ಬಾಂಬ್ ಸ್ಫೋಟ: ಬಸ್ಸಿನಲ್ಲಿದ್ದ ನಾಲ್ವರು ಪ್ರವಾಸಿಗರು ಸಾವು
ಕೈರೋ, ಡಿಸೆಂಬರ್ 29: ಈಜಿಪ್ಟಿನ ಕೈರೋದ ಗಿಜಾ ಪಿರಮಿಡ್ ಸಮೀಪದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ವರು ಪ್ರವಾಸಿಗರು ಬಲಿಯಾಗಿದ್ದಾರೆ.
ವಿಯೆಟ್ನಾಂನಿಂದ ಬಂದಿದ್ದ ಉಳಿದ 11 ಪ್ರವಾಸಿಗರು ಮತ್ತು ಈಜಿಪ್ಟ್‌ನ ಬಸ್ ಚಾಲಕ ಗೃಹ ತಯಾರಿತ ಸ್ಫೋಟಕದಿಂದ ಗಾಯಗೊಂಡಿದ್ದಾರೆ.
ಅಲ್ ಹರಮ್ ಜಿಲ್ಲೆಯಲ್ಲಿನ ಗಿಜಾ ಪಿರಮಿಡ್ ಸಮೀಪದ ಮರಿಯುಟಿಯಾ ಸ್ಟ್ರೀಟ್‌ನಲ್ಲಿ ಈ ಸುಧಾರಿತ ಸ್ಫೋಟಕವನ್ನು ಇರಿಸಲಾಗಿತ್ತು. ಬಸ್ ಬರುತ್ತಿದ್ದಂತೆಯೇ ಬಾಂಬ್ ಸ್ಫೋಟಗೊಂಡಿದೆ.

ಬಸ್‌ನಲ್ಲಿ ವಿಯೆಟ್ನಾಂನ 14 ಪ್ರವಾಸಿಗರು, ಈಜಿಪ್ಟಿನ ಚಾಲಕ ಮತ್ತು ಪ್ರವಾಸಿ ಗೈಡ್ ಸೇರಿದಂತೆ ಒಟ್ಟು 16 ಮಂದಿ ಇದ್ದರು.
ಪ್ರದೇಶದಲ್ಲಿ ಕೂಡಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವ್ಯಾಪಕ ತಪಾಸಣೆ ನಡೆಸಿದ್ದಾರೆ.
ಸ್ಫೋಟದ ತೀವ್ರತೆಗೆ ಬಿಳಿ ಬಣ್ಣದ ಪ್ರವಾಸಿ ಬಸ್‌ನ ಕಿಟಕಿ ಬಾಗಿಲುಗಳು ಛಿದ್ರವಾಗಿವೆ. ಪ್ರಧಾನಿ ಮೊಸ್ತಾಫಾ ಮಡ್ಬೌಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪ್ರವಾಸಿಗರುನ್ನು ಭೇಟಿಯಾಗಿ ಧೈರ್ಯ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟಿನ ಪ್ರವಾಸೋದ್ಯಮ ಭಯೋತ್ಪಾದನೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷದ ಜುಲೈನಲ್ಲಿ ಜರ್ಮನಿಯ ಇಬ್ಬರು ಪ್ರವಾಸಿಗರನ್ನು ಶಂಕಿತ ಜಿಹಾದಿಗಳು ಇರಿದು ಕೊಲೆ ಮಾಡಿದ್ದರು.
2015ರ ಅಕ್ಟೋಬರ್‌ನಲ್ಲಿ ರಷ್ಯಾದ ಪ್ರವಾಸಿಗರಿದ್ದ ಪ್ರಯಾಣಿಕ ವಿಮಾನವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಸಿನಾಯ್ ದ್ವೀಪದ ಬಳಿ ಹೊಡೆದುರುಳಿಸಿದ್ದರು. ವಿಮಾನದಲ್ಲಿದ್ದ ಎಲ್ಲ 224 ಪ್ರವಾಸಿಗರು ಮೃತಪಟ್ಟಿದ್ದರು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications