ಮಾತಿನ ಮಾಹಯುದ್ಧಕ್ಕೆ ಸಿದ್ಧರಾದ ಡೊನಾಲ್ಡ್ ಟ್ರಂಪ್ & ಜೋ ಬೈಡನ್!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿದೆ. ಇನ್ನೂ 4 ತಿಂಗಳು ಟೈಂ ಇರುವಾಗಲೇ ಕಾವು ಜೋರಾಗಿದೆ. ಅತ್ತ ಹಾಲಿ ಅಧ್ಯಕ್ಷ ಜೋ ಬೈಡನ್ ಪರ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಪ್ರಚಾರ ಶುರು ಮಾಡಿದ್ದರೆ, ಇತ್ತ ಟ್ರಂಪ್ ಪರವು ಅವರ ಬೆಂಬಲಿಗರು ಕ್ಯಾಂಪೇನ್ ಶುರು ಮಾಡಿದ್ದಾರೆ. ಈ ಸಮಯದಲ್ಲಿ ಡೊನಾಲ್ಡ್ ಟ್ರಂಪ್ & ಜೋ ಬೈಡನ್ ಮುಖಾಮುಖಿ ಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ.
ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ಸಂಪ್ರದಾಯ ಇದೆ. ಯಾರೇ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧೆ ಮಾಡಿದರೂ, ಆ ಇಬ್ಬರನ್ನೂ ಒಂದೇ ವೇದಿಕೆ ಮೇಲೆ ನಿಲ್ಲಿಸಿ ಮಾತುಕತೆ ನಡೆಸಲಾಗುತ್ತದೆ. ಇದನ್ನು ನ್ಯೂಸ್ ಚಾನೆಲ್ ನೇರ ಪ್ರಸಾರ ಮಾಡಿ ಪ್ರಜೆಗಳಿಗೆ ಇಬ್ಬರೂ ಅಭ್ಯರ್ಥಿಗಳ ಬಂಡವಾಳ ತಿಳಿಸುತ್ತದೆ. ಹೀಗೆ ಅಮೆರಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳ ಮುಖಾಮುಖಿ ಚರ್ಚೆ ಕೂಡ ಜಗತ್ತಿನ ಗಮನವನ್ನ ಸೆಳೆಯುತ್ತದೆ. ಹೀಗಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಗಮನ ಸೆಳೆದಿದೆ.

2020ರಲ್ಲೂ ಇಬ್ಬರ ಮಧ್ಯೆ ಯುದ್ಧ!
ಹಾಲಿ ಅಧ್ಯಕ್ಷ ಜೋ ಬೈಡನ್ & ಅವರ ಪ್ರತಿಸ್ಪರ್ಧಿ ಆಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿ ಆಗಲಿದ್ದಾರೆ. ಅಟ್ಲಾಂಟಾದಲ್ಲಿ ನಡೆಯಲಿರುವ ಈ ಮುಖಾಮುಖಿ ಕಾರ್ಯಕ್ರಮ, ಜಗತ್ತಿನಾದ್ಯಂತ ಹೆಸರು ಪಡೆದಿರುವ ಸಿಎನ್‌ಎನ್ ಟಿವಿ ಚಾನೆಲ್ ಮೂಲಕ ಪ್ರಸಾರ ಆಗಲಿದೆ. 2024ರ ಅಧ್ಯಕ್ಷೀಯ ಚುನಾವಣೆ ಬಗ್ಗೆ ಚರ್ಚೆಯ ಮೊದಲ ನೇರಪ್ರಸಾರ ಕಾರ್ಯಕ್ರಮ ಇದಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ಸಮಯದಲ್ಲೂ ಬೈಡನ್ & ಟ್ರಂಪ್ ಮುಖಾಮುಖಿ ಆಗಿದ್ದರು.
2020ರಲ್ಲಿ ಫುಲ್ ಫೈಟಿಂಗ್ ಗುರೂ!
ಅಂದಹಾಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಎಂಟ್ರಿ ಕೊಟ್ಟ ನಂತರ ಭಾರಿ ತಲ್ಲಣ ಏರ್ಪಟ್ಟಿದೆ. ಯಾಕಂದ್ರೆ ಈಗಾಗಲೇ ಒಂದು ಬಾರಿ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಭಾರಿ ವಿವಾದ ಮಾಡಿಕೊಂಡಿದ್ದರು. ಹಾಗೇ ಕಳೆದ ಬಾರಿ ಬೈಡನ್ ಜೊತೆಗಿನ ಮುಖಾಮುಖಿ ಚರ್ಚೆ ವೇಳೆ ಕೂಡ ಸಿಕ್ಕಾಪಟ್ಟೆ ಕಿರಿಕ್ ಮಾಡಿಕೊಂಡಿದ್ದರು. ಹೀಗಾಗಿ, ಇದೀಗ 2024ರ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಇಬ್ಬರ ನಡುವೆ ಭಾರಿ ದೊಡ್ಡ ಚರ್ಚೆ ನಡೆಯುವ ನಿರೀಕ್ಷೆ ಮೂಡಿಸಿದೆ.
81 ವರ್ಷ VS 78 ವರ್ಷ!
ಅಮೆರಿಕ ಅಧ್ಯಕ್ಷರ ಹುದ್ದೆಗಾಗಿ 81 ವರ್ಷದ ಬೈಡನ್ ವಿರುದ್ಧ 78 ವರ್ಷದ ಟ್ರಂಪ್ ಅವರು ಸ್ಪರ್ಧಿಸಿದ್ದಾರೆ. ಗೆಲುವಿಗಾಗಿ ಅಭಿಪ್ರಾಯ ಸಂಗ್ರಹ ಅಗತ್ಯ ಇರುತ್ತೆ. 2024 ರ ನವೆಂಬರ್ 5ರಂದು ಚುನಾವಣೆ ಮುಗಿಯಲಿದ್ದು, ಕೆಲವೇ ಗಂಟೆಗಳಲ್ಲಿ ರಿಸಲ್ಟ್ ಹೊರಬೀಳುತ್ತದೆ. ಹೀಗಾಗಿ 2025ರ ಆರಂಭದಲ್ಲೇ ಅಮೆರಿಕದ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು ತಮ್ಮ ಕೆಲಸ ಶುರು ಮಾಡಲಿದ್ದಾರೆ. ಈ ಬಾರಿ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಪರ ಅಮೆರಿಕ ಮತದಾರರ ಒಲವು ಇದೆ ಎನ್ನಲಾಗುತ್ತಿದ್ದು, ಫಲಿತಾಂಶಕ್ಕಾಗಿ ಕಾಯಬೇಕಿದೆ.












Click it and Unblock the Notifications