ಟ್ರಂಪ್ ಸೋಲಿಸಲು ಕಮಲಾ ಹ್ಯಾರಿಸ್ ಅಬ್ಬರದ ಪ್ರಚಾರ, ಸಿಗುತ್ತಾ ಮಹಿಳೆಯರ ಪೂರ್ಣ ಬೆಂಬಲ?
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಇದೀಗ ಕಮಲಾ ಹ್ಯಾರಿಸ್ ಫುಲ್ ಅಲರ್ಟ್ ಆಗಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಕಮಲಾ ಹ್ಯಾರಿಸ್ ಈಗಾಗಲೇ ಡೊನಾಲ್ಡ್ ಟ್ರಂಪ್ ಅವರನ್ನು ಮೀರಿಸಿ ಮುಂದೆ ನುಗ್ಗುತ್ತಿದ್ದಾರೆ. ಮಾತುಗಾರಿಕೆ ವಿಚಾರದಲ್ಲಿ ಕೂಡ ಕಮಲಾ ಹ್ಯಾರಿಸ್ ಅವರು ಸಾಕಷ್ಟು ಮುಂದೆ ಇದ್ದು, ಭಾರತ ಮೂಲದ ನಂಟನ್ನು ಹೊಂದಿರುವ ಕಮಲಾ ಗೆಲುವು ಗ್ಯಾರಂಟಿನಾ? ಕಮಲಾ ಹ್ಯಾರಿಸ್‌ಗೆ ಸಿಗುತ್ತಾ ಮಹಿಳೆಯರ ಪೂರ್ಣ ಬೆಂಬಲ?
ಅಮೆರಿಕದ ಇತಿಹಾಸದಲ್ಲೇ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೊಸ ಇತಿಹಾಸ ಬರೆಯಲು ಇದೀಗ ಕಮಲಾ ಹ್ಯಾರಿಸ್ ಅವರು ಸಜ್ಜಾಗಿದ್ದಾರೆ. ಇದೇ ಕಾರಣಕ್ಕೆ ಕಮಲಾ ಅಮೆರಿಕದಲ್ಲಿ ಪ್ರತಿಯೊಂದು ರಾಜ್ಯಗಳಿಗೂ ಹೋಗಿ, ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಪರವಾಗಿ ಮಹಿಳೆಯರ ಬೆಂಬಲ ಹೆಚ್ಚಾಗಿದ್ದು, ಇದು ಕಮಲಾ ಹ್ಯಾರಿಸ್ ಗೆಲುವಿನ ಮುನ್ಸೂಚನೆ ಎಂಬ ವಿಶ್ಲೇಷಣೆಗಳು ಕೂಡ ಕೇಳಿ ಬಂದಿದೆ. ಈ ಸಂದರ್ಭಲ್ಲೇ ಡೊನಾಲ್ಡ್ ಟ್ರಂಪ್ ಪರಿಸ್ಥಿತಿ ಏನಾಗಿದೆ ಗೊತ್ತಾ? ಮುಂದೆ ಓದಿ.

ಡೊನಾಲ್ಡ್ ಟ್ರಂಪ್‌ಗೆ ಮಹಿಳೆಯರ...
ಅಮೆರಿಕದಲ್ಲಿ ಒಂದು ಬಾರಿ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ 2020ರ ಚುನಾವಣೆ ಸಮಯದಲ್ಲಿ ಭಾರಿ ಅಸಮಾಧಾನ ಇತ್ತು. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಎದುರು ಸೋತು ಮನೆಗೆ ಹೋದರು. ಆದರೆ ಮತ್ತೊಮ್ಮೆ, ಅಮೆರಿಕದ ಅಧ್ಯಕ್ಷೀಯ ಸ್ಥಾನ ಪಡೆಯಬೇಕು ಎಂಬ ಹಠದಲ್ಲಿ ಟ್ರಂಪ್ ಹೋರಾಟ ಶುರು ಆಗಿದೆ. ಇಂತಹ ಸಮಯದಲ್ಲೇ ಟ್ರಂಪ್ ಅವರಿಗೆ ಮಹಿಳೆಯರ ಬೆಂಬಲ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದು ಟ್ರಂಪ್ ಅವರಿಗೆ ಆಘಾತ ನೀಡಿದ್ದರೆ ಕಮಲಾ ಬೆಂಬಲಿಗರಲ್ಲಿ ಹುಮ್ಮಸ್ಸು ತುಂಬಿದೆ.
ಟ್ರಂಪ್ & ಕಮಲಾ ಫೈಟಿಂಗ್ ಜೋರು!
ಈಗಿರುವ ಮಾಹಿತಿ ಪ್ರಕಾರ ಡೊನಾಲ್ಡ್ ಟ್ರಂಪ್ ಅವರಿಗೆ ಅತಿಹೆಚ್ಚಾಗಿ ಬೆಂಬಲ ಸಿಗುತ್ತಿರುವುದು ಪುರುಷರಿಂದ. ಆದರೆ ಅಮೆರಿಕದ ಮಹಿಳಾ ಮತದಾರರ ಮನಸ್ಸು ಗೆಲ್ಲುವಲ್ಲಿ ಡೊನಾಲ್ಡ್ ಟ್ರಂಪ್ ಯಶಸ್ವಿ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮತ್ತೊಂದ್ಕಡೆ, ಆಫ್ರಿಕನ್ ಅಮೆರಿಕನ್ ಮತದಾರರ ವೋಟ್ ಹೆಚ್ಚಾಗಿ ಟ್ರಂಪ್ ಅವರಿಗೆ ಬೀಳುವುದಿಲ್ಲ. ಇಂತಹ ಸಮಯ ಕಮಲಾ ಹ್ಯಾರಿಸ್ ಅವರಿಗೆ ವರದಾನವಾಗಿ ಪರಿಣಮಿಸಿದೆ. ಅಲ್ಲದೆ ಇದನ್ನೇ ಅಸ್ತ್ರ ಮಾಡಿಕೊಂಡಿರುವ ಕಮಲಾ ಹ್ಯಾರಿಸ್ ಅದ್ಧೂರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅಮೆರಿಕ ಮತದಾರನ ಒಲವು ಯಾರ ಪರವಾಗಿ? ಅನ್ನೋದು ಮುಂದಿನ ತಿಂಗಳು ಗೊತ್ತಾಗಲಿದೆ.












Click it and Unblock the Notifications