Kamala Harris: ಕಮಲಾ ಹ್ಯಾರಿಸ್ ಆರೋಗ್ಯದ ಬಗ್ಗೆ ಸ್ಫೋಟಕ ಮಾಹಿತಿ!

ಭಾರತ ಮೂಲದ ತಾಯಿಗೆ ಜನಿಸಿದ & ಅಮೆರಿಕ ಉಪಾಧ್ಯಕ್ಷರಾಗಿ 4 ವರ್ಷ ಆಡಳಿತ ನಡೆಸಿ ಗಮನ ಸೆಳೆದಿರುವ ಕಮಲಾ ಹ್ಯಾರಿಸ್ ಅವರು ಇದೀಗ ಜಗತ್ತಿನಾದ್ಯಂತ ಗಮನ ಸೆಳೆದಿದ್ದಾರೆ. ಅದರಲ್ಲೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬೀಗಲು ಕಮಲಾ ಹ್ಯಾರಿಸ್ ಅವರು ಸಿದ್ಧರಾಗಿದ್ದು, ಇದೇ ಸಮಯದಲ್ಲಿ ಕಮಲಾ ಹ್ಯಾರಿಸ್ ಆರೋಗ್ಯದ ಬಗ್ಗೆ ಸ್ಫೋಟಕ ಮಾಹಿತಿ ಇದೀಗ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ, ಕಮಲಾ ಹ್ಯಾರಿಸ್ ಅವರ ಆರೋಗ್ಯ ಹೇಗಿದೆ? ಬನ್ನಿ ಮಾಹಿತಿ ತಿಳಿಯೋಣ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಇದಕ್ಕಾಗಿ ಅಖಾಡ ಸಜ್ಜಾಗಿದ್ದು, ಸಖತ್ ಸಿದ್ಧತೆ ನಡೆಸುತ್ತಿದ್ದಾರೆ ಅಮೆರಿಕದ ಚುನಾವಣಾ ಅಧಿಕಾರಿಗಳು. ಮತ್ತೊಂದು ಕಡೆ ನಾನು ಗೆಲ್ಲಬೇಕು, ನಾನು ಗೆಲ್ಲಬೇಕು ಅಂತಾ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಫುಲ್ ಫೈಟಿಂಗ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ದಿನಕ್ಕೊಂದು ಹೊಸ ಅಸ್ತ್ರ ಪ್ರಯೋಗ ಮಾಡುತ್ತಿರುವ ಕಮಲಾ ಹ್ಯಾರಿಸ್ ಅವರು, ಇದೀಗ 'ಆರೋಗ್ಯ' ಅಸ್ತ್ರ ಬಿಟ್ಟಿದ್ದಾರೆ!

Kamala Harris Health Report Matter Is Getting Viral

ಕಮಲಾ ಹ್ಯಾರಿಸ್ ಆರೋಗ್ಯ ಹೇಗಿದೆ?

ಭಾರತ ಮೂಲದ ಅಂದ್ರೆ, ಚೆನ್ನೈ ಮೂಲದ ಹೆಣ್ಣು ಮಗಳ ಪುತ್ರಿ ಕಮಲಾ ಹ್ಯಾರಿಸ್. ಈ ಹಿನ್ನೆಲೆಯಲ್ಲಿ ಕಮಲಾ ಹ್ಯಾರಿಸ್ ಅವರು ಕೂಡ ಭಾರತದ ಹೆಣ್ಣು ಮಗಳೇ ಆಗಿದ್ದಾರೆ. ಈ ಕಾರಣಕ್ಕೆ ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತಿರುವ ಭಾರತೀಯರು, ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಅವರು ಆಯ್ಕೆಯಾಗಿ ಇತಿಹಾಸ ಸೃಷ್ಟಿ ಮಾಡಬೇಕು ಅಂತಾ ಕಾಯುತ್ತಿದ್ದಾರೆ.

ಹೀಗೆ ವಾತಾವರಣ ಕೂಡ ಕಮಲಾ ಹ್ಯಾರಿಸ್ ಪರವಾಗೇ ಇದ್ದು, ಭರ್ಜರಿ ಸುದ್ದಿಯೊಂದು ಈಗ ಹೊರಬಿದ್ದಿದೆ. ಅದು ಏನಂದ್ರೆ ಕಮಲಾ ಹ್ಯಾರಿಸ್ ಅವರು ಸಂಪೂರ್ಣ ಆರೋಗ್ಯಕರವಾಗಿ ಇದ್ದು, ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದೇ ವಿಚಾರ ಮುಂದೆ ಇಟ್ಟುಕೊಂಡು ಇದೀಗ ಡೊನಾಲ್ಡ್ ಟ್ರಂಪ್ ಅವರಿಗೆ ತಿರುಗೇಟನ್ನು ನೀಡಿದ್ದಾರೆ ಕಮಲಾ ಹ್ಯಾರಿಸ್. ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ಹೆಲ್ತ್ ರಿಪೋರ್ಟ್ ಅಂದ್ರೆ ಆರೋಗ್ಯದ ವರದಿ ಬಿಡುಗಡೆ ಮಾಡಲಿ ಅಂತಾ ಸವಾಲು ಹಾಕಿದ್ದಾರೆ ಕಮಲಾ ಹ್ಯಾರಿಸ್.

ಡೊನಾಲ್ಡ್ ಟ್ರಂಪ್ ಆರೋಗ್ಯ ಹೇಗಿದೆ?

ಅಮೆರಿಕದ ಅಧ್ಯಕ್ಷರಾಗಿ 2016 ರಿಂದ 2020ರ ತನಕ ಅಧಿಕಾರ ನಡೆಸಿದ್ದ ಡೊನಾಲ್ಡ್ ಟ್ರಂಪ್ ಅವರು, ಹಲವು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಹೀಗಿದ್ದಾಗ 2024 ರಲ್ಲಿ ಮತ್ತೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಬೇಕು ಅಂತಾ ಹೋರಾಡುತ್ತಿದ್ದಾರೆ. ಇದೇ ಸಮಯದಲ್ಲಿ ಕಮಲಾ ಹ್ಯಾರಿಸ್ ಅವರು ತಮ್ಮ ಹೆಲ್ತ್ ರಿಪೋರ್ಟ್ ಬಿಡುಗಡೆ ಮಾಡಿ, ಡೊನಾಲ್ಡ್ ಟ್ರಂಪ್ ಅವರ ಹೆಲ್ತ್ ರಿಪೋರ್ಟ್ ಕೂಡ ಕೇಳುತ್ತಿದ್ದಾರೆ. ಈ ವಿಚಾರ ಇದೀಗ ದೊಡ್ಡ ಸಂಚಲನ ಸೃಷ್ಟಿಸಿದೆ. ಕಮಲಾ ಹ್ಯಾರಿಸ್ ಅವರ ಸವಾಲು ಸ್ವೀಕರಿಸಿ ಡೊನಾಲ್ಡ್ ಟ್ರಂಪ್ ತಮ್ಮ ಹೆಲ್ತ್ ರಿಪೋರ್ಟ್ ರಿಲೀಸ್ ಮಾಡುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+