Justin Trudeau: ಭಾರತ ವಿರೋಧಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ

ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿ ಸುದ್ದಿ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಖುರ್ಚಿ ಅಲುಗಾಡಿದೆ. ಸೋಮವಾರ ಕೆನಡಾದ ತನ್ನ ಲಿಬರಲ್ ಪಾರ್ಟಿ ಆಫ್ ಕೆನಡಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು ಕೆನಡಾ ಪ್ರಧಾನಿಯಾಗಿ 9 ವರ್ಷದ ಅವಧಿಯನ್ನು ಕೊನೆಗೊಳಿಸಿದ್ದಾರೆ. ಸ್ವಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ಬಳಿಕ ಈ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಒಟ್ಟಾವಾದ ರೈಡೋ ಕಾಟೇಜ್‌ನಲ್ಲಿರುವ ತಮ್ಮ ನಿವಾಸದ ಬಳಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ಪಕ್ಷದ ನಾಯಕತ್ವ ಮತ್ತು ಕೆನಡಾ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ಪಕ್ಷದ ನಾಯಕರು ಮತ್ತು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದೇನೆ. ಉತ್ತರಾಧಿಕಾರಿ ನೇಮಕವಾದ ಬಳಿಕ ರಾಜೀನಾಮೆ ಸಲ್ಲಿಸುತ್ತೇನೆ" ಎಂದು ಹೇಳಿದರು.

Justin trudeau resignation liberal party canada

2025ರ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು ಅದುವರೆಗೆ ಪಕ್ಷ ಮತ್ತು ಕೆನಡಾ ದೇಶವನ್ನು ಮುನ್ನಡೆಸಲು ಹೊಸ ಪ್ರಧಾನಿ ಹುಡುಕುವ ಪ್ರಕ್ರಿಯೆ ಆರಂಭಿಸಲು ಮಾರ್ಚ್ 24ರವರೆಗೆ ಸಂಸತ್ತನ್ನು ಮುಂದೂಡುತ್ತೇನೆ ಎಂದು ಹೇಳಿದರು.

ಕೆನಡಾದ ಶಾಸಕಾಂಗದ ನಿಯಮಗಳ ಪ್ರಕಾರ, ಪಕ್ಷದ ನಾಯಕ, ಪ್ರಧಾನಿ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಆಡಳಿತ ಪಕ್ಷವು ಬದಲೀ ನಾಯಕನ್ನು ಹುಡುಕಲು ನಾಯಕನ ರಾಜೀನಾಮೆ ದಿನಾಂಕದಿಂದ 90 ದಿನಗಳ ಸಮಯಾವಕಾಶ ಇರುತ್ತದೆ.

ತಾತ್ಕಾಲಿಕ ಪ್ರಧಾನಿಯಾಗಿ ಮುಂದುವರಿಕೆ

ಜಸ್ಟಿನ್ ಟ್ರುಡೋಗೆ ತಮ್ಮ ಪಕ್ಷದ ಸಹೋದ್ಯೋಗಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೆನಡಾದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 20ಕ್ಕಿಂತ ಮೊದಲು ಹೊಸ ಸರ್ಕಾರವನ್ನು ರಚನೆ ಮಾಡಬೇಕಿದೆ. ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ಜಸ್ಟಿನ್ ಟ್ರುಡೊ ತಾತ್ಕಾಲಿಕವಾಗಿ ಪ್ರಧಾನಿಯಾಗಿ ಮುಂದುವರಿಯುವ ಸಾಧ್ಯತೆ ಇದೆ. ಉತ್ತರಾಧಿಕಾರಿ ಆಯ್ಕೆ ಕೆಲವೇ ದಿನಗಳಲ್ಲಿ ಮುಗಿಯಬಹುದು ಅಥವಾ ಹಲವು ತಿಂಗಳ ಸಮಯ ತೆಗೆದುಕೊಳ್ಳಬಹುದು.

ಜಸ್ಟಿನ್ ಟ್ರುಡೋ ನಾಯಕತ್ವದಲ್ಲಿ ಕೆನಡಾದ ಆಂತರಿಕ ರಾಜಕೀಯ ಮತ್ತು ಭೌಗೋಳಿಕ ರಾಜಕೀಯದ ಮೇಲೆ ಭಾರಿ ಹೊಡೆತ ತಿಂದಿದೆ. ಕೆಲವು ತಿಂಗಳ ಹಿಂದಷ್ಟೇ ಅವರು ಪ್ರಮುಖ ಮಿತ್ರಪಕ್ಷದ ಬೆಂಬಲ ಕಳೆದುಕೊಂಡರರು. ಇದರಿಂದ ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧ ಅವಿಶ್ವಾಸ ಮತಕ್ಕೆ ಕಾರಣವಾಯಿತು. ಆದರೂ ಸಣ್ಣ ಪಕ್ಷಗಳ ಬೆಂಬಲ ಗಳಿಸಿ ಜಸ್ಟಿನ್ ಟ್ರುಡೋ ಸರ್ಕಾರವನ್ನು ಉಳಿಸಿಕೊಂಡಿದ್ದರು.

ಕೆನಡಾದ ಡಾಲರ್ ಮೌಲ್ಯ ಸೆಪ್ಟೆಂಬರ್ ತಿಂಗಳಿನಿಂದ ಇಳಿಮುಖವಾಗಿದೆ. ಟ್ರುಡೋ ರಾಜೀನಾಮೆ ಬೆನ್ನಲ್ಲೇ ಕೆನಡಾ ಡಾಲರ್ ಚೇತರಿಸಿಕೊಂಡಿದೆ. ನಿಧಾನಗತಿಯ ಬೆಳವಣಿಗೆ, ಹಣದುಬ್ಬರ, ಜಿಡಿಪಿ ಬೆಳವಣಿಗೆ ಕುಂಠಿತ, ಕುಸಿಯುತ್ತಿರುವ ವ್ಯಾಪಾರ ನೀತಿಗಳಿಂದ ಕೆನಡಾದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+