ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವೀಸಾದಡಿ ಇಂಗ್ಲೆಂಡ್-ಐರ್ಲೆಂಡ್ ಪ್ರವಾಸ ಭಾಗ್ಯ

|
Google Oneindia Kannada News

ಲಂಡನ್‌, ಅ. 7 : ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ಗೆ ತೆರಳಲು ಭಾರತೀಯ ಪ್ರವಾಸಿಗರು ಮತ್ತು ಉದ್ದಿಮೆದಾರರು ಇನ್ನು ಮುಂದೆ ಪ್ರತ್ಯೇಕ ವೀಸಾ ಪಡೆಯಬೇಕಿಲ್ಲ. ಮುಂದಿನ ನವೆಂಬರ್‌ನಿಂದ ಒಂದೇ ವೀಸಾದಡಿ ಎರಡೂ ದೇಶಗಳ ಪ್ರವಾಸ ಮಾಡಬಹುದು.

ಬ್ರಿಟನ್‌ ಗೃಹ ಕಾರ್ಯದರ್ಶಿ ಥೇರೆಸಾ ಮೇ ಮತ್ತು ಐರ್ಲೆಂಡ್‌ ನ್ಯಾಯಾಂಗ ಸಚಿವೆ ಫ್ರಾನ್ಸಿಸ್‌ ಫೀಡ್ಜ್‌ಗೆರಾಲ್ಡ್‌ ನಡುವೆ ಸೋಮವಾರ ಇಂಥದ್ದೊಂದು ಒಪ್ಪಂದ ನಡೆದಿದೆ. ಈ ರೀತಿಯ ವೀಸಾ ಜಾರಿಗೆ ಬಂದರೆ ಪ್ರತಿ ವರ್ಷ ಭೇಟಿ ನೀಡುವ ಭಾರತದ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರಿಗೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಎಂದೇ ಹೇಳಲಾಗಿದೆ.[ಅಮೆರಿಕ ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ]

visa

ಎರಡೂ ದೇಶಗಳು ತಮ್ಮ-ತಮ್ಮ ಮಾಹಿತಿಯನ್ನು ಹಂಚಿಕೊಂಡು ಪ್ರವಾಸಿಗರಿಗೆ ವೀಸಾ ಒದಗಿಸಿಕೊಡಲಿವೆ. ಇದೊಂದು ತರಹದ ಸಂಯುಕ್ತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಫ್ರಾನ್ಸಿಸ್‌ ಫೀಡ್ಜ್‌ಗೆರಾಲ್ಡ್‌, ಪ್ರವಾಸೋದ್ಯಮ ಮತ್ತು ಕೈಗಾರಿಕೆ ಬೆಳವಣಿಗೆ ನಮ್ಮ ಗುರಿ. ನಾವು ಪ್ರವಾಸಿಗರಿಗೆ ಮುಕ್ತ ಬಾಗಿಲು ತೆರೆದಿದ್ದೇವೆ. ಎರಡು ದೇಶಗಳು ಸದಾ ಹೊಂದಾಣಿಕೆಯಿಂದ ಸಾಗುತ್ತವೆ ಎಂದು ಹೇಳಿದ್ದಾರೆ.[ಅನಿವಾಸಿ ಭಾರತೀಯರಿಗೆ ನರೇಂದ್ರ ಮೋದಿ ಅಭಯ]

ಭಾರತ ಮತ್ತು ಚೀನಾ ಈ ಸೌಲಭ್ಯ ಪಡೆಯುವ ಮೊದಲ ದೇಶಗಳಾಗಿವೆ. ಮುಂದಿನ ದಿನಗಳಲ್ಲಿ ಉಳಿದ ಪ್ರಮುಖ ದೇಶಗಳಿಗೂ ಜಾಯಿಂಟ್‌ ವೀಸಾ ನೀಡುವ ಚಿಂತನೆಯಿದೆ ಎಂದು ಬ್ರಿಟನ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Indian tourists and business visitors will be able to avail of a new scheme from November which will enable them to visit Britain and Ireland on a single visa, issued by either country. An agreement to this effect was signed here on Monday by British Home secretary Theresa May and Ireland minister for Justice and Equality Frances Fitzgerald. A similar joint visa scheme is being rolled out for China from later this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X