ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಅಧಿಕೃತ ಹೋರಾಟ ಆರಂಭ!

ಕಮಲಾ ಹ್ಯಾರಿಸ್ ಭಾರತ ಮೂಲದ ಮಹಿಳೆ ಆಗಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭರ್ಜರಿ ಹವಾ ಸೃಷ್ಟಿ ಮಾಡಿದ್ದಾರೆ. ಅದರಲ್ಲೂ ಭಾರತ ಮೂಲದ ಒಬ್ಬರು ಇದೇ ಮೊದಲ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂಬುದೇ ದೊಡ್ಡ ವಿಚಾರ. ಹೀಗಿದ್ದಾಗಲೇ ಡೆಮಾಕ್ರಟಿಕ್ ಪಕ್ಷವು ಕಮಲಾ ಹ್ಯಾರಿಸ್ ಅವರನ್ನು ತಮ್ಮ ಪಕ್ಷದಿಂದ ಅಧಿಕೃತವಾಗಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿ ಎಂದು ಘೋಷಣೆ ಮಾಡಿದೆ.

ಅಮೆರಿಕ ಚುನಾವಣೆ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ. ಯಾಕಂದ್ರೆ, ಅಮೆರಿಕದ ಅಧ್ಯಕ್ಷರು ಅಂದ್ರೆ ಅಷ್ಟೇ ಪವರ್‌ಫುಲ್ ಆಗಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಅಧ್ಯಕ್ಷರಿಗೆ ದೊಡ್ಡ ಗೌರವ ಇರುತ್ತದೆ. ಹಾಗೇ ಭವಿಷ್ಯದಲ್ಲಿ ಅಮೆರಿಕ ಎಂಬ ದೊಡ್ಡ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಕೂಡ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗುವ ವ್ಯಕ್ತಿಯ ಮೇಲೆ ಇರುತ್ತದೆ. ಹೀಗಾಗಿಯೇ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಎಂಬ ಕುತೂಹಲ ಕೆರಳಿದೆ.

Kamala Harris And Donald Trump Will Start Fight For President Election Officially

ಸಂಕಷ್ಟದಲ್ಲಿ ಸಿಲುಕಿರುವ ಅಮೆರಿಕ

ಆರ್ಥಿಕವಾಗಿ ಅಮೆರಿಕ ಇದೀಗ ಭಾರಿ ದೊಡ್ಡ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗುವವರು ದೊಡ್ಡ ಸಮಸ್ಯೆಗಳನ್ನ ಎದುರಿಸಬೇಕಾದ ಒತ್ತಡದಲ್ಲಿ ಸಿಲುಕಲಿದ್ದಾರೆ. ಇಷ್ಟೆಲ್ಲಾ ವಿಚಾರಗಳ ನಡುವೆ ಭಾರತ ಮೂಲದ ನಂಟು ಹೊಂದಿರುವ & ಅಮೆರಿಕ ದೇಶದಲ್ಲಿ ಹುಟ್ಟಿ ಬೆಳೆದಿರುವ, ಕಮಲಾ ಹ್ಯಾರಿಸ್ ಅವರಿಗೆ ಈ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವ ಎಲ್ಲಾ ಅವಕಾಶಗಳು ಸಿಗುತ್ತಿವೆ. ಈಗಾಗಲೇ ಒಂದು ಬಾರಿ ಅಮೆರಿಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡೊನಾಲ್ಡ್ ಟ್ರಂಪ್, ದಿನದಿಂದ ದಿನಕ್ಕೆ ಸೋಲಿಗೆ ಹತ್ತಿರ ಆಗುತ್ತಿದ್ದಾರೆ ಎನ್ನುತ್ತಿವೆ ಅಮೆರಿಕದ ಚುನಾವಣಾ ಪೂರ್ವ ಸಮೀಕ್ಷೆಗಳು.

ಡೊನಾಲ್ಡ್ ಟ್ರಂಪ್‌ಗೆ ಶುರುವಾಗಿದೆ ಭಯ

ಒಟ್ನಲ್ಲಿ ಕಮಲಾ ಹ್ಯಾರಿಸ್ ಈ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದೇ ನಿಜವಾದ್ರೆ ಅಮೆರಿಕದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲಿದ್ದಾರೆ. ಯಾಕಂದ್ರೆ, ಅಮೆರಿಕದಲ್ಲಿ ಈವರೆಗೂ ಯಾವುದೇ ಮಹಿಳಾ ಅಧ್ಯಕ್ಷರು ದೇಶವನ್ನು ಆಳಿಲ್ಲ. ಹೀಗಾಗಿ ಕಮಲಾ ಅವರಿಗೆ ಈ ಬಾರಿ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹಿಂದೆ, ಅಮೆರಿಕದ ಅಧ್ಯಕ್ಷರಾಗಿದ್ದ ಹಲವು ನಾಯಕರು ಕೂಡ ಕಮಲಾ ಹ್ಯಾರಿಸ್ ಪರವಾಗಿ ಇದೀಗ ಬೆಂಬಲ ಸೂಚಿಸುತ್ತಿದ್ದಾರೆ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಇದೇ ಕಾರಣಕ್ಕೆ ಇದೀಗ ಭಯ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+