ್ ಟ್ರಂಪ್ ಅವರಿಗೆ ಅಗ್ನಿ ಪರೀಕ್ಷೆ ಆಗಿದೆ. ಹಾಗೇ ಮತ್ತೊಂದು ಕಡೆ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರಿಗೆ ಹೊಸ ಇತಿಹಾಸ ಬರೆಯಲು ಕ್ಷಣಗಣನೆ ಆರಂಭ ಆಗಿದೆ. ಹೀಗಿದ್ದ ವೇಳೆ ಅಮೆರಿಕದ ಚುನಾವಣಾ ಸಮೀಕ್ಷೆಗಳು ಮತ್ತೊಮ್ಮೆ ಏನು ಹೇಳಿವೆ ಗೊತ್ತೆ?
ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಹವಾ ಕಂಡು ಸ್ವತಃ ಅಲ್ಲಿನ ಹಿರಿಯ ರಾಜಕಾರಣಿಗಳೇ ಸುಸ್ತಾಗಿ ಹೋಗಿದ್ದಾರೆ. ಯಾಕಂದ್ರೆ ಯುವಕರಿಂದ ಹಿಡಿದು ಹಿರಿಯರ ತನಕ ಕಮಲಾ ಹ್ಯಾರಿಸ್ ಅವರ ನಾಯಕತ್ವದ ಗುಣಗಳು & ಭಾಷಣ ಗಮನ ಸೆಳೆಯುತ್ತಿದೆ. 2008 ರಲ್ಲಿ ಬರಾಕ್ ಒಬಾಮಾ ಗಮನ ಸೆಳೆದ ರೀತಿಯೇ ಇದೀಗ ಕಮಲಾ ಹ್ಯಾರಿಸ್ ಕೂಡ ಅಮೆರಿಕನ್ನರ ಮತ ಸಳೆಯುವ ಕಾರ್ಯದಲ್ಲಿ ಯಶಸ್ವಿ ಆಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಜೊತೆಗೆ ಕಮಲಾ ಹ್ಯಾರಿಸ್ ಇತ್ತೀಚೆಗೆ ಮುಖಾಮುಖಿ ಚರ್ಚೆಯಲ್ಲಿ ಭಾಗವಹಿಸಿದ್ದ ನಂತರ, ಗೆಲುವಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು!

ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಹವಾ!
ಪ್ರಪಂಚದಲ್ಲಿ ಅತ್ಯಂತ ಬಲಶಾಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶಗಳ ಪೈಕಿ, ಅಮೆರಿಕ ಕೂಡ ಮುಂಚೂಣಿ ದೇಶವೇ ಆಗಿದೆ. ಅದರಲ್ಲೂ ಅಮೆರಿಕ ಅಭಿವೃದ್ಧಿ ವಿಚಾರ ಬಂದಾಗ ಕೂಡ ಸಾಕಷ್ಟು ಮುಂದುವರಿದಿದೆ. ಅದೇ ರೀತಿ ತನ್ನ ಅಧ್ಯಕ್ಷೀಯ ಚುನಾವಣೆಗೆ ಕೂಡ ವಿಶೇಷವಾಗಿ ಗಮನ ಸೆಳೆಯುತ್ತದೆ. ಐತಿಹಾಸಿಕವಾಗಿ ನಡೆದು ಬಂದ ಸಂಪ್ರದಾಯ & ವಿಚಾರಗಳನ್ನ ಈಗಲು ಕೂಡ ಮುಂದುವರಿಸಿಕೊಂಡು ಬರುತ್ತಿದ್ದಾರೆ ಅಲ್ಲಿನ ರಾಜಕಾರಣಿಗಳು. ಇದೇ ವಿಚಾರ ಈಗ ಕಮಲಾ ಹ್ಯಾರಿಸ್‌ಗೆ ಬಲ ತುಂಬುತ್ತಿದೆ.
ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ?
ಡೊನಾಲ್ಡ್ ಟ್ರಂಪ್ ದಿನದಿಂದ ದಿನಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿಗೆ ಹತ್ತಿರ ಆಗುತ್ತಿದ್ದಾರೆ ಎನ್ನುತ್ತಿರುವ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆಗಳು ಇದೀಗ ಮತ್ತೊಮ್ಮೆ ಕಮಲಾ ಹ್ಯಾರಿಸ್ ಪರವಾಗಿ ತೀರ್ಪು ನೀಡುತ್ತಿವೆ. ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಗೆಲುವಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಅಲ್ಲದೆ ಈಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಮೀಕ್ಷೆಗಳಲ್ಲಿ ಮತ್ತಷ್ಟು ಹೆಚ್ಚಿನ ಅಂಕಗಳನ್ನ ಇದೇ ಕಮಲಾ ಹ್ಯಾರಿಸ್ ಗಳಿಸಿದ್ದು ಮತದಾರರ ಗಮನ ಸೆಳೆಯುತ್ತಿದ್ದಾರೆ.












Click it and Unblock the Notifications